
ಬೆಳಗಾವಿ(ಡಿ. 17): ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ (Belagavi Assembly Session) ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ (Ramesh Kumar) ಅತ್ಯಾಚಾರವನ್ನು ಸಾಮಾನ್ಯೀಕರಿಸುವ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಈಡಾಗಿದ್ದರು. ಇದೀಗ ತನ್ನ ಹೇಳಿಕೆಗೆ ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಇನ್ನು ಮುಂದೆ ಇಂತಹ ಪದ ಬಳಸದಂತೆ ಎಚ್ಚರ ವಹಿಸುತ್ತೇನೆ. 'ಅತ್ಯಾಚಾರ!' ಬಗ್ಗೆ ಇಂದಿನ ವಿಧಾನಸಭೆಯಲ್ಲಿ ನಾನು ಮಾಡಿದ ಉದಾಸೀನ ಮತ್ತು ನಿರ್ಲಕ್ಷ್ಯದ ಕಾಮೆಂಟ್ ಗಾಗಿ ಎಲ್ಲರ ಕ್ಷಮೆ ಕೇಳುತ್ತಿದ್ದೇನೆ. ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೂ ವಿಷಾದಿಸುವೆ. ದೇಶದ ಮಹಿಳೆಯರ ಭಾವನೆಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಮುಕ್ತ ಮನಸ್ಸಿನಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಾತ್ರವಲ್ಲ ಈ ಬಗ್ಗೆ ಸದನದಲ್ಲೂ ಶುಕ್ರವಾರ ತಮ್ಮ ಕ್ಷಮೆ ಯಾಚಿಸಿರುವ ರಮೇಶ್ ಕುಮಾರ್ ಆರಂಭದಲ್ಲೇ ಮಾತು ಶುರು ಮಾಡಿ "ನಿನ್ನೆ ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನ ಅನುಭವಿಸ್ತಿದ್ದೇನೆ ಅಂತ ನೋವು ತೋಡಿಕೊಂಡೆ. ನಾನು ಇಂಗ್ಲಿಷ್ ಭಾಷೆಯಲ್ಲಿರೋ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಯಾವ ಸಮಯದಲ್ಲಿ ಏನ್ ಹೇಳಿದೆ ಅದು ಹೊರಟು ಹೋಯಿತು. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು ನನ್ನ ಉದ್ದೇಶವಾಗಿರಲಿಲ್ಲ. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿ ಆಡಿದ ಮಾತಿನಿಂದ . ಯಾರಿಗೆ, ಎಲ್ಲೇ ನೋವಾಗಿದ್ರೂ, ಯಾವುದೇ ವರ್ಗದ ಮಹಿಳೆಯರಿಗೆ ನೋವಾಗಿದ್ರೆ, ನಾನು ವಿಷಾಧ ವ್ಯಕ್ತಪಡಿಸುತ್ತೇನೆ. ನಾನು ಕ್ಷಮೆ ಕೇಳುತ್ತೇನೆ" ಎಂದು ಸದನದಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
Belagavi Assembly Session : 'ರೇಪ್ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!
ನಾವು ಯಾವ ಸನ್ನಿವೇಶದಲ್ಲಿ ಹೇಗೆ ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ನನಗೆ ಯಾರ ಮೇಲೂ ಚಾಲೆಂಜ್ ಮಾಡೋ ಉದ್ದೇಶ ಇಲ್ಲ. ನನ್ನನ್ನು ಸಹ ಅಪರಾಧಿ ಮಾಡಿದ್ದಾರೆ. ನನ್ನಿಂದ ಅಪರಾಧ ಆಗಿದೆ ಅಂತ ತೀರ್ಪೇ ಕೊಟ್ಟಿರೋದ್ರಿಂದ, ನಾನು ಕ್ಷಮೆ ಕೇಳುತ್ತೇನೆ. ಗ್ರಹಚಾರಕ್ಕೆ, ನೀವು ಹೇಳಿದ ಹಾಗೆ ನಾನು ಪ್ರತಿಕ್ರಿಯಿಸಿದೆ. ತಮ್ಮನ್ನೂ ಅಪರಾಧಿ ಮಾಡಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೂ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ , ರಮೇಶ್ ಕುಮಾರ್ ಅವರು ಕ್ಷಮೆ ಕೇಳಿದ್ದಾರೆ. ಮತ್ತೆ ಅದನ್ನು ಬೆಳೆಸುವ ಅಗತ್ಯ ಇಲ್ಲ ನಾವು ಒಂದು ಕುಟುಂಬವಾಗಿ ಇದ್ದೇವೆ ರಮೇಶ್ ಕುಮಾರ್ ಅವರು ಸಾಂದರ್ಭಿಕವಾಗಿ ಈ ಮಾತು ಹೇಳಿದ್ದಾರೆ ಮಹಿಳೆಯರ ಬಗ್ಗೆ ನಾವೆಲ್ಲ ಒಳ್ಳೆಯ ಭಾವನೆ ಇಟ್ಟುಕೊಂಡವರು. ಈ ಮಾತನ್ನು ವಿವಾದ ಮಾಡೋದು ಬೇಡ ಇಲ್ಲಿಗೆ ಬಿಟ್ಟು ಬಿಡಿ ಎಂದರು.
Karnataka Winter Session 2021: ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ : ಲಕ್ಷ್ಮೀ ಹೆಬ್ಬಾಳ್ಕರ್
ರಮೇಶ್ ಕುಮಾರ್ ಹೇಳಿದ್ದೇನು?: ಅತಿವೃಷ್ಟಿ ಹಾನಿ ಸಂಬಂಧ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ (Congress) ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು. ಆಗ ಕಾಗೇರಿ ಏನು ಮಾಡುವುದು ಎಲ್ಲ ತೀರ್ಮಾನ ನೀವೇ ತೆಗೆದುಕೊಳ್ಳುತ್ತೀರಿ. ಅಲ್ಲವೇ ರಮೇಶ್ ಕುಮಾರ್ ಅವರೇ ಎಂದಾಗ 'ಅತ್ಯಾಚಾರ ನಡೆಯುತ್ತಿದ್ದಾಗ ಅದನ್ನು ತಡೆಯಲು ಸಾಧ್ಯವಿಲ್ಲ ಎಂದಾಗ ಸುಮ್ಮನೆ ಮಲಗಿ ಎಂಜಾಯ್ ಮಾಡಬೇಕು' ಎಂಬರ್ಥದ ಇಂಗ್ಲಿಷ್ (English) ಕೋಟ್ ರಮೇಶ್ ಕುಮಾರ್ ಅವರ ಬಾಯಿಂದ ಬಂತು. ಈ ಮಾತು ಹೇಳುವಾಗ ಕಾಗೇರಿ ಅವರು ನಗುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ