ಕಾಂಗ್ರೆಸ್‌ನವರು ಅಯೋಗ್ಯ ನನ್ನ ಮಕ್ಕಳು; ಪಾಕಿಸ್ತಾನ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಿ: ಯತ್ನಾಳ್ ಆಕ್ರೋಶ

By Sathish Kumar KH  |  First Published Mar 2, 2024, 2:28 PM IST

ರಾಜ್ಯದಲ್ಲಿ ಪಾಕ್ ಪರ ಘೋಷಣೆ ಕೂಗಿದಾಗಲೇ ಹೇಳಿದ್ದೆವು. ಕಾಂಗ್ರೆಸ್‌ನವರಿ ಅಯೋಗ್ಯ ನನ್ನ ಮಕ್ಕಳು ಇದ್ದಾರೆ. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೇ ಹೋಗಿ  ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.


ವಿಜಯಪುರ (ಮಾ.02): ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಪಾಕಿಸ್ತಾನ ಪರ ಘೋಷಣೆ ಆದಾಗಲೇ ಇದನ್ನ ಹೇಳಿದ್ದೆವು. ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಘಟನೆಗೆ ಇಂಬು ಕೊಟ್ಟಿದೆ. ಕಾಂಗ್ರೆಸ್‌ನವರು ಅಯೋಗ್ಯ ನನ್ನ ಮಕ್ಕಳು ಇದ್ದಾರೆ, ಈ ಘಟನೆಯನ್ನ ಭಜರಂಗದಳದ ಮೇಲೆ ಹಾಕುತ್ತಿದ್ದರು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಬೆಂಗಳೂರು ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್‌ ವಿಚಾರದ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಿ. ಗಾಂಧಿ, ನೆಹರು ಕೊಟ್ಟಿರುವ ಪಾಕಿಸ್ತಾನಕ್ಕೆ ಹೋಗಿ . ಇಲ್ಲಿ ಇರೊ ಅವಶ್ಯಕತೆ ಇಲ್ಲ. ಇಲ್ಲಿನ ಅನ್ನ ತಿಂದು ಪಾಕಿಸ್ತಾನ್ ಪರ ಘೋಷಣೆ ಕೂಗುವವರು ಅಲ್ಲಿ ಹೋಗ್ರಿ ಮಕ್ಕಳಾ.! ರಾಜ್ಯದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ನಿಜವಾದ ದೇಶಪ್ರೇಮಿ ಆಗಿದ್ದಾರೆ. ಪಾಕ್ ಘೋಷಣೆ ಹಾಕಿದವರಿಗೆ ಬೇಕಾದ ಶಬ್ಧದಲ್ಲಿ ಬೈಯೊಕೆ‌ ಹೇಳಿದ್ದಾರೆ. ಇಂಥವರು ಎಲ್ಲೆಲ್ಲೋ ಒಬ್ಬರು ದೇಶ ಪ್ರೇಮಿಗಳಿದ್ದಾರೆ. ಪಾಕ್‌ ಮೇಲೆ‌ ಪ್ರೀತಿ ಇದ್ದವರು ಹೋಗಲಿ. ನಾವು ಹಿಂದೂಗಳು, ದಲಿತರು ಆನಂದವಾಗಿ ಇರ್ತೇವೆ. ಪಾಕ್ ಪರ ಘೋಷಣೆ ಕೂಗುವವರಿಗೆ ಇಲ್ಲಿ ಇರೋದಕ್ಕೆ ಯಾವುದೇ ಹಕ್ಕು ಇಲ್ಲ. ನೀವು ಹೀಗೆ ಮಾಡಿದರೆ ದೇಶದಿಂದ ರೋಹಿಂಗ್ಯಾಗಳನ್ನ ಹೊಡೆದು ಓಡಿಸಿದಂತೆ ಓಡಿಸುವ ಕಾಲ ಬರುತ್ತದೆ ಎಂದು ಹೇಳಿದರು.

Tap to resize

Latest Videos

Rameshwaram Cafe Blast: 3 ತಿಂಗಳು ತಯಾರಿ ನಡೆಸಿದ್ದ ವೆಲ್ ಟ್ರೈನ್ಡ್ ಬಾಂಬರ್; ಬಿಎಂಟಿಸಿ ವಜ್ರ ಬಸ್ಸಲ್ಲಿ ಸಂಚಾರ!

ರಾಜ್ಯದಲ್ಲಿ ಕಾಂಗ್ರೆಸ್‌ನವರು ಅಯೋಗ್ಯ ನನ್ನ ಮಕ್ಕಳು ಇದ್ದಾರೆ. ಈ ಘಟನೆಯನ್ನ ಭಜರಂಗದಳದ ಮೇಲೆ ಹಾಕುತ್ತಿದ್ದರು. ಭಜರಂಗದಳವರಿದ್ದರು ಅವರ ಕುಮ್ಮಕ್ಕಿದೆ ಎನ್ನುವಂತಹ ಅಯೋಗ್ಯರಿದ್ದಾರೆ. ಬಾಂಬ್ ಸ್ಪೋಟ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ‌ ಏನಿತ್ತು? ನಾನು ಖರ್ಗೆಯವರಿಗೆ ರಾಜಕಾರಣ ಮಾಡೋದ್ರಲ್ಲಿ ಮಾಡಲಿ. ಆದರೆ, ದೇಶದ ವಿಚಾರ ಬಂದಾಗ ಎಲ್ಲರು ಒಂದಾಗಬೇಕು, ಕಾಂಗ್ರೆಸ್ ಇರಲಿ.. ಬಿಜೆಪಿ ಇರಲಿ ಎಲ್ಲರೂ ಒಂದಾಗಬೇಕು. ಶುಕ್ರವಾರದ ದಿನವೇ ರಾಮೇಶ್ವರಂ ಹೆಸರಿನ ಹೊಟೇಲ್ ಟಾರ್ಗೆಟ್ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡಿದ ಬಳಿಕ ಹೀಗೆ ಮಾಡ್ತಿದ್ದಾರೆ. ಭಯೋತ್ಪಾದಕರ ನಾಶವಾಗುವ ಟೈಂ ಬಂದಿದೆ. ವಿಶೇಷ ಸೌಲಭ್ಯ ತೆಗೆಯಬೇಕು. ದೇಶದಲ್ಲಿ‌ ಸಮಾನ ನಾಗರಿಕ ಸಂಹಿತೆ ಬರಬೇಕು ಎಂದು ತಿಳಿಸಿದರು.

ಭಯೋತ್ಪಾದನೆ ತಡೆಯಲಾದಿದ್ದರೆ ರಾಜೀನಾಮೆ ಕೊಡಲಿ: 
ಕರ್ನಾಟಕ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎನಿಸಿದೆ. ಪಾಕಿಸ್ತಾನ ಪರ ಘೋಷಣೆ ಆದಾಗಲೇ ಇದನ್ನ ಹೇಳಿದ್ದೆವು. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಂಬು ಕೊಡ್ತಿದೆ. ಇದು ಹಿಂದೂಗಳ ಕೃತ್ಯ ಅಲ್ಲ, ಇದಂತು ಸ್ಪಷ್ಟವಾಗಿದೆ. ಬ್ರಾಂಡ್ ಬೆಂಗಳೂರು ಮಾಡಿದಾಗಲೇ ಇದು 'ಬಾಂಬ್ ಬೆಂಗಳೂರು' ಆಗತ್ತದೆ ಎಂದು ಹೇಳಿದ್ದೆನು. ಈ ಬಗ್ಗೆ ಎಚ್ಚೆತ್ತುಕೊಳ್ಳಲಿಲ್ಲ. ರಾಜ್ಯದಲ್ಲಿ ಭಯೋತ್ಪಾದನೆ ನಿಲ್ಲಿಸೋಕೆ ಆಗದಿದ್ದರೆ ಸಿಎಂ ರಾಜೀನಾಮೆ ಕೊಡಲಿ. ವಿಧಾನ ಸಭೆ ವಿಸರ್ಜನೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು Rameshwaram Cafe Blast, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ಸಾಮ್ಯತೆಯಿಲ್ಲ; ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರದಲ್ಲಿ ಜನರ ಜೀವಕ್ಕಿಲ್ಲ ಗ್ಯಾರಂಟಿ: ಇವರು ಗ್ಯಾರಂಟಿ ಗ್ಯಾರಂಟಿ ಎಂದು ಬಾಯಿ ಬಡಿದುಕೊಳ್ಳುತ್ತಾರೆ. ಆದರೆ, ಇಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಗ್ಯಾರಂಟಿ ಆಸೆ ಹಚ್ಚಿ ಲೋಕಸಭೆ ಗೆಲ್ತೀನಿ ಅನ್ನೋದು ಇವರ ಮೂರ್ಖತನ. ಸರಿಯಾಗಿ ತನಿಖೆ ಮಾಡಲು ಆಗದಿದ್ದರೆ, ಮುಂದೆ ದೊಡ್ಡ ಘಟನೆಯಾಗಬೇಕು. ರಾಮೇಶ್ವರಂ ಹೊಟೇಲ್‌ನಲ್ಲಿ ನಡೆದಿದ್ದು ಒಂದು ಪ್ರಯೋಗವಾಗಿದೆ. ಈಗ ರಾಜ್ಯ ಭಯೋತ್ಪಾದಕರ ಪ್ರಯೋಗ ಶಾಲೆಯಾಗಿದೆ. ಇದಕ್ಕೆ ಅವಕಾಶ ಕೊಡಬಾರದು. ನಿಮಗೆ ಭಯೋತ್ಪಾದನೆ ತಡೆಯಲು ಆಗದಿದ್ದರೆ ಮನೆಗೆ ಹೋಗಿ ಎಂದು ಸರ್ಕಾರದ ಕಿವಿ ಹಿಂಡಿದರು.

click me!