ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಕ್ಕೆ ಲೋಕಾಯುಕ್ತವನ್ನು ಸ್ಥಾಪಿಸಲಾಗಿದೆ. ಆದರೆ, ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ ಆಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.05): ರಾಜ್ಯದಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಲೋಕಾಯುಕ್ತಕ್ಕೆ ಮುಕ್ತ ಅಧಿಕಾರ ನೀಡಿವುರುದು ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದು ನಮ್ಮ ನೈತಿಕತೆಯಾಗಿದೆ. ಆದರೆ, ತಪ್ಪುಗಳನ್ನು ಮುಚ್ಚಿಹಾಕುವುದು ಕಾಂಗ್ರೆಸ್ ನೈತಿಕತೆ. ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ತಪ್ಪುಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಹವಣಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
undefined
25 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರೀ ಪೀಠದಲ್ಲಿ ನಡೆಯುತ್ತಿರುವ ರೇಣುಕಾ ಜಯಂತಿಯಲ್ಲಿ ಪಾಲ್ಗೊಳ್ಳುವ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಸರ್ಕಾರ ಎಂಬ ಹೊಣೆಗಾರಿಕೆ ಹೊತ್ತು ಕಾಂಗ್ರೆಸ್ ಸಿಎಂ ಸ್ಥಾನದಿಂದ ರಾಜೀನಾಮೆ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಿದ್ದಾಗ ಅವರ ಸಚಿವರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಪಡೆಯುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದರು. ಅಂದು ಅವರು ರಾಜಿನಾಮೆ ನೀಡಲಿಲ್ಲ. ಲೋಕಾಯುಕ್ತ ಇದ್ದಿದ್ದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಅಂದು ಅವರು ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನ ಮಾಡಿದರು ಎಂದರು.
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ: ಸಚಿವ ಆರಗ ಜ್ಞಾನೇಂದ್ರ
ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಕಾಂಗ್ರೆಸ್‌ಗೆ ಅಧಿಕಾರ ದಾಹ: ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲೆಡೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾತನಾಡಿ ಜನರಿಗೆ ಗೊತ್ತಿದೆ. ಯಾರು, ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ? ತಾವು ಮಾಡುವಂತಹ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದು ಇವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮಾಡಿದ ಕರ್ಮಕಾಂಡ ಯಾರೂ ಮರೆತಿಲ್ಲ. ಇಡೀ ರಾಜ್ಯದಾದ್ಯಂತ ಕೊಲೆ, ಸುಲಿಗೆ, ಭ್ರಷ್ಟಾಚಾರ ಮತ್ತು ಲೂಟಿಯನ್ನು ಮಾಡಿದ್ದಾರೆ. ಅವರ ಕಾಲದ 59 ಕೇಸ್ ಲೋಕಾಯುಕ್ತಕ್ಕೆ ವಹಿಸಿದ್ದು ಸತ್ಯ ಹೊರಗೆ ಬರಲಿದೆ ಎಂದರು.
ಶಾಸಕರ ರಾಜೀನಾಮೆ ಪಡೆಯುತ್ತಿಲ್ಲ: ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ರಾಜೀನಾಮೆ ಪಡೆಯುವ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಈಗ ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಸರ್ವ ಸ್ವಾತಂತ್ರ್ಯ ನೀಡಿದ್ದು ನಿರ್ಭೀತಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ. ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡಲಿ ಎನ್ನುವುದಷ್ಟೇ ನಮ್ಮ ಉದ್ದೇಶವಾಗಿದೆ. ಇನ್ನು ಮುಂದಿನ ದಿನಗಳಲ್ಲಿಯೂ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.
ಇನ್ನು ಬೆಳಗಾವಿಯ ರಾಯಗಡದಲ್ಲಿ ಉದ್ಘಾಟನೆಯಾದ ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಕಾಂಗ್ರೆಸ್‌ನವರು ಉದ್ಘಾಟನೆ ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದ ಆಗಿದೆ. ಈ ಪ್ರತಿಮೆಯನ್ನು ಸ್ವತಃ ಸರ್ಕಾರದಿಂದಲೇ ನಿರ್ಮಿಸಲಾಗಿದೆ. ಅದನ್ನು ಸರ್ಕಾರದಿಂದ ಅಧಿಕೃತ ಉದ್ಘಾಟಿಸಿದ ನಂತರ ಅಲ್ಲಿಗೆ ಭೇಟಿ ಕೊಡಬಹುದು. ಆದರೆ ಉದ್ಘಾಟನೆಯಾದ ನಂತರವೂ ಸರ್ಕಾರದ ಯೋಜನೆಯನ್ನು ಮತ್ತೊಮ್ಮೆ ಉದ್ಘಾಟನೆ ಮಾಡುವುದನ್ನು ನಾನು ಈವರೆಗೆ ಕೇಳಿಯೇ ಇಲ್ಲ. ಅಧಿಕಾರದ ಹೊರಗಿದ್ದರೂ, ಅಧಿಕಾರದ ಲಾಲಸೆ ಹಾಗೂ ಹತಾಶ ಭಾವ ಎಷ್ಟಿದೆ ಎಂದು ಇವರ ಕಾರ್ಯದಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಆಪರೇಷನ್ ಮಾಡಾಳ್: ಸಹಾಯ ಮಾಡಿ, ತಿಮಿಂಗಲಗಳನ್ನ ಹಿಡಿದು ಹಾಕ್ತೇವೆ!
ಮತ್ತೋರ್ವ ಆರೋಪಿ ಬಂಧನ : ಇನ್ನು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್.ಐ.ಎ. ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮುಂಚೆಯೇ ಮಾಹಿತಿ ನೀಡಲಾಗಿತ್ತು. ಇನ್ನು ಕೊಲೆ ಪ್ರಕರಣದ ಜಾಡನ್ನು ಹಿಡಿದು ಪ್ರಕರಣದ ಹಿಂದಿರುವವರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸುಮಲತಾ ಬಿಜೆಪಿ ಸೇರ್ಪಡೆ ತೀರ್ಮಾನಿಸಿಲ್ಲ:
ಮಂಡ್ಯದ ಸಂಸದೆ ಸಮಲತಾ ಬಿಜೆಪಿ ಸೇರುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ