ಅಂಬರೀಶ್ ಸ್ಮಾರಕಕ್ಕೆ 12 ಕೋಟಿ ರೂ. ಸೇರಿದಂತೆ ಇಂದಿನ ಸಚಿವ ಸಂಪುಟ ಕೈಗೊಂಡ ತೀರ್ಮಾನಗಳು ಇಂತಿವೆ

By Suvarna NewsFirst Published Jan 6, 2022, 10:22 PM IST
Highlights

ಅಂಬರೀಶ್ ಸ್ಮಾರಕಕ್ಕೆ 12 ಕೋಟಿ ರೂ. ರಿಲೀಸ್
ಸಚಿವ ಸಂಪುಟದಲ್ಲಿ ಅನುಮೋದನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

ಬೆಂಗಳೂರು, (ಜ.06): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಇಂದು(ಗುರುವಾರ) ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ  ಹತ್ತಾರು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು.

Weekend Curfew ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಇರುತ್ತಾ? ಡಿಸಿ ವಿವೇಚನೆಗೆ ಬಿಟ್ಟ ಅಬಕಾರಿ ಇಲಾಖೆ

ಕೆಪಿಎಸ್ಸಿ 2011ರ ಬ್ಯಾಚ್ ಬಗ್ಗೆ ಪರಿಶೀಲನೆ ಮಾಡಿ ಕಡತ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಿದ ಸಿಎಂ, ಅಂಬರೀಶ್ ಸ್ಮಾರಕ‌ ನಿರ್ಮಿಸಲು 12 ಕೋಟಿ ಬಿಡುಗಡೆಗೆ ಅಸ್ತು ಎಂದಿದ್ದಾರೆ. 

ಕ್ಯಾಬಿನೆಟ್ ಸಭೆಯ ಮುಖ್ಯಾಂಶಗಳು
* ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. 
* ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ.
* ಅಂಬರೀಶ್ ಸ್ಮಾರಕ‌ ನಿರ್ಮಿಸಲು 12 ಕೋಟಿ ರೂ.

* ಬೆಂಗಳೂರು ಜಿಲ್ಲೆಯ ಪೂರ್ವ ತಾಲೂಕು ಹೊಸಕೋಟೆ ಕೆರೆಗೆ ನೀರು ತುಂಬಿಸಲು ಅನುದಾನ. 
* ಕೆ.ಆರ್. ಪುರಂ ತ್ಯಾಜ್ಯ ನೀರು ಸಂಸ್ಕರಿಸಿ 22 ಕೆರೆಗೆ ನೀರು ಹರಿಸುವುದು.
* ಕಾರ್ಕಳದ ನ್ಯಾಯಾಲಯಕ್ಕೆ 19 ಕೋಟಿ ರೂ. ಮಂಜೂರು.

* ಮುಳುಬಾಗಿಲು ಕೋರ್ಟ್​ಗೆ 16 ಕೋಟಿ ರೂ.
* ಉಡುಪಿ ಕಾಪು ಜನಾರ್ಧನ ದೇವಾಲಯದ ಹತ್ತು ಸೆಂಟ್ ಜಾಗ ಭಂಟರ ಸಂಘಕ್ಕೆ. ರಾಜಘಟ್ಟದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ ಜಾಗಕ್ಕೆ ಮಾರ್ಗಸೂಚಿ ದರಕ್ಕೆ ರಿಯಾಯಿತಿ.
* ಮೈಸೂರು ಮೂಕನಹಳ್ಳಿ ಒಕ್ಕಲಿಗರ ಸಂಘಕ್ಕೆ ನೀಡಿದ್ದ ಲ್ಯಾಂಡ್ ಯೂಸ್ ತಿದ್ದುಪಡಿ.
* ಹಿರೀಸಾವೆ ಬಳಿ ಆದಿ ಚುಂಚನಗಿರಿ ಮಠಕ್ಕೆ 22 ಎಕರೆ ಜಾಗ. (ಶಾಲೆ, ವಿದ್ಯಾರ್ಥಿ‌ನಿಲಯ, ಧ್ಯಾನ‌ಮಂದಿರ, ಅನಾಥಾಶ್ರಮ, ಇತರೆ ಕಲ್ಯಾಣ ಕಾರ್ಯಕ್ಕೆ ಬಳಸಿಕೊಳ್ಳಬೇಕು).

* ಬಾಗಲಕೋಟೆಯ ಸಿಗೇಗಿರಿ ಹಳ್ಳಿಯಲ್ಲಿ 5 ಎಕರೆ ಜಮೀನು ನೋಂದಣಿ ಮುದ್ರಾಂಕ ಇಲಾಖೆಗೆ ಐಟಿ ಉಪಕರಣ ಖರೀದಿ ನಿರ್ವಹಣೆಗೆ ಸಂಪನ್ಮೂಲ ಪೂರೈಕೆ ಮಾಡಲು 406 ಕೋಟಿ ರೂ. ಅನುದಾನ.
* ಜಲ ಜೀವನ್ ಮಿಷನ್‌ಗೆ ರಾಜ್ಯದ ಪಾಲು 9152 ಕೋಟಿ ರೂ., 3890 ಕೋಟಿ ಬಳಸಿಕೊಂಡು ಉಳಿದಿದ್ದನ್ನು ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
* ಜಲ ಜೀವನ ಮಷಿನ್ 3 ಹಂತದ ಯೋಜನೆ. ಈಗಾಗಲೇ ಓವರ್ ಹೆಡ್ ಟ್ಯಾಂಕ್ ಇರುವ ಕಡೆ ಅವರ ಬಳಿ ಇರುವ ಅನುದಾನ ಬಳಕೆಗೆ ಸೂಚನೆ.
* ಎರಡನೇ ಹಂತದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಕೊಡಬೇಕು. ಮೂರನೇ ಹಂತದಲ್ಲಿ ನೀರಿನ ಮೂಲ ಹುಡುಕಿ ಸಂಪರ್ಕ ಕಲ್ಪಿಸುವುದು.

* ಮೈಸೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಡಿಮೆಯಾಗಿರುವ ಹಣ 16.5. ಕೋಟಿ ರೂ. ಬಿಡುಗಡೆಗೆ ತೀರ್ಮಾನಿಸಲಾಗಿದೆ.
 * ಬಿಎಂಟಿಸಿಗೆ ಏರ್ ಕಂಡಿಷನ್ ಬಸ್ ಬದಲು 100 ಎಲೆಕ್ಟ್ರಿಕ್ ಬಸ್ ಖರೀದಿಗೆ ತೀರ್ಮಾನಿಸಿದೆ.
* ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಗರೋತ್ಥಾನ ಯೋಜನೆಯಿಂದ 5 ವರ್ಷಕ್ಕೆ ಒಟ್ಟು 3885 ಕೋಟಿ ರೂ. ಕೊಡುವುದು.
* ಬೆಂಗಳೂರು ನಗರಕ್ಕೆ ಅಮೃತ ಯೋಜನೆಯಡಿ 6 ಸಾವಿರ ಕೋಟಿ ರೂ. ಅನುದಾನ

click me!