Covid 19 Crisis Karnataka: ಆರೋಗ್ಯ ಇಲಾಖೆ ನೀಡಿರುವ ಈ ಮಾರ್ಗಸೂಚಿ ತಪ್ಪದೇ ಅನುಸರಿಸಿ!

Published : Jan 07, 2022, 03:00 AM IST
Covid 19 Crisis Karnataka: ಆರೋಗ್ಯ ಇಲಾಖೆ ನೀಡಿರುವ ಈ ಮಾರ್ಗಸೂಚಿ ತಪ್ಪದೇ ಅನುಸರಿಸಿ!

ಸಾರಾಂಶ

*ಆಕ್ಸಿಜನ್‌ ಮಟ್ಟ93ಕ್ಕಿಂತ ಕುಸಿದರೆ ಆಸ್ಪತ್ರೆಗೆ ದಾಖಲಾಗಿ *ಸಣ್ಣ ಪ್ರಮಾಣದಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡರೂ ನಿರ್ಲಕ್ಷಿಸಬೇಡಿ *ಕೋವಿಡ್‌ ಸೋಂಕಿತರ ಹೋಂ ಐಸೋಲೇಷನ್‌ ಕುರಿತು ಮಾರ್ಗಸೂಚಿ ಪ್ರಕಟ

ಬೆಂಗಳೂರು (ಜ.7): ಕೋವಿಡ್‌-19 ಪ್ರಕರಣಗಳ (Covid 19) ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣ ಹೊಂದಿದವರನ್ನು ಮನೆಯಲ್ಲಿ ಐಸೋಲೇಷನ್‌ ಮಾಡಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮಾರ್ಗಸೂಚಿ ನೀಡಿದೆ. ಸಣ್ಣ ಪ್ರಮಾಣದಲ್ಲಿ ಉಸಿರಾಟ ತೊಂದರೆ (Breathing Problem) ಹಾಗೂ ರಕ್ತದಲ್ಲಿ ಆಮ್ಲಜನಕದ ಮಟ್ಟಶೇ. 93ಕ್ಕಿಂತ ಕಡಿಮೆ ಆದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಲಾಗಿದೆ. 

ಮನೆಯಲ್ಲಿ ಚಿಕಿತ್ಸೆ ಪಡೆಯುವ ಸೌಮ್ಯ ಅಥವಾ ಸೋಂಕು ಲಕ್ಷಣರಹಿತ (Symptoms) ಸೋಂಕಿತರಿಗೆ ಸೋಂಕು ನಿರ್ವಹಣೆ ಕುರಿತು ಅಗತ್ಯ ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದಲ್ಲಿನ ಕಂಟ್ರೋಲ್‌ ರೂಂಗಳ (Control Rooms) ನಂಬರ್‌ ನೀಡಲಾಗುವುದು, ಅವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು. ಸೋಂಕಿತರ ಆರೈಕೆ ಮಾಡುವವರು ಕಡ್ಡಾಯವಾಗಿ ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು. 60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್‌ಗೆ ಒಳಗಾದರೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಅವರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: Covid 19 Guidelines: ಬೆಂಗಳೂರು ಹೊರಗೆ ಕೋವಿಡ್ ನಿರ್ಬಂಧ ಸಡಿಲ?

ಸೋಂಕಿತರು ಇರುವ ಕೋಣೆ ಗಾಳಿ- ಬೆಳಕಿನಿಂದ ಕೂಡಿರಬೇಕು. ಕಿಟಕಿಗಳನ್ನು ತೆರೆದಿಡಬೇಕು. ಸೋಂಕಿತರು ಮೂರು ಪದರದ ಮಾಸ್ಕ್‌ ಧರಿಸಬೇಕು. ಎಂಟು ಗಂಟೆಗೊಮ್ಮೆ ಅದನ್ನು ಬದಲಿಸಬೇಕು. ಬಳಕೆ ನಂತರ 72 ಗಂಟೆಗಳ ಕಾಲ ಕಾಗದದ ಬ್ಯಾಗ್‌ನಲ್ಲಿಟ್ಟು ಅವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮನೆಯ ಇತರ ಸದಸ್ಯರ ಸಂಪರ್ಕಕ್ಕೆ ಬರಬಾರದು. ವೃದ್ಧರು, ಮಕ್ಕಳು, ಅಸ್ವಸ್ಥರಿದ್ದರೆ ಹೆಚ್ಚು ಜಾಗರೂಕತೆ ವಹಿಸಬೇಕು. ಸೋಂಕಿತರು ಹೆಚ್ಚು ದ್ರವ ರೂಪದ ಆಹಾರ ಸೇವಿಸಬೇಕು. ಬಿಸಿ ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎಂದು ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿCorona Update ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್, ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್

ಆಗಾಗ್ಗೆ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಪಲ್ಸ್‌ ಆಕ್ಸಿಮೀಟರ್‌ಗಳಿಂದ ಆಮ್ಲಜನಕ ಮಟ್ಟಪರೀಕ್ಷಿಸಿಕೊಳ್ಳಬೇಕು. ದೇಹದ ಉಷ್ಣತೆಯ ಬಗ್ಗೆಯೂ ಗಮನ ವಹಿಸಬೇಕು. ಸೋಂಕಿತರು ತಾವು ಬಳಸಿದ ಪಾತ್ರೆಗಳು, ಬಟ್ಟೆಗಳು ಸೇರಿ ಪ್ರತಿ ವಸ್ತುವನ್ನು ಇತರೆ ಸದಸ್ಯರೊಂದಿಗೆ ಹಂಚಿಕೊಳ್ಳಬಾರದು.ಯಾವುದೇ ಸಣ್ಣ ಲಕ್ಷಣಗಳು ಕಂಡುಬಂದರೂ ಕೂಡಲೇ ಕಂಟ್ರೋಲ್‌ ರೂಮ್‌ ಸಂಖ್ಯೆಗೆ ಕರೆ ಮಾಡಬೇಕು ಎಂದು ತಿಳಿಸಲಾಗಿದೆ. ಪದೇ ಪದೇ ಜ್ವರ ಬಂದಲ್ಲಿ (100 ಡಿಗ್ರಿ ಸೆಲ್ಸಿಯಸ್‌ನಷ್ಟುಜ್ವರ 3 ದಿನಗಳಾದರೂ ಕಡಿಮೆಯಾಗಿಲ್ಲದಾಗ), ಉಸಿರಾಡಲು ತೊಂದರೆಯಾದಾಗ, ಆಕ್ಸಿಜನ್‌ ಮಟ್ಟಶೇ. 93ಕ್ಕಿಂತ ಕಡಿಮೆಯಾದಾಗ, ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೆ, ಅತಿಯಾದ ಆಯಾಸ ಹಾಗೂ ಮಾನಸಿಕ ಕಿರಿಕಿರಿ, ಗೊಂದಲ ಹೆಚ್ಚಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸೂಚಿಸಲಾಗಿದೆ.

200 ದಿನ ಬಳಿಕ 5000+ ಕೇಸ್‌

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಅಬ್ಬರ ಹೆಚ್ಚಾಗುತ್ತಿದ್ದು, ಗುರುವಾರ ಬರೋಬ್ಬರಿ 5,031 ಮಂದಿಯಲ್ಲಿ ಕೋವಿಡ್‌-19 ಪತ್ತೆಯಾಗಿದೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 4,324 ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪಾಸಿಟಿವಿಟಿ ದರ ಶೇ.7.5 ದಾಟಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರ ದಾಟಿದೆ. ಕೋವಿಡ್‌ನಿಂದ ಗುರುವಾರ ಒಂದು ಸಾವು ಸಂಭವಿಸಿದೆ.

ಇದನ್ನೂ ಓದಿ: Karnataka Covid Crisis : ಲಾಕ್ ಡೌನ್ ಮಾಡುವ ಬದಲು ಸರ್ಕಾರ ಜನರಿಗೆ ವಿಷ ಕೊಟ್ಟು ಬಿಡಲಿ

ಕಳೆದ ಜೂನ್‌ 20ಕ್ಕೆ 5,815 ಮಂದಿಯಲ್ಲಿ ಸೋಂಕು ವರದಿಯಾದ 200 ದಿನಗಳ ಬಳಿಕ ಮೊದಲ ಬಾರಿಗೆ 5 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಜೊತೆಗೆ ರಾಜ್ಯದ ಅನ್ಯ ಭಾಗಗಳಲ್ಲಿಯೂ ಹೊಸ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಒಂದಂಕಿಯಿಂದ ಎರಡಂಕಿಗೆ ಜಿಗಿದಿವೆ. 1.27 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.3.95 ಪಾಸಿಟಿವಿಟಿ ದರ ದಾಖಲಾಗಿದೆ. ನಿನ್ನೆ ಕೂಡ 1.27 ಲಕ್ಷ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರ ಶೇ. 0.66 ಜಾಸ್ತಿ ವರದಿಯಾಗಿದೆ. 271 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ಏರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್