2ನೇ ಹಂತದ ಲಾಕ್‌ಡೌನ್ ವಿಭಿನ್ನ: ಕರ್ನಾಟಕದಲ್ಲಿ ಹೇಗಿರಲಿದೆ..?

By Suvarna News  |  First Published Apr 11, 2020, 5:41 PM IST

ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯ ಎಂದು ಸಿಎಂ ಬಿಎಸ್‌ವೈ ಸ್ಪಷ್ಟಪಡಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ. ಆದ್ರೆ ಈ ಬಾರಿ ವಿಸ್ತರಣೆ ವಿಭಿನ್ನವಾಗಿರಲಿದೆ ಎಂದು ಬಿಎಸ್‌ವೈ ಹೇಳಿದ್ದಾರೆ. ಹಾಗಾದ್ರೆ, ಕರ್ನಾಟಕದಲ್ಲಿ 2ನೇ ಹಂತದ ಲಾಕ್ ಡೌನ್ ಹೇಗಿರಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.


ಬೆಂಗಳೂರು, (ಏ.11): 2ನೇ ಹಂತದ ಲಾಕ್‌ ಡೌನ್ ಎದುರಿಸಲು ರಾಜ್ಯದ ಜನತೆ ಮಾನಸಿಕವಾಗಿ ಸಿದ್ಧರಾಗಿ.

ಯಾಕಂದ್ರೆ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಮಹತ್ವದ ಮುನ್ಸೂಚನೆ ನೀಡಿದ್ದಾರೆ. 

Tap to resize

Latest Videos

undefined

2ನೇ ಹಂತದ ಲಾಕ್‌ಡೌನ್ ವಿಭಿನ್ನ: ಮದ್ಯಪ್ರಿಯರಿಗೆ ಸಿಗುತ್ತಾ ಗುಡ್‌ನ್ಯೂಸ್..?

ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ ಸಂವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ವೈ, ಮುಂದಿನ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಆದ್ರೆ, ಈ ಬಾರಿ ಲಾಕ್‌ಡೌನ್ ವಿಭಿನ್ನವಾಗಿರಿದ್ದು, ಶೀಘ್ರದಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸಿಎಂ ಸುದ್ದಿಗೋಷ್ಠಿ: ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ, ವಿಭಿನ್ನವಾಗಿರಲಿದೆ ಎಂದ ಬಿಎಸ್‌ವೈ

ಸಿಎಂ ಹೇಳಿದಂತೆ ವಿಭಿನ್ನವಾಗಿರಲಿದ್ದು, 2ನೇ ಹಂತದ ಲಾಕ್‌ಡೌನ್ ಫುಲ್ ಕಟ್ಟುನಿಟ್ಟಾಗಿರುತ್ತದೆ. ಈ ನಡುವೆ ಕೆಲವು ಸೇವೆಗಳು ಎಂದಿನಂತೆ ಲಭ್ಯವಾಗಲಿದ್ದಾವೆ ಎನ್ನಲಾಗಿದ್ದು, ಹಾಲು, ತುರ್ತುವಾಹನ, ಜಲಮಂಡಳಿ ಸೇವೆ. ಹೂವು, ಹಣ್ಣಿನ ಅಂಗಡಿ, ದಿನಸಿ ಅಂಗಡಿ, ಮೆಡಿಕಲ್‌ ಶಾಪ್‌ ಸೇವೆಗಳು ಲಭ್ಯವಿರುತ್ತದೆ.

ಕರ್ನಾಟಕದಲ್ಲಿ ಲಾಕ್ ಡೌನ್ ಹೇಗಿರಲಿದೆ?
* ಅಗತ್ಯ ವಸ್ತುಗಳು ಎಂದಿನಂತೆ ಸಿಗಲಿದೆ..
* ಕೃಷಿ ಚಟುವಟಿಕೆಗಳಿಗೆ ತೊಂದರೆ ಇಲ್ಲ.
* ಮೆಡಿಷಿನ್ ಕಾರ್ಖಾನೆಗಳಿಗೆ ಆದ್ಯತೆ..
* 50:50ರಷ್ಟು ಕಾರ್ಮಿಕರ ಮಾದರಿಯಲ್ಲಿ ಕಾರ್ಯಾಚರಣೆ...
* ಸರ್ಕಾರಿ ಕಚೇರಿಗಳು ಭಾಗಶಃ ಕಾರ್ಯನಿರ್ವಹಣೆ..
* ಶೇಕಡಾ 50 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುವುದು..
* ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಪೂರ್ಣ ಸ್ವಾತಂತ್ರ್ಯ. ಬಂದರುಗಳ ಬಳಕೆ ಮಾಡುವಂತಿಲ್ಲ...
* ಸರ್ಕಾರಿ ಸೇವೆಗೆ ಮಾತ್ರ ಅಗತ್ಯ ಸಾರಿಗೆ ವ್ಯವಸ್ಥೆ.
* ಜಿಲ್ಲಾ ಗಡಿ  ಪೂರ್ಣ ಬಂದ್.
* ಪಾಸ್ ಇಲ್ಲದ ಖಾಸಗಿ ವಾಹನಗಳು ಪೂರ್ಣ ಬಂದ್ .
* ಬಾರ್, ಜಿಮ್, ಮಾಲ್ ಪೂರ್ಣ ಬಂದ್...
* ಜಾತ್ರೆ, ಶಾಲೆಗಳು, ಕಾಲೇಜುಗಳು ಪೂರ್ಣ ಬಂದ್.
* ಎಂಎಸ್ ಐಎಲ್ ಮೂಲಕ‌ ಮದ್ಯ ಮಾರಾಟಕ್ಕೆ ಚಿಂತನೆ...
* ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಡಬ್ಬಲ್ ಲಾಕ್ ಡೌನ್...
* ಅನ್ ಲೈನ್ ಫುಡ್ ಸರಬರಾಜಿಗೆ ಅನುಮತಿ ಮುಂದುವರಿಕೆ.

click me!