ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!

By Suvarna NewsFirst Published Mar 18, 2020, 11:41 AM IST
Highlights

ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ಮಾಡಿದೆ. ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಹೀಗೊಂದು ವೇಳೆ ನಿರ್ಬಂಧ ಹೇರಿದರೂ ವೈದ್ಯರು, ಪೊಲೀಸರು ಹಾಗೂ ಪತ್ರಕರ್ತರಿಗೆ ಓಡಾಡಲು ಅವಕಾಶವಿರಲಿದೆ.

ಬೆಂಗಳೂರು(ಮಾ.18): ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ಮಾಡಿದೆ. ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಹೀಗೊಂದು ವೇಳೆ ನಿರ್ಬಂಧ ಹೇರಿದರೂ ವೈದ್ಯರು, ಪೊಲೀಸರು ಹಾಗೂ ಪತ್ರಕರ್ತರಿಗೆ ಓಡಾಡಲು ಅವಕಾಶವಿರಲಿದೆ.

ಬೆಂಗಳೂರು ನಗರದ ಜನತೆ ಮನೆಯಿಂದ ಹೊರ ಬರದಂತೆ ನಿರ್ಬಂಧ ಹೇರುವ ಸಾಧ್ಯತೆ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ನಿರ್ಬಂಧ ಹೇರುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಆದರೆ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.

ಭಾರತೀಯ ಸೇನೆಯಲ್ಲಿ ಮೊದಲ ಕೊರೋನಾ ಸೋಂಕು ದೃಢ!

ವೈದ್ಯರು, ಪೊಲೀಸ್ ಹಾಗೂ ಪತ್ರಕರ್ತರಿಗೆ ಮಾತ್ರ ಕರ್ತವ್ಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಲು ಅವಕಾಶ ನೀಡುವ ಸಾಧ್ಯತೆ ಇದೆ. ಬೇರೆ ಬೇರೆ ವೃತ್ತಿ ನಿರತರು ಹಾಗೂ ಸಾಮಾನ್ಯ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದಕ್ಕೆ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆದಿದೆ.

1 ತಿಂಗಳ ವಿಶೇಷ ಪಡಿತರ ವ್ಯವಸ್ಥೆ

ದುಡಿಯವ ವರ್ಗ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಒಂದು ತಿಂಗಳ ವಿಶೇಷ ಪಡಿತರ ವ್ಯವಸ್ಥೆ ಮಾಡುವ ಬಗ್ಗೆಯೂ ಯೋಚಿಸಲಾಗಿದೆ. ನಿತ್ಯದ ಜೀವನೋಪಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ

ರಾಜ್ಯದಲ್ಲಿ ಕೊರೋನಾ ವೈರಸ್ 2ನೇ ಹಂತದಲ್ಲಿ ಹರಡುವ ಆತಂಕವಿದ್ದು, 2 ನೇ ಹಂತ ನಿಯಂತ್ರಿಸಲು ಸರ್ಕಾರಕ್ಕೆ ಕಷ್ಟವಾಗಲಿದೆ ಎಂಬ ಹಿನ್ನೆಲೆಯಲ್ಲಿ ಇಂತ ನಿರ್ಧಾರದ ಬಗ್ಗೆ ಆಲೋಚಿಸಲಾಗಿದೆ.

ಆದರೆ, ಸಂಪೂರ್ಣ ಚಟುವಟಿಕೆ ಸ್ಥಗಿತಗೊಳಿಸಲು ನಿರ್ಧರಿಸಿದರೆ ಆರ್ಥಿಕತೆಗೆ ಹೊಡೆತ ಬೀಳುವ ಅಪಾಯವೂ ಇದೆ. ಸರ್ಕಾರದ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

click me!