ಬೆನ್ನು ನೋವು ಚಿಕಿತ್ಸೆಗಾಗಿ ನಟ ದರ್ಶನ್ ಜಯನಗರ ಅಪೋಲೋ ಆಸ್ಪತ್ರೆಗೆ ಹೋಗುವ ಬದಲು ಬಿಜಿಎಸ್ ಆಸ್ಪತ್ರೆಗೆ ಹೋಗಿದ್ದಾರೆ. ಈ ಬದಲಾವಣೆಯಿಂದ ಅಪೋಲೋ ಆಸ್ಪತ್ರೆಯ ಬಳಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಚಿಕಿತ್ಸೆಗೂ ಮುನ್ನ ಫಿಸಿಯೋಥೆರಪಿ ಮೂಲಕ ಗುಣಪಡಿಸುವ ಪ್ರಯತ್ನ ನಡೆಸಲಿದ್ದಾರೆ.
ಬೆಂಗಳೂರು (ನ.01): ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಬೆನ್ನು ನೋವು ಚಿಕಿತ್ಸೆಗೆ ಜಯನಗರ ಅಪೋಲೋ ಆಸ್ಪತ್ರೆಗೆ ಹೋಗುತ್ತಾರೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿತ್ತು. ಆದರೆ, ಇದೀಗ ದರ್ಶನ್ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಆದರೆ, ಜಯನಗರ ಅಪೋಲೋ ಆಸ್ಪತ್ರೆಯ ಬಳಿ ಬೆಳಗ್ಗೆಯಿಂದಲೂ ಕಾಯುತ್ತಿರುವ ದರ್ಶನ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಕೋರ್ಟ್‌ನಿಂದ 6 ವಾರಗಳ ಕಾಲ ಜಾಮೀನು ಪಡೆದು ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಮೊನ್ನೆ ಬಳ್ಳಾರಿ ಜೈಲಿನಿಂದ ಕುಂಟುತ್ತಾ ಬೆನ್ನು ನೋವಿನಿಂದ ಬಳಲುತ್ತಾ ಹೊರಬಂದ ದರ್ಶನ್‌ನನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಇದಾದ ನಂತರ ನಿನ್ನೆ ದರ್ಶನ್ ತಮ್ಮ ಪುತ್ರ ವಿನೀಶ್ ಅವರ ಬರ್ತಡೇ ಅನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಜೊತೆಗೆ, ದರ್ಶನ ಅವರ ಎಲ್ಲ ದುಬಾರಿ ಕಾರುಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ವಚ್ಛಗೊಳಿಸಿ ಪೂಜೆ ಮಾಡಲಾಯಿತು. ಇದಾದ ನಂತರ ಇಂದು ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದರು.
undefined
ಇದನ್ನೂ ಓದಿ: ಯಶ್ ಕನ್ನಡ ಪ್ರೇಮಕ್ಕೆ ಫ್ಯಾನ್ಸ್ ಫಿದಾ; ಹೊಸ ಕಾರಿನ ಮೇಲೆ ಕನ್ನಡದಲ್ಲೇ ...
ಇದರ ಬೆನ್ನಲ್ಲಿಯೇ ನಟ ದರ್ಶನ್ ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದಾಗಿ ಕರೆ ಮಾಡಿ ಮಾಹಿತಿ ನೀಡಿದ್ದರಂತೆ. ಶುಕ್ರವಾರ ಮಾಧ್ಯಾಹ್ನ 1 ಗಂಟೆ ಒಳಗಾಗಿ ಆಸ್ಪತ್ರೆಗೆ ಬರುವುದಾಗಿ =ಯೂ ತಿಳಿಸಿದ್ದರಂತೆ. ಆದರೆ, ಕೊನೇ ಕ್ಷಣದಲ್ಲಿ ಮನೆಯಲ್ಲಿ ನಿರ್ಧಾರ ಬದಲಿಸಿದ್ದಾರೆ. ಬೆನ್ನು ನೋವಿಗೆ ನೇರವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ಮೊದಲು ತಪಾಸಣೆ ಮಾಡಿಸಿಕೊಂಡು ಫಿಸಿಯೋಥೆರಫಿ ಸೇರಿದಂತೆ ಇತರೆ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸಬಹುದೇ ಎಂಬುದನ್ನು ಪ್ರಯತ್ನಿಸುತ್ತಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು ಎಂದಾದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವ್ಯಾವ ಪರೀಕ್ಷೆ ಮಾಡಿಸುತ್ತಾರೆ ದರ್ಶನ್: ನಟ ದರ್ಶನ್ ಮಧ್ಯಾಹ್ನ 2.30ರ ನಂತರ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಇಂದು ಹಲವು ವೈದ್ಯಕೀಯ ಪರೀಕ್ಷೆ ನಡೆಸಿ ನಾಳೆಯೊಳಗೆ ದರ್ಶನ್ ಕುಟುಂಬಸ್ಥರಿಗೆ ವರದಿಯನ್ನು ನೀಡಲಾಗುತ್ತದೆ. ದರ್ಶನ್ ಗೆ ತೀವ್ರ ಬೆನ್ನುನೋವು ಕಾಡ್ತಿರೋ ಹಿನ್ನೆಲೆಯಲ್ಲಿ ಇಂದು ಇಸಿಜಿ, ಸ್ಕ್ಯಾನಿಂಗ್, ಬಿಪಿ, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ ಟೆಸ್ಟ್ (LFT) ಪರೀಕ್ಷೆಗಳನ್ನು ಮಾಡಿಸುವ ಸಾಧ್ಯತೆಯಿದೆ. ಮೊದಲಿಗೆ ಫಿಸಿಯೋಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಮನವಿ ಮಾಡಲಾಗಿದೆ. ಫಿಸಿಯೋ ಥೆರಪಿಯಲ್ಲಿ ಬೆನ್ನುನೋವು ಗುಣವಾಗದಿದ್ದಲ್ಲಿ ಸರ್ಜರಿಗೆ ಕೊನೆ ಆಯ್ಕೆಯನ್ನು ಇಟ್ಟುಕೊಳ್ಳಲಾಗಿದೆ.
ದರ್ಶನ್‌ಗೆ ಫಿಸಿಯೋ ಥೆರಪಿನಾ..? ಅಥವಾ ಸರ್ಜರಿನಾ?
ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ಬಂದ ಹಿನ್ನೆಲೆಯಲ್ಲಿ ವೈದ್ಯರು ಅವರ ಈ ಹಿಂದಿನ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಈ ಹಿಂದಿನ ವರದಿಗಳ ಜೊತೆಗೆ ಈಗಿ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರೀಶೀಲಿಸಲು ಮತ್ತೊಮ್ಮೆ ಮೇಲೆ ತಿಳಿಸಲಾದ ಎಲ್ಲ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸರ್ಜರಿ ಅಗತ್ಯವಿಲ್ಲದಿದ್ದಲ್ಲಿ ಫಿಸಿಯೋಥೆರಪಿ, ಸ್ಟ್ರಕ್ಚರ್ ಆಕ್ಟಿವಿಟಿ ಮಾಡಿಸಲಾಗುತ್ತದೆ. ಫಿಸಿಯೋಥೆರಪಿ ನಮ್ಮ ಆಸ್ಪತ್ರೆ ಅಥವಾ ಬೇರೆ ಕಡೆ ಮಾಡಿಸಿಕೊಳ್ಳಲು ಅವಕಾಶವಿದೆ. ರೋಗಿ ಬೇರೆ ಕಡೆ ಫಿಸಿಯೋಥೆರಪಿ ಪಡೆಯೋದಿದ್ದರೆ ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಬಿಜಿಎಸ್ ಆಸ್ಪತ್ರೆ ನ್ಯೂರೋಲಾಜಿಸ್ಟ್ ಡಾ.ನವೀನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ದರ್ಶನ್ & ಫಿ-ಮೇಲ್’ ಪಿಎಚ್‌ಡಿ... ಪವಿತ್ರಾ ಶಪಥ: ಇದು ಬೇಲ್ ಮೇಲೆ ಹೊ ...
ದೀಪಾವಳಿ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ:
ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವುದಕ್ಕೆ ಹೋದ ಬೆನ್ನಲ್ಲಿಯೇ ಇಂದು ಆಸ್ಪತ್ರೆಯಲ್ಲಿ ದಾಖಲಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕಾರಣ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವೈದ್ಯರು ರಜೆಗೆ ತೆರಳಿದ್ದು, ಸೋಮವಾರದ ನಂತರ ವೈದ್ಯರು ಲಭ್ಯವಿರುತ್ತಾರೆ. ಇನ್ನು ಎಲ್ಲ ಪರೀಕ್ಷೆಗಳನ್ನು ಮಾಡಿಸಲು ಮತ್ತು ದರ್ಶನ್‌ಗೆ ಸೂಕ್ತ ಕಾಳಜಿಯನ್ನು ಮಾಡಲು ನರ್ಸಿಂಗ್ ಸಿಬ್ಬಂದಿ ಕೂಡ ಅಲಭ್ಯವಾಗಬಹುದು. ಈ ಹಿನ್ನೆಲೆಯಲ್ಲಿ ದರ್ಶನ್ ಇಂದು ತಪಾಸಣೆ ಮಾಡಿಸಿಕೊಂಡು ತೀವ್ರ ಬೆನ್ನು ನೀವು ಇದ್ದರೆ ಫಿಸಿಯೋಥೆರಫಿ ಮಾಡಿಸಿಕೊಂಡು ಮನೆಗೆ ಹೋಗಬಹುದು. ದೀಪಾವಳಿ ಹಬ್ಬ ಮುಗಿದ ನಂತರ ಸೋಮವಾರ ಆಸ್ಪತ್ರೆಗೆ ಹೋಗಿ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.