
ವಿಧಾನ ಪರಿಷತ್ (ಡಿ.17): ಶಿಶುಪಾಲನಾ ರಜೆ (Child Care leave), ಶಿಶು ಎಂದು ಪರಿಗಣಿಸುವ ವಯೋಮಿತಿ, ಡಿಲೆವರಿ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಮತ್ತು ಹಿರಿಯ ಸದಸ್ಯ ಆಯನೂರು ಮಂಜುನಾಥ್ (Ayanuru Manjunath) ನಡುವೆ ಸ್ವಾರಸ್ಯಕರ ಚರ್ಚೆ ನಡೆದು ಸದನವನ್ನು ನಗೆ ಗಡಲ್ಲಿ ತೇಲುವಂತೆ ಮಾಡಿತು. ಆಯನೂರು ಮಂಜುನಾಥ್ ಅವರು ಕೇಳಿದ್ದ ಶಿಶುಪಾಲನಾ ರಜೆ (Lave) ವಿಚಾರದಲ್ಲಿ ತಾಯಿ ಮೃತ ಪಟ್ಟರೆ ಪ್ರಕರಣದಲ್ಲಿ ಮಗುವಿನ ಪೋಷಣೆಗೆ (Baby Care) ಆಕೆಯ ಪತಿಗೆ ರಜೆ ಅನ್ವಯಿಸುತ್ತದೆಯೇ? ಶಿಶು ಎಂದು ಪರಿಗಣಿಸುವ ವಯೋಮಿತಿ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಉತ್ತರದಲ್ಲಿ, ‘ಸರ್ಕಾರಿ ಮಹಿಳಾ ಅಧಿಕಾರಿ/ಸಿಬ್ಬಂದಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಈ ನಿಯಮವನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಪ್ರತ್ಯೇಕ ದಾಖಲೆ ನೀಡುವ ಅಗತ್ಯವಿಲ್ಲ’ ಎಂದು ಹೇಳಲಾಗಿತ್ತು.
ಇದಕ್ಕೆ ಮರು ಪ್ರಶ್ನೆ ಎತ್ತಿದ ಆಯನೂರು ಮಂಜುನಾಥ್, ‘18 ವರ್ಷದೊಳಗೆ ಇರುವ ಎಲ್ಲರೂ ಶಿಶುಗಳು ಎನ್ನುವುದಾದರೆ ಯೌವನವನ್ನು ಯಾವ ವಯಸ್ಸಿಗೆ ಹೇಳಬೇಕು? 18 ವರ್ಷದೊಳಗಿನ ಮಗು ಅತ್ಯಾಚಾರ (Rape) ಮಾಡಿದರೆ ಅದನ್ನು ಶಿಶು ಅತ್ಯಾಚಾರ ಎನ್ನಬೇಕೇ’ ಎಂದು ಪ್ರಶ್ನಿಸಿದರು.
ಇದಕ್ಕೆ ಮುಖ್ಯಮಂತ್ರಿ ಅವರು, ‘ಆಯನೂರ ಪ್ರಶ್ನೆಗಳೇ ವಿಭಿನ್ನ. 18 ವರ್ಷದೊಳಗಿನ ಮಕ್ಕಳನ್ನು ಶಿಶುವೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ದೈಹಿಕ ಬದಲಾವಣೆಗಳಿಗೂ ಇದಕ್ಕೂ ಸಂಬಂಧವಿಲ್ಲ’ ಎಂದರು.
ಬಳಿಕ ಆಯನೂರು ಮಂಜುನಾಥ್ ಅವರು, ‘ತಾಯಿ (Mother) ಮೃತಪಟ್ಟಾಗ ಮಗುವಿನ ಪೋಷಣೆಗೆ ತಂದೆಗೆ ಏಕೆ ಈ ಶಿಶು ಪಾಲನಾ ರಜೆ ಇರುವುದಿಲ್ಲ’ ಎಂದು ಪ್ರಶ್ನಿಸಿದಾಗ, ‘ಸಾಮಾನ್ಯವಾಗಿ ತಾಯಿ ಮಗುವಿನ ಪಾಲನೆ ಮಾಡುತ್ತಾಳೆ. ಆದ್ದರಿಂದ ಈ ರೀತಿ ರಜೆ ನೀಡಲಾಗಿದೆ. ವಿಧುರ ತಂದೆಯ (Father) ಬಗ್ಗೆ ಪ್ರಸ್ತಾಪವಿಲ್ಲ’ ಎಂದು ಮುಖ್ಯಮಂತ್ರಿ (CM) ಸ್ಪಷ್ಟಪಡಿಸಿದರು. ಆದರೂ ಆಯನೂರು ಮಂಜುನಾಥ್ ತಮ್ಮ ವಾದ ಮುಂದುವರಿಸಿದ್ದರಿಂದ, ಮಂಜುನಾಥ್ ಅವರೊಂದಿಗೆ ‘ವಿಶೇಷ ಸಭೆ ನಡೆಸಿ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ(Govt Of India) ಮನವಿ ಮಾಡಲಾಗುವುದು ಎಂದು ಸಿಎಂ ಹೇಳಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ‘ಒಂದು ವೇಳೆ ತಂದೆ ತನ್ನ ಮಗುವಿಗೆ ಎದೆಹಾಲು ಕುಡಿಸುವುದಾದರೆ ಆರು ತಿಂಗಳು ರಜೆ ನೀಡಬಹುದು’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.
ಮಗುವಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ..?
ಮಗು ಹುಟ್ಟಿದ ತಕ್ಷಣ ಜನನ ದಾಖಲೆ ಪಡೆಯುತ್ತೇವೆ. ಹಾಗೆಯೇ ಆಧಾರ್ ಕಾರ್ಡ್ (Aadhaar card ) ಕೂಡ ಈಗ ಪಡೆಯಬಹುದು. ಸರ್ಕಾರಿ ಸೇವೆ,ಖಾಸಗಿ ಸೇವೆ ಜೊತೆ ಶಾಲೆಗೆ ಮಕ್ಕಳ ಹೆಸರು ನೊಂದಾಯಿಸಲು ಆಧಾರ್ ಕಾರ್ಡ್ ಅನಿವಾರ್ಯ. ಮಕ್ಕಳ ಆಧಾರ್ ಕಾರ್ಡನ್ನು ಬಾಲ್ ಆಧಾರ್ ಕಾರ್ಡ್(Baal Aadhar card) ಎಂದು ಕರೆಯಲಾಗುತ್ತದೆ.
ಬಾಲ್ ಆಧಾರ್ ಕಾರ್ಡ್ : ಈ ಆಧಾರ್ ಕಾರ್ಡ್ ನೀಲಿ(Blue) ಬಣ್ಣದಲ್ಲಿರುತ್ತದೆ. ಮಗುವಿನ ವಯಸ್ಸು 5 ವರ್ಷಕ್ಕಿಂತ ಹೆಚ್ಚಾದ್ಮೇಲೆ ಈಗ ಮಾಡಿದ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಐದು ವರ್ಷದ ನಂತರ ಮಗುವಿಗೆ ಆಧಾರ್ ಕಾರ್ಡ್ ನವೀಕರಿಸಬೇಕಾಗುತ್ತದೆ. ಈ ಹಿಂದೆ ಮಗುವಿನ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಮಾಡಲಾಗ್ತಿತ್ತು. ಈಗ ಯುಐಡಿಎಐ (UIDAI) ಹೊಸ ನಿಯಮ ಜಾರಿಗೆ ತಂದಿದೆ. ಅದರ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಣ್ಣಿನ (Eyes) ಸ್ಕ್ಯಾನಿಂಗ್ ಹಾಗೂ ಬೆರಳಚ್ಚಿನ(fingerprints) ಪ್ರಕ್ರಿಯೆ ರದ್ದು ಮಾಡಲಾಗಿದೆ. ಹಾಗಾಗಿ ಐದು ವರ್ಷದ ನಂತರ ಮಕ್ಕಳಿಗೆ ಬಯೋಮೆಟ್ರಿಕ್(Biometric) ಪ್ರಕ್ರಿಯೆ ನಡೆಯಲಿದೆ.
ಬಾಲ್ ಆಧಾರ್ ತಯಾರಿ : ಮಗುವಿನ ಆಧಾರ್ ಕಾರ್ಡ್ ಮಾಡಲು ಯುಐಡಿಎಐ ಅಧಿಕೃತ ವೆಬ್‌ಸೈಟ್‌ಗೆ (Website) https://uidai.gov.in ಭೇಟಿ ನೀಡಬೇಕು. ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖಪುಟದಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಆಯ್ಕೆ ಸಿಗುತ್ತದೆ.ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಆಗ ತೆರೆಯುವ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಆಧಾರ್ ಕೇಂದ್ರವನ್ನು ಆಯ್ಕೆ ಮಾಡಬೇಕು. ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕು.ಇದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಒಟಿಪಿ ಪರಿಶೀಲನೆ ನಂತರ ಅಪಾಯಿಂಟ್‌ಮೆಂಟ್ ದಿನಾಂಕವನ್ನು ಕಾಯ್ದಿರಿಸಬೇಕು. ಅಪಾಯಿಂಟ್ಮೆಂಟ್ ಸಿಕ್ಕ ದಿನದಂದು ಮಗುವನ್ನು ಆಧಾರ್ ಕೇಂದ್ರಕ್ಕೆ ಕರೆದೊಯ್ಯಬೇಕು. ಅಲ್ಲಿ ಮಗುವಿನ ಆಧಾರ್ ಪ್ರಕ್ರಿಯೆ ನಡೆಯಲಿದೆ.
ಬಾಲ್ ಆಧಾರ್ ಗೆ ಬೇಕಾಗುವ ದಾಖಲೆ :
ಬಾಲ್ ಆಧಾರ್ ಕಾರ್ಡ್ ಮಾಡಲು ಕೆಲ ದಾಖಲೆ ಅವಶ್ಯಕ. ಮಗುವಿನ ಜನನ ಪ್ರಮಾಣಪತ್ರ,ಪೋಷಕರ ಆಧಾರ್ ಕಾರ್ಡ್,ವಿಳಾಸದ ಪುರಾವೆ,ಮೊಬೈಲ್ ನಂಬರ್,ಮಗುವಿನ ಪಾಸ್ಪೋರ್ಟ್ (Passport) ಗಾತ್ರದ ಫೋಟೋ ನೀಡಬೇಕಾಗುತ್ತದೆ.
ಮಕ್ಕಳ ಆಧಾರ್ ಕಾರ್ಡ್ ಅನ್ನು ಆಫ್‌ಲೈನ್ ಮಾಡುವುದು ಹೇಗೆ?
ಮೊದಲನೆಯದಾಗಿ, ಪಾಲಕರು ಮತ್ತು ಮಗುವಿನ ದಾಖಲೆಯನ್ನು ಆಧಾರ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.ಇದಕ್ಕಿಂತ ಮೊದಲು ಮಕ್ಕಳ ಆಧಾರ್ ಕಾರ್ಡ್ ನೋಂದಣಿ ಫಾರ್ಮ್ ಭರ್ತಿ ಮಾಡಬೇಕು. ಇದರ ನಂತರ ಅರ್ಜಿಯಲ್ಲಿ ಕೇಳಲಾದ ಮಗುವಿನ ಹೆಸರು, ಪೋಷಕರ ಆಧಾರ್ ಸಂಖ್ಯೆ, ಇತ್ಯಾದಿ ನಮೂದಿಸಬೇಕು. ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ಮಗುವಿನ ಜನನ ಪ್ರಮಾಣಪತ್ರ ಮತ್ತು ಒಬ್ಬರ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕಾಗುತ್ತದೆ. ಮಗುವಿನ ಆಧಾರ್ ಕಾರ್ಡ್ ಮಾಡಲು, ಪಾಲಕರ ಮೊಬೈಲ್ ಸಂಖ್ಯೆಯನ್ನು ಸಹ ಕೇಂದ್ರದಲ್ಲಿ ನೋಂದಾಯಿಸಬೇಕು. ಮಗುವಿನ ಫೋಟೋವನ್ನು ನೀಡಬೇಕಾಗುತ್ತದೆ, ಮಗುವಿನ ಕಾರ್ಡ್ ಅನ್ನು ಪೋಷಕರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ. ಅದರ ನಂತರ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಅದರ ನಂತರ ರಶೀದಿ ಸಿಗುತ್ತದೆ. ಮಗುವಿನ ಆಧಾರ್ ಕಾರ್ಡ್‌ನ ನೋಂದಣಿ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಮೊಬೈಲ್ ಸಂಖ್ಯೆ ದೃಢೀಕರಣಕ್ಕಾಗಿ ಎಸ್ ಎಂಎಸ್ ಬರುತ್ತದೆ. ಮಗುವಿನ ಆಧಾರ್ ಸಂಖ್ಯೆ 2 ತಿಂಗಳೊಳಗೆ ಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ