
ಬೆಂಗಳೂರು, (ಏ.11): ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಘೋಷಿಸಿದ್ದಾರೆ.
"
ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಡೆದ ಸಂವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ವೈ. ಮುಂದಿನ 15 ದಿನಗಳ ಕಾಲ ಲಾಕ್‌ಡೌನ್ ವಿಸ್ತರಣೆ ಅನಿವಾರ್ಯವಾಗಿದ್ದು, ಶೀಘ್ರದಲ್ಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಲಾಕ್ ಡೌನ್, ಸೀಲ್ ಡೌನ್ ಇತ್ಯಾದಿ : ಯಡಿಯೂರಪ್ಪ-ಮೋದಿ ನಡುವಿನ ಮಾತುಕತೆ
ಕರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ಅನಿವಾರ್ಯ ಆಗಿರುವುದರಿಂದ ಮುಂದಿನ 15 ದಿನಗಳ ಕಾಲ ಮುಂದುವರಿಸಲಾಗುವುದು .ಯಾವುದೇ ಕಾರಣಕ್ಕೂ ಲಾಕ್‌ಡೌನ್ ಸಡಿಲ ಆಗಬಾರದು. ಇನ್ನು 15 ದಿನ ಲಾಕ್‌ಡೌನ್ ಅನಿವಾರ್ಯ ಎಂದು ಪ್ರಧಾನಿ ಮೋದಿ ಇಂಗಿತ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.
ಮುಂದಿನ ದಿನಗಳ ಲಾಕ್‌ಡೌನ್ ವಿಭಿನ್ನವಾಗಿರಲಿದೆ. ಇನ್ನು ಎರಡ್ಮೂರು ದಿನದಲ್ಲಿ ಲಾಕ್‌ಡೌನ್ ಮಾರ್ಗ ಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
ಬಿಎಸ್‌ವೈ ಸುದ್ದಿಗೋಷ್ಠಿಯ ಮುಖ್ಯಾಂಶಗಳು
*ಮೀನುಗಾರಿಕೆ ಮತ್ತು ಸಂಸ್ಕರಣಾ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ, ಕರಾವಳಿ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉಪಯೋಗ
* ಆರೋಗ್ಯ ಸೇತು ಮೊಬೈಲ್ ಆಪ್ ಜನಪ್ರಿಯಗೊಳಿಸಲು ಕರೆ, ಇದರಿಂದ ಮತ್ತಷ್ಟು ಜಾಗೃತಿ
*ಲಾಕ್‌ಡೌನ್ ಯಾವುದೇ ಕಾರಣಕ್ಕೂ ಸಡಿಲಗೊಳಿಸದಿರಲು ಸೂಚನೆ
* ರಾಜ್ಯದೊಂದಿಗೆ ಕೇಂದ್ರ ಸರ್ಕಾರ ಯಾವತ್ತೂ ಇರುತ್ತದೆ ಎಂದು ಅಭಯ
* ಲಾಕ್‌ಡೌನ್ ವಿಸ್ತರಣೆಯ ಮಾರ್ಗ ಸೂಚಿಗಳನ್ನು ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು
* ವೈದ್ಯಕೀಯ ಸಿಬ್ಬಂದಿಗಳ ಜೊತೆ ಅನುಚಿತ ವರ್ತನೆ ತೋರಿದ್ರೆ ಕಾನೂನು ಕ್ರಮ
* ಮುಂದಿನ ಲಾಕ್ ಡೌನ್,,ಈಗ ಇರುವುದಕ್ಕಿಂತ ವಿಭಿನ್ನವಾಗಿ ಇರುತ್ತದೆ.
* 3ನೇ ಸ್ಥಾನದಲ್ಲಿ ಇದ್ದ ಕರ್ನಾಟಕ ಈಗ ಹನ್ನೊಂದನೇ ಸ್ಥಾನಕ್ಕೆ ಇಳಿಕೆಯಾಗಿದೆ ಏರಿದೆ.
* ಕೃಷಿಕರು ಬೆಳೆದ ಯಾವುದೇ ಉತ್ಪನ್ನ ಗಳನ್ನು ಟೋಲ್ ಗಳಲ್ಲಿ ತಡೆಯಬಾರದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ