
ಹುಬ್ಬಳ್ಳಿ (ಮಾ.2): ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಉಗ್ರರಿಗೆ ಕರ್ನಾಟಕ ಸ್ವರ್ಗವಾಗಿದೆ. ಇಂತಹ ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಇದು ಅತ್ಯಂತ ಅಯೋಗ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಗೊಂಡು ಜನರು ಗಾಯಗೊಂಡಿದ್ದಾರೆ. ಆದರೂ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಇಸ್ಲಾಮಿಕ್ ಮೂಲಭೂತವಾದ ವ್ಯಾಪಕವಾಗಿದೆ. ಎಸ್‌ಡಿಪಿ, ಪಿಎಫ್ಐ ಮೇಲಿನ ಕೇಸ್ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸುವ ಆ ಮೂಲಕ ಈ ಸರ್ಕಾರ ಮೂಲಭೂತವಾದಿಗಳ ಪರ ಇದೆ ಎಂದು ತೋರಿಸಿದ್ದಾರೆ. ಹೀಗಾಗಿ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಯಾವುದೇ ಕ್ರಮ ಇಲ್ಲ. ಕಾಂಗ್ರೆಸ್ ಸರ್ಕಾರದ ಒಲೈಕೆ ರಾಜಕಾರಣದಿಂದ ಸ್ಫೋಟಗಳು ಸಂಭವಿಸುತ್ತಿವೆ ಇದರಿಂದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಈ ನಾನ್ಸೆನ್ಸ್ ಅಪ್ರೋಚ್ ಅನ್ನ ಸಿದ್ದರಾಮಯ್ಯ ಮೊದಲು ನಿಲ್ಲಿಸಬೇಕು ಎಂದು ಹರಿಹಾಯ್ದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬೆನ್ನಲ್ಲೇ ನಗರದಲ್ಲಿ ತೀವ್ರ ಕಟ್ಟೆಚ್ಚರ
ಮುಸ್ಲಿಮರ ವೋಟ್‌ಬ್ಯಾಂಕ್‌ಗೋಸ್ಕರ ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಸರ್ಕಾರ ಸಹಕಾರ ನೀಡುತ್ತಿದೆ. ರಾಷ್ಟ್ರದ್ರೋಹಿಗಳು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ನಾಸಿರ್ ಹುಸೇನ್‌ಗೆ ನಾಚಿಕೆಯಾಗಬೇಕು. ಈ ಪ್ರಕರಣವನ್ನು ಎನ್ ಐಎ ತನಿಖೆ ನೀಡುವಂತೆ ಆಗ್ರಹಿಸುತ್ತೇನೆ. ಸಿದ್ದರಾಮಯ್ಯ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ಉಗ್ರರಿಗೆ ಕರ್ನಾಟಕ ಸುರಕ್ಷಿತ ಅನ್ನಿಸುತ್ತಿದೆ. ಕೆಲವು ಪೊಲೀಸ್ ಇಲಾಖೆ ರಾಜ್ಯಗಳಲ್ಲಿ ಉಗ್ರವಾದಿಗಳಿಗೆ ಸುರಕ್ಷಿತ ಸ್ವರ್ಗವನ್ನಾಗಿ ಮಾಡಿಕೊಟ್ಟಿದ್ದಾರೆ. ಹೀಗಾಗಿ ಯಾವುದೇ ಕಾನೂನಿನ ಭಯವಿಲ್ಲದೆ ಉಗ್ರಕೃತ್ಯಗಳು ನಡೆಯುತ್ತಿವೆ. ಉಗ್ರರಿಗೆ ಕರ್ನಾಟಕ ಸ್ವರ್ಗವಾಗಿದೆ ಎಂದು ಕಿಡಿಕಾರಿದರು.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಗಾಯಾಳು ಮಹಿಳೆಗೆ ಯಶಸ್ವಿ ಸರ್ಜರಿ
ಯಾವುದಕ್ಕಾಗಿ ನಾವು ಈ ಸರ್ಕಾರಕ್ಕೆ ಸಹಕಾರ ನೀಡಬೇಕು? ಈ ಸರ್ಕಾರ ಭಯೋತ್ಪಾದಕತೆ ನಿಲ್ಲಿಸುತ್ತೇವೆ ಅಂದ್ರೆ ನಾವು ಸಹಕಾರ ನೀಡುತ್ತೇವೆ. ಇವರು ನಮ್ಮಿಂದ ಏನು ಬಯಸುತ್ತಿದ್ದಾರೆ?ತುಷ್ಟೀಕರಣಕ್ಕಾಗಿ ಉಗ್ರ ಕೃತ್ಯಗಳನ್ನು ಹಗುರವಾಗಿ ನೋಡುವ ಇದೊಂದು ಹೇಡಿ, ನಾಚಿಕೆಗೇಡಿನ ಸರ್ಕಾರ. ನೀವು ಓಟ್ ಬ್ಯಾಂಕ್ ಗಾಗಿ ದೇಶವನ್ನು ಅಭದ್ರ ಮಾಡುತ್ತಿದ್ದಿರಿ ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಈ ರೀತಿಯ ಚಿಲ್ಲರೆ, ತುಷ್ಟ ರಾಜಕೀಯ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ