ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವು ಸಮಾಜವನ್ನು ದುರ್ಬಲಗೊಳಿಸಬೇಕು, ವಾತಾವರಣ ಭಯಭೀತಗೊಳಿಸಬೇಕು ಎನ್ನುವ ಪ್ರಯತ್ನ ಇದಾಗಿತ್ತು. ಇದರ ವಿಫಲ ಪ್ರಯತ್ನ ನಡೆದಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಉಡುಪಿ (ನ.26): ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವು ಸಮಾಜವನ್ನು ದುರ್ಬಲಗೊಳಿಸಬೇಕು, ವಾತಾವರಣ ಭಯಭೀತಗೊಳಿಸಬೇಕು ಎನ್ನುವ ಪ್ರಯತ್ನ ಇದಾಗಿತ್ತು. ಇದರ ವಿಫಲ ಪ್ರಯತ್ನ ನಡೆದಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಶನಿವಾರ ಕೋಟದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಶಾಂತಿ ಕಾಪಾಡಲು, ವಿಶ್ವಾಸ ಮೂಡಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಇದನ್ನು ಯಾವ ವ್ಯಕ್ತಿ ಮಾಡಿದೆ ಆ ಸಮಾಜ ಕೂಡ ಈ ಕೃತ್ಯವನ್ನು ಖಂಡಿಸಬೇಕು. ಇಲ್ಲದೇ ಇದ್ದಲ್ಲಿ ಇದರ ಅನುಮಾನ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತದೆ ಎಂದರು.
ಕರಾವಳಿಯಲ್ಲಿ ಎನ್.ಐ.ಎ ಕಚೇರಿ ತೆರೆಯುವ ವಿಚಾರ: ಎನ್.ಐ.ಎ ಕೇಂದ್ರ ಸ್ಥಾಪನೆ ಮಾಡಲು ಎಲ್ಲಾ ಪ್ರಕ್ರಿಯೆ ಆಗಿದೆ. ಮಂಗಳೂರನ್ನು ಕೇಂದ್ರೀಕೃತವಾಗಿ ಈ ಪ್ರಕ್ರಿಯೆ ನಡೆಯಬೇಕು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಪ್ರಕ್ರಿಯೆ ನಡೆಸಿದೆ ಎಂದರು. ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು ಎನ್ನುವ ಒಲವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ನಮ್ಮ ಸರಕಾರ ಇದಕ್ಕೆ ಬದ್ಧವಾಗಿದ್ದು, ಮುಂದಿನ ಅಧಿವೇಶನದ ಸಂದರ್ಭ ಕ್ಯಾಬಿನೆಟಿನಲ್ಲಿ ಚರ್ಚೆ ಮಾಡುತ್ತೇವೆ. ಕರ್ನಾಟಕದಲ್ಲಿ ಸಮಾನ ನಾಗರಿಕತೆ ಸಂಹಿತೆ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
Udupi: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ವೈಭವದ ಯಕ್ಷೋತ್ಸವ
ಮುಖ್ಯಮಂತ್ರಿಗಳ ನಿಲುವನ್ನು ಸ್ವಾಗತಿಸುತ್ತೇವೆ, ಬೆಂಬಲಿಸುತ್ತೇವೆ. ಇದರಲ್ಲಿ ಯಾಕೆ ಬೇಕು ಎನ್ನುವ ಚರ್ಚೆ ಇಲ್ಲ. ಎಲ್ಲರೂ ಒಂದಾಗಿ ಯೋಚನೆ ಮಾಡಬೇಕು ಎಲ್ಲರೂ ಒಂದಾಗಿ ಚಟುವಟಿಕೆ ಮಾಡಬೇಕು. ಪ್ರತ್ಯೇಕತೆಗಳು ಎಲ್ಲೂ ಕೂಡ ನಿರ್ಮಾಣ ಆಗಬಾರದು. ಏಕರೂಪದ ಕಾನೂನು ಜಾರಿಗೆ ತರುತ್ತೇವೆ ಅಂತ ಬಿಜೆಪಿ ಹಲವು ವರ್ಷಗಳಿಂದ ಪ್ರಣಾಳಿಕೆಯಲ್ಲಿ ಹೇಳಿದೆ. ಇದನ್ನು ಜಾರಿ ತರಲು ಬೇರೆ ರಾಜ್ಯಗಳು ಈಗಾಗಲೇ ಮುಂದಾಗಿದೆ, ಕರ್ನಾಟಕ ರಾಜ್ಯ ಕೂಡ ಮುಂದಾಗುತ್ತಿದೆ ಎಂದರು.
ಬೆಳಗಾವಿಯಲ್ಲಿ ಕಿಡಿಗೇಡಿಗಳ ದಾಂದಲೆ ವಿಚಾರ: ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲು, ಮುಖ್ಯಮಂತ್ರಿಗಳು ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ನೆಲ ಜಲ ಭಾಷೆ ವಿಚಾರವಾಗಿ ರಾಜಕೀಯ ಇಲ್ಲ. ನಮ್ಮ ರಾಜ್ಯದ ನೆಲ ಜಲದ ಸಂಸ್ಕೃತಿಯನ್ನು ಭೂಭಾಗದ ಗಡಿಪ್ರದೇಶವನ್ನು ಉಳಿಸಲು, ನಮ್ಮತನವನ್ನು ಗಟ್ಟಿ ಮಾಡುವುದಕ್ಕೆ ನಾವೆಲ್ಲರೂ ಕೂಡ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಯಾರೋ ಬರೆದಿದ್ದಾರೆ ಅಂತ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳಿಗೆ ಗೌರವ ಕೊಡಬೇಕಾಗಿರುವುದು ಪ್ರಜಾಪ್ರಭುತ್ವದ ಕರ್ತವ್ಯ. ಇದನ್ನು ಪುಂಡರು ಮಾಡುತ್ತಿದ್ದಾರೆ ಅಂದರೆ ಕಾನೂನಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
Udupi: ಮಹಿಳೆಯ ದೇಹದಿಂದ ವಿಶ್ವದ ಅತಿ ದೊಡ್ಡ ಕಿಡ್ನಿ ಸ್ಟೋನ್ ಹೊರ ತೆಗೆದ ಮಣಿಪಾಲದ ವೈದ್ಯರು
ರಾಜ್ಯದಲ್ಲಿ ಚಿಲುಮೆ ಕೋಲಾಹಲ ವಿಚಾರ: ಈಗಾಗಲೇ ಇದನ್ನು ತನಿಖೆಗೆ ಒಳಪಡಿಸಿದ್ದೇವೆ, ತನಿಖೆ ಪ್ರಗತಿಯಲ್ಲಿದೆ ಕೆಲವು ಜನರ ಬಂಧನ ಆಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕೆ ಯಾವುದೇ ಸಂಸ್ಥೆ ಮುಂದಾಗುವ ಪ್ರಶ್ನೆ ಇಲ್ಲ. ನಮ್ಮ ಸರಕಾರ ಅದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದವರು ನುಡಿದರು.