ಮಹಿಳೆಯರ ಮೇಲೆರಗಿ ಅತ್ಯಾಚಾರ ಎಸಗುವ ಕಾಮುಕರಿಗೆ ತಕ್ಕ ಶಾಸ್ತಿ ನೀಡಲು ಕಲಬುರಗಿಯ ಹೈಸ್ಕೂಲ್ ಬಾಲೆಯೊಬ್ಬಳು ಹೊಸ ನಮೂನೆಯ ಚಪ್ಪಲಿ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾಳೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ನ.27): ಮಹಿಳೆಯರ ಮೇಲೆರಗಿ ಅತ್ಯಾಚಾರ ಎಸಗುವ ಕಾಮುಕರಿಗೆ ತಕ್ಕ ಶಾಸ್ತಿ ನೀಡಲು ಕಲಬುರಗಿಯ ಹೈಸ್ಕೂಲ್ ಬಾಲೆಯೊಬ್ಬಳು ಹೊಸ ನಮೂನೆಯ ಚಪ್ಪಲಿ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾಳೆ. ಇಲ್ಲಿನ ಎಸ್‌ಆರ್‌ಎನ್ ಮೇಹ್ತಾ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷೀ ಬಿರಾದಾರ್ ಮಹಿಳೆಯರ ಸುರಕ್ಷತೆಗಾಗಿಯೇ ಸಿದ್ಧಪಡಿಸಿರುವ ‘ಆ್ಯಂಟಿ ರೇಪ್ ಫುಟ್ ವೇರ್’ ಮಾದರಿ ಶೋಧನೆ ದೇಶ-ವಿದೇಶಗಳಲ್ಲೂ ಈಗ ಗಮನ ಸೆಳೆಯಲಾರಂಭಿಸಿದೆ.
ವಿದ್ಯುತ್ ಶಾಕ್: ಈ ಹೊಸ ಬಗೆಯ ‘ಚಪ್ಪಲಿ ’ಧರಿಸಿದ ಮಹಿಳೆಯ ಮೇಲೆ ಅತ್ಯಾಚಾರಿ ಎರಗಿದರೆ, ಚಪ್ಪಲಿಯ ಹೆಬ್ಬೆರಳ ಜಾಗದಲ್ಲಿ ಚಿಕ್ಕದಾದ ಗುಂಡಿ ಇದ್ದು, ಮಹಿಳೆ ತನ್ನ ಕಾಲ ಬೆರಳಿನಿಂದಲೇ ಗುಂಡಿ ಅದುಮಿದರೆ ಸಾಕು, ಆಕೆಯ ಚಪ್ಪಲಿಯಿಂದ 0.5 ಆಂಪಿಯರ್‌ನಷ್ಟು ವಿದ್ಯುಚ್ಛಕ್ತಿ ಉತ್ಪತ್ತಿಯಾಗಿ, ಹೊರಹೊಮ್ಮುತ್ತದೆ. ಹೀಗೆ ಮಹಿಳೆಯ ಮೆಲರಗಿದ ಅತ್ಯಾಚಾರಿಗೆ ಆ ವೇಳೆಗೆ ವಿದ್ಯುತ್ ಶಾಕ್‌ನ ಅನುಭವವಾಗುತ್ತದೆ. ಅಷ್ಟರಲ್ಲಾಗಲೇ ದಾಳಿಗೆ ಸಿಲುಕಿದ ಮಹಿಳೆ ಅಲ್ಲಿಂದ ಪಾರಾಗಬಹುದಾಗಿದೆ.
ಖರ್ಗೆ ತವರು ಕಲಬುರಗಿಯಲ್ಲಿ ಈ ಬಾರಿ ಕೈ- ಕಮಲ ಜಂಗಿ ಕುಸ್ತಿ
ತಯಾರಿ ಹೇಗೆ: ಈ ಸ್ಮಾರ್ಟ್ ಫುಟ್‌ವೇರ್ ಯಾವುದೇ ತರಹದ ಸಂಕೀರ್ಣ ವಿದ್ಯುಚ್ಛಕ್ತಿ ಉಪಕರಣ, ಸರ್ಕಿಟ್‌ಅನ್ನು ಒಳಗೊಂಡಿಲ್ಲ. ಇಲ್ಲಿ ಬಳಸಲಾಗಿರುವ ತಾಂತ್ರಿಕತೆ, ಉಪಕರಣ ಎಲ್ಲವೂ ಈ ಚಪ್ಪಲಿ ಬಳಸುವ ಮಹಿಳೆಯರ ಸುರಕ್ಷತೆ ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿಪಡಿಸಲಾಗಿದೆ. ಬ್ಯಾಟರಿ, ಸೆಲ್ ಬಳಸಲಾಗಿದ್ದು, ಮಹಿಳೆ ಈ ಚಪ್ಪಲಿಗಳನ್ನು ಧರಿಸಿ ನಡೆಯುವಾಗಲೇ ಇದರ ಬ್ಯಾಟರಿಗಳು ಚಾರ್ಜ್ ಆಗುವಂತೆ (ಕೆಮಿಕಲ್ ಎನರ್ಜಿಯಿಂದ ಇಲೆಕ್ಟ್ರಿಕಲ್ ಎನರ್ಜಿ ಪರಿವರ್ತಿಸುವ ತಂತ್ರಜ್ಞಾನ) ರೂಪಿಸಲಾಗಿದೆ.
ಬೆಳ್ಳಿ ಪದಕ: ಗೋವಾದಲ್ಲಿ ನಡೆದ ಇಂಡಿಯಾ ಇಂಟರ್ ನ್ಯಾಷನಲ್ ಇನ್‌ವೆನ್‌ಷನ್ ಮತ್ತು ಇನ್ನೋವೇಷನ್ ಎಕ್ಸ್‌ಪೋ- 2022ರಲ್ಲಿ ವಿಜಯಲಕ್ಷ್ಮೇಯ ಈ ಹೊಸ ಬಗೆಯ ‘ಚಪ್ಪಲಿ ಮಾದರಿ’ ಬೆಳ್ಳಿ ಪದಕಕ್ಕೆ ಭಾಜನವಾಗಿದ್ದಲ್ಲದೆ, ಫೆಬ್ರವರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಮೇಳ-2023ಕ್ಕೂ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್
ಪೋಷಕರು, ಪೊಲೀಸರಿಗೆ ಸಂದೇಶ, ಲೈವ್‌ಲೊಕೇಷನ್ ರವಾನೆ ಮಾಡುತ್ತೆ!: ಈ ಸ್ಮಾರ್ಟ್ ಶೂನಲ್ಲಿ ‘ಬ್ಲಿಂಕ್ ಆ್ಯಪ್ ಲಿಂಕ್’ ತಂತ್ರಜ್ಞಾನ ಅಳವಡಿಸಲಾಗಿದ್ದು, ತೊಂದರೆಯಲ್ಲಿರುವ ಮಹಿಳೆ ಹೆಬ್ಬೆರಳ ಗುಂಡಿ ಅದುಮಿದಾಕ್ಷಣವೇ ಕರೆಂಟ್ ಉತ್ಪತ್ತಿಯಾಗುವು ದರ ಜೊತೆಗೇ ಆಕೆ ಇರುವ ಲೈವ್ ಲೊಕೇಷನ್, ರಕ್ಷಣೆಗಾಗಿ ಕೋರುವ ಸಂದೇಶ ಸದರಿ ಆ್ಯಪ್‌ನಲ್ಲಿ ಮೊದಲೇ ದಾಖಲಿಸಿರುವ ಸಂಪರ್ಕ ಸಂಖ್ಯೆಗಳೆಲ್ಲದಕ್ಕೂ ರವಾನಿಸಲ್ಪಡುತ್ತದೆ.