ಒಕ್ಕಲಿಗ ಸಮುದಾಯದವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪ ಹಿನ್ನೆಲೆ ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ವತಿಯಿಂದ ಪ್ರೊ.ಕೆಎಸ್ ಭಗವಾನ್ ನಿವಾಸದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಮೈಸೂರು (ಅ.14): ಒಕ್ಕಲಿಗ ಸಮುದಾಯದವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪ ಹಿನ್ನೆಲೆ ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ವತಿಯಿಂದ ಪ್ರೊ.ಕೆಎಸ್ ಭಗವಾನ್ ನಿವಾಸದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಮೈಸೂರಿನ ಕುವೆಂಪು ನಗರದಲ್ಲಿನ ಭಗವಾನ್ ನಿವಾಸ. ಭಗವಾನ್ ಮನೆ ಮುಂದೆ ಕಡಲೆಪುರಿ ಸುರಿದು ಗಂಧದ ಕಡ್ಡಿ ಕರ್ಪೂರ ಹಚ್ಚಿ ಪ್ರತಿಭಟನೆ ನಡೆಸಿರುವ ಒಕ್ಕಲಿಗರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಮನೆಯೊಳಗೆ ಕುಳಿತಿರುವ ಪ್ರೊ.ಕೆಎಸ್ ಭಗವಾನ್. ಆದರೆ ಭಗವಾನರೊಂದಿಗೆ ಮಾತನಾಡಲು ಅವಕಾಶ ಕೊಡುವಂತೆ ಪೊಲೀಸರೊಂದಿಗೆ ಒಕ್ಕಲಿಗರು ವಾಗ್ದಾವ. ಒಕ್ಕಲಿಗರನ್ನು ಸಂಸ್ಕೃತಿ ಹೀನರು ಎಂದಿರುವ ಭಗವಾನ್. ನಮಗೆ ಸಂಸ್ಕೃತಿ ಪಾಠ ಮಾಡುವಂತೆ ಪ್ರತಿಭಟನಕಾರರು ಪಟ್ಟು. ಭಗವಾನರಿಂದ ಸಂಸ್ಕೃತಿ ಪಾಠ ಕಲಿಯುವವರೆ ಇಲ್ಲಿಂದ ಕದಲಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಒಕ್ಕಲಿಗರು.
undefined
ಒಕ್ಕಲಿಗರು ಸಂಸ್ಕೃತಿ ಹೀನರು ಎಂದಿದ್ರು ಕುವೆಂಪು: ಪ್ರೊ.ಕೆ.ಎಸ್. ಭಗವಾನ್
ಭಗವಾನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದೆ. ಪೊಲೀಸರು ಪ್ರತಿಭಟನಕಾರರನ್ನು ಅರ್ಧದಲ್ಲೇ ತಡೆದಿದ್ದರಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಪೊಲೀಸರು. ವಶಕ್ಕೆ ಪಡೆಯುವ ವೇಳೆ ಪ್ರತಿಭಟನಾಕಾರನೊಬ್ಬನಿಗೆ ತಲೆಗೆ ಪೆಟ್ಟುಬಿದ್ದ ಘಟನೆ ನಡೆದಿದೆ. ಗಿರಿ ಎಂಬುವ ವ್ಯಕ್ತಿಯ ಹಣೆಗೆ ಪೆಟ್ಟು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಪ್ರೊ.ಕೆಎಸ್ ಭಗವಾನ್ ಮನೆ ಎದುರು ಬಿಗಿ ಪೊಲೀಸ್ ಭದ್ರತೆ. ಮನೆಮುಂದೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಸ್ಥಳದಲ್ಲೇ ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿ ನೂರಕ್ಕೂ ಅಧಿಕ ಪೊಲೀಸರು ನಿಯೋಜನೆ.
ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಸಮಾರಂಭದಲ್ಲಿ ಪ್ರೊ.ಕೆಎಸ್ ಭಾಗವನ್ ಮಾತನಾಡಿ,ಕುವೆಂಪು ಅವರ ಹೇಳಿಕೆ ಹಿನ್ನೆಲೆ ಇಟ್ಟುಕೊಂಡು ಒಕ್ಕಲಿಗರು ಸಂಸ್ಕೃತಿಹೀನರು ಎಂದಿದ್ದರು.
‘ನಾವು ಸನಾತನಿಗಳಲ್ಲ’ ಜಾಗೃತಿ ಕಾರ್ಯಕ್ರಮ ಶೀಘ್ರ: ಕೆ.ಎಸ್.ಭಗವಾನ್