ನಾವು ಕನ್ನಡದ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಬೇಕು: ವಿಶ್ವ ಮಾನವ ಸಂದೇಶ ನೀಡಿದ ಡಿಕೆಶಿ

By Ravi Janekal  |  First Published Nov 1, 2024, 12:15 PM IST

ಇವತ್ತು ಕನ್ನಡ ರಾಜ್ಯೋತ್ಸವ ಸಂಭ್ರಮ. ಕನ್ನಡದ ಕೀರ್ತಿ ಪತಾಕೆ ಹಾರಿಸುವ ಕೆಲಸ ನಾವು ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.


ಬೆಂಗಳೂರು (ನ.1): ಇವತ್ತು ಕನ್ನಡ ರಾಜ್ಯೋತ್ಸವ ಸಂಭ್ರಮ. ಕನ್ನಡದ ಕೀರ್ತಿ ಪತಾಕೆ ಹಾರಿಸುವ ಕೆಲಸ ನಾವು ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.

ಇಂದು ಶಿಕ್ಷಣಾ ಹಾಗೂ ಸಾಕ್ಷರತಾ ಇಲಾಖೆಯಿಂದ ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು , ಮಾತಿನಲ್ಲಿ ಚೂಡಾಮಣಿಯಾಗು, ನೀ ಜ್ಯೋತಿಯಾಗು ಜಗಕೆಲ್ಲ ಎಂಬ ವಿಶ್ವಮಾನವ ಸಂದೇಶ ನೀಡಿದರು.

Tap to resize

Latest Videos

undefined

ನಮ್ಮ ಸರ್ಕಾರ ಸರ್ವೇ ಜನಾಃ ಸುಖಿನೋ ಭವಂತು ಎಂದು ಕೆಲಸ ಮಾಡುತ್ತಿದೆ: ಶಕ್ತಿ, ವಕ್ಫ್ ವಿವಾದ ಬಗ್ಗೆ ಹೆಬ್ಬಾಳ್ಕರ್ ಮಾತು

ಈ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವರ್ಷದಿಂದ ಕಡ್ಡಾಯವಾಗಿ ಎಲ್ಲಾ ಸಂಸ್ಥೆಗಳಲ್ಲಿ ಕನ್ನಡ ಬಾವುಟ ಹಾರಿಸಬೇಕು ಅಂತ ಸರ್ಕಾರ ಮನವಿ ಮಾಡಿದೆ. ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ತನ್ನದೇ ಆದ ಧ್ವಜ ಇಲ್ಲ, ಗೀತೆ ಇಲ್ಲ ಆದರೆ  ಕುವೆಂಪು ರಚಿಸಿರುವ ಗೀತೆ ನಮ್ಮ ನಾಡಗೀತೆಯಾಗಿರುವುದು ವಿಶೇಷ, ನಮ್ಮದೇ ಆದ ಬಾವುಟ ಇದೆ. ಕನ್ನಡ ನಮ್ಮ ತಾಯಿ ಭಾಷೆ, ಮನಸಿನ ಭಾಷೆ. ಕನ್ನಡಕ್ಕೆ ಎರಡು ಸಾವಿರ ವರ್ಷ ಇತಿಹಾಸವಿದೆ. ನಮ್ಮ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಕನ್ನಡಿಗ ಬರೀ ಭಾರತದಲ್ಲಿ ಒಂದಾಗಿಲ್ಲ, ವಿಶ್ವದಲ್ಲೇ ಒಂದಾಗಿದ್ದಾನೆ. ನೀವೆಲ್ಲರೂ ನಮ್ಮ ದೇಶದ ಆಸ್ತಿ. ನೀವೆಲ್ಲಾ ನಿಮ್ಮ ತಂದೆ ತಾಯಿ, ಗೌರವಗಳನ್ನು ಉಳಿಸಿಕೊಂಡು ಹೋಗ್ತಿರೋ ಹಾಗೆ. ಕನ್ನಡ ನಾಡು ನುಡಿ ಗೌರವ ವನ್ನು ಉಳಿಸಿಕೊಂಡು ಹೋಗಬೇಕು ಎಂದರು.

ಖರ್ಗೆ ಆಕ್ಷೇಪ: ಹಿರಿಯರು ನಮಗೆ ಬುದ್ಧ ಹೇಳ್ತಾರೆ:

ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ ಅವರ ಶಕ್ತಿ ಯೋಜನೆ ಸ್ಥಗತಿಗೊಳಿಸುವ  ಕುರಿತು ಹೇಳಿಕೆ ನೀಡಿದ್ದಾರೆನ್ನಲಾದ ವಿಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಕೈಸನ್ನೆ ಮಾಡಿದ್ದ ಡಿಕೆ ಶಿವಕುಮಾರ, ಆ ವಿಚಾರವನ್ನು ಇಂದು ಭಾಷಣದಲ್ಲಿ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿಗಳು, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಹಿರಿಯರು, ತಪ್ಪು ಮಾಡಿದಾಗ ಹಿರಿಯರು ನಮಗೆ ಬುದ್ಧಿ ಹೇಳ್ತಾರೆ. ಆ ಬುದ್ಧಿಯನ್ನು ಕೇಳಿಕೊಂಡು ತಿದ್ದಿಕೊಳ್ಳುವ ಕೆಲಸ ಮಾಡುತ್ತೇವೆ. ವಾಸ್ತವವಾಗಿ ನಾನು ಆ ರೀತಿ ಹೇಳಿಕೆ ನೀಡಿರಲಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಶಕ್ತಿ ಯೋಜನೆ ಮುಚ್ಚಿಬಿಡ್ತಾರೆ ಅಂತ ನೀವು ನನ್ನ ಭಾಷಣ ತಿರುಚಿದ್ದೀರಿ. ಕೆಲವರು ನನಗೆ ಕೆಲವು ಸಲಹೆಗಳನ್ನು ಹೇಳಿದ್ದಾರೆ ಅಂತಾ ಹೇಳಿದ್ದೆ. ಯಾವ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆ ಇಲ್ಲ, ಮುಚ್ಚುವ ಪ್ರಶ್ನೆ ಇಲ್ಲ ಎಂದರು.

ಖರ್ಗೆಯವರು ನಮಗ ಸಲಹೆ ಕೊಡಲಿಲ್ಲ, ಕಾರ್ಯಕರ್ತರಿಗೆ ಸಂದೇಶ ಕೊಟ್ಟಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಆದಾಗಿಂದ ಸಣ್ಣ ಘಟನೆ ನಡೆದಿರೋದು ನೋಡಿದ್ದೀರಾ? ಆ ರೀತಿ ನೋಡಿಕೊಂಡು ಹೋಗ್ತಿದ್ದೀವಿ. ಖರ್ಗೆಯವರು ಕೆಲ ಕಾರ್ಯಕರ್ತರಿಗೆ ಸಂದೇಶ ಕೊಟ್ಟಿದ್ದಾರೆ. ಖರ್ಗೆಯವರು  ರಾಜ್ಯ ರಾಜಕಾರಣದಲ್ಲಾಗಲಿ, ಆಂತರಿಕ ವಿಚಾರಗಳಲ್ಲಾಗಲಿ ಯಾವುದರಲ್ಲೂ ಮಧ್ಯಪ್ರವೇಶ ಮಾಡಿಲ್ಲ. ಹಿರಿಯರಾಗಿ ಅವರು ನಮಗೆ ರಾಷ್ಟ್ರದ ವ್ಯಾಪ್ತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಒಳ ಮೀಸಲಾತಿ ಪಾಲಿಸಿ ವಿಚಾರದಲ್ಲಿ ಒಂದೊಂದು ರಾಜ್ಯ ಒಂದೊಂದು ನಡೆ ಇಡ್ತಿದೆ. ಇದರಲ್ಲಿ ನಾವು ಮಧ್ಯೆ ಬರಲ್ಲ, ಸ್ಥಳೀಯವಾಗಿ ಏನಿದೆಯೋ ಅದರಂತೆ ಮಾಡಿಕೊಂಡು ಹೋಗಿ ಅಂತ ಖರ್ಗೆಯವರು ಮಾರ್ಮಿಕವಾಗಿ ಹೇಳಿದ್ದಾರೆ ಎಂದರು.

ವಿಪಕ್ಷಗಳ ವಿರುದ್ಧ ಕಿಡಿ:

ಕೆಲವರು ಟಿಕೆಟ್ ತಾವೇ ಖರೀದಿಸಿ ಬರೋರು ಇದ್ದಾರೆ. ಅದರ ಬಗ್ಗೆ ಚರ್ಚೆ ಮಾಡೋಣ ಅಂದಿದ್ದೇನೆ. ವಿಪಕ್ಷಗಳಿಗೆ ರಾಜಕಾರಣವೇ ಮುಖ್ಯ. ಅತ್ತೆ-ಸೊಸೆ, ಗಂಡ-ಹೆಂಡತಿ ಮಧ್ಯೆ ತಂದು ಹಾಕೋ ಕೆಲಸ ಮಾಡ್ತಾರೆ. ಬಿಜೆಪಿಯವರಿಗಂತೂ ನಮ್ಮಂತೆ ಜನಪರ ಕೆಲಸ ಎಲ್ಲ ಮಾಡೊಕೆ ಆಗೊಲ್ಲ. ನಾವು ಮಾಡಿದ್ರೂ ಅದನ್ನು ಸಹಿಸಿಕೊಳ್ಳೋಕೂ ಆಗುತ್ತಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ, ಕಿತ್ತಾಟ, ಅಪ್ಪ ಮಕ್ಕಳು, ಅಣ್ಣ ತಮ್ಮ ಜಗಳ, ಅತ್ತೆ ಸೊಸೆ ಜಗಳ ತರೋದೇ ಅವರ ಕೆಲಸ. ಬಿಜೆಪಿಯವರು ಎಷ್ಟೊ ಮನೆಗಳನ್ನು ಒಡೆದು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ಅಷ್ಟೇ ಅಲ್ಲ, ಮುಜುರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ: ಸಂತೋಷ್ ಲಾಡ್

ಯತ್ನಾಳ್‌ಗೆ ಟಾಂಗ್:

ಇದೇ ವೇಳೆ ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸಿ ಎಂದು ಮೋದಿಗೆ ಯತ್ನಾಳ್ ಪತ್ರ ಬರೆದ ವಿಚಾರ ಸಂಬಂಧ ಮಾತನಾಡಿದ ಉಪಮುಖ್ಯಮಂತ್ರಿಗಳು, ಕೆಲವರು ಹುಚ್ಚರು ಇರ್ತಾರೆ, ಅವರ ಬಗ್ಗೆ ನಾನು ಮಾತಾಡಲು ಇಷ್ಟಪಡಲ್ಲ. ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ, ಅವರ ಮೆದುಳು ಖಾಲಿಯಾಗಿದೆ ಎಂದು ಶಾಸಕ ಯತ್ನಾಳ್ ಗೆ ತಿರುಗೇಟು ನೀಡಿದರು.

click me!