ಇಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿರುವ ಹಿನ್ನೆಲೆ ಟೀಂ ಇಂಡಿಯಾ ಗೆಲುವಿಗೆ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಹುಬ್ಬಳ್ಳಿಯ ಕ್ರೀಡಾಭಿಮಾನಿಗಳು.
ಹುಬ್ಬಳ್ಳಿ (ಅ.14): ಇಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿರುವ ಹಿನ್ನೆಲೆ ಟೀಂ ಇಂಡಿಯಾ ಗೆಲುವಿಗೆ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಹುಬ್ಬಳ್ಳಿಯ ಕ್ರೀಡಾಭಿಮಾನಿಗಳು.
ಮರಾಠಾಗಲ್ಲಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಸಲ್ಲಿಸಿದರು. ಬಳಿಕ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬರಲಿ ಎಂದು ಪ್ರಾರ್ಥನೆ ಮಾಡಿ. ಆಂಜನೇಯನಿಗೆ ಬೆಳ್ಳಿಗದೆ ಸಮರ್ಪಿಸಿದ ಅಭಿಮಾನಿಗಳು. ಈ ವೇಳೆ ಮೆನ್ ಇನ್ ಬ್ಲೂ, ತ್ರಿವರ್ಣ ಧ್ವಜ ಹಿಡಿದು. ಭಾರತ ಕ್ರಿಕೆಟ್ ತಂಡಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದ ಕ್ರಿಕೆಟ್ ಅಭಿಮಾನಿಗಳು.
ICC World Cup 2023: ಸೆವೆನ್‌ಸ್ಟಾರ್ ಭಾರತಕ್ಕೆ 8-0 ಧ್ಯಾನ..! ಇಂದು ಬದ್ಧ ಎದುರಾಳಿಗಳ ಕದನ
ಟೀಂ ಇಂಡಿಯಾ ಗೆಲುವಿಗೆ ವಿದ್ಯಾರ್ಥಿಗಳಿಂದಲೂ ವಿಶೇಷ ಪೂಜೆ:
ಬಾಗಲಕೋಟೆ: ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಈಗಲೇ ಕ್ರೀಡಾಭಿಮಾನಿಗಳಿಗೆ ಉಸಿರು ಬಿಗಿಹಿಡಿಯುವಂತೆ ಮಾಡಿದೆ. ಇದುವರೆಗೆ ಪಾಕಿಸ್ತಾನದ ಎದುರು ಗೆಲ್ಲುತ್ತಲೇ ಬಂದಿರುವ ಟೀಂ ಇಂಡಿಯಾ ಈ ಬಾರಿಯೂ ವಿಜಯ ಪತಾಕೆ ಹಾರಿಸಲಿ ದೇವರು ಮೊರೆ ಹೋದ ವಿದ್ಯಾರ್ಥಿಗಳು.
ನಗರದ ಪ್ರಾರ್ಥನಾ ಪಿಯು ಕಾಲೇಜು ವಿದ್ಯಾರ್ಥಿಗಳು ಸರಸ್ವತಿ ದೇವಿ, ವಿಘ್ನವಿನಾಶಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ವಿಶ್ವಕಪ್ ನಲ್ಲಿ 8 ನೇ ಬಾರಿಯೂ ಟೀಮ್ ಇಂಡಿಯಾಕ್ಕೆ ಗೆಲುವಾಗಲೆಂದು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಳಿಕ ನೂರಾರು ವಿದ್ಯಾರ್ಥಿಗಳಿಂದ ಗೆದ್ದು ಬಾ ಇಂಡಿಯಾ ಎಂದು ಘೋಷಣೆ.
ಪಾಕ್ ವಿರುದ್ಧ ಶುಭ್‌ಮನ್ ಗಿಲ್ ಆಡ್ತಾರಾ? ಬಿಗ್ ಅಪ್‌ಡೇಟ್ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮ
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಇದ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆಯೂ ಪಾಕಿಸ್ತಾನ ಎದುರು ಮುಗ್ಗರಿಸಿಲ್ಲ. 1992ರಿಂದ 2019ರ ವರೆಗೂ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, ಏಳೂ ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದೆ.