ಅಲ್ಲಾನ ಕೃಪೆಯಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ. ತುಮಕೂರಿನ. ಕೊರಟಗೆರೆಯಲ್ಲಿ ನಡೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪಾಲ್ಗೊಂಡ ಮಾತನಾಡಿದರು.
ತುಮಕೂರು (ಜೂ.30) : ಅಲ್ಲಾನ ಕೃಪೆಯಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನ. ಕೊರಟಗೆರೆಯಲ್ಲಿ ನಡೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಪ್ರಪ್ರಥಮವಾಗಿ ಅಲ್ಲಾಗೆ ನಾನು ನಮನ ಸಲ್ಲಿಸ್ತಿನಿ, ಇಡೀ ವಿಶ್ವಕ್ಕೆ ಸಂದೇಶ ಕೊಡುವ ಬಕ್ರಿದ್ ಹಬ್ಬ ಇದು, ನಾನು ಎಲ್ಲರಿಗೂ ನಮನಗಳನ್ನ ಹೇಳ್ತಿನಿ, ಅಲ್ಲಾ ಎಲ್ಲರಿಗೂ ಅನೇಕ ರೀತಿ ಪರೀಕ್ಷೆ ಮಾಡ್ತಾನೆ. ಅದರಲ್ಲೂ ಮನುಷ್ಯರಿಗೆ ಹೆಚ್ಚು ಪರೀಕ್ಷೆ ಮಾಡ್ತಾನೆ.ಮಹಮ್ಮದ್ ಇಬ್ರಾಹಿಂ ಇಡೀ ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ ಎಂದರು.
ಅಕ್ಕಿ ಬದಲು ಹಣ ಕೊಡಿ ಎಂದವರಿಂದಲೇ ಈಗ ಟೀಕೆ, ಬಡವರ ಹಸಿವಲ್ಲಿ ರಾಜಕೀಯ ಬೇಡ: ಸಚಿವ ಪರಮೇಶ್ವರ್
ಚುನಾವಣಾ ಸಂದರ್ಭದಲ್ಲಿ ನಿಮ್ಮ ಬಳಿ ಬಂದು ನಿಮ್ಮ ಅಶೀರ್ವಾದ ಕೇಳಿದ್ದೆ, ನೀವೆಲ್ಲಾ ಕೊಟ್ಟಿದ್ದೀರಿ, ಅಲ್ಲಾನ ಕೃಪೆಯಿಂದ ಇವತ್ತು ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಅಶೀರ್ವಾದದಿಂದ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾದ ಕೆಲಸ ನನ್ನದು. ಇದರಲ್ಲಿ ಯಾವುದೇ ಮುಲಾಜಿಲ್ಲದೇ ನನ್ನ ಕೆಲಸವನ್ನ ನಿಬಾಯಿಸ್ತಿನಿ. ನಾನು ಶಾಂತಿ ಕಾಪಾಡ್ತಿನಿ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ, ಇಡೀ ರಾಜ್ಯದಲ್ಲಿ ಶಾಂತಿ ಕಾಪಾಡ್ತಿನಿ, ಎಲ್ಲಾ ಕಷ್ಟಗಳಿಗೂ ಅಲ್ಲಾ ಸಹಕಾರ ಮಾಡ್ತಾನೆ ಎಂದು ಹೇಳಿದರು.
ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು: ಪರಮೇಶ್ವರ್
ತುಮಕೂರು: ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ ಎಂದರು
ಇನ್ನೊಂದು ವಾರದಲ್ಲಿ 3500 ಪೊಲೀಸ್ ಕಾನ್‌ಸ್ಟೇಬಲ್ ನೇಮಕ: ಸಚಿವ ಪರಮೇಶ್ವರ್
ಬಕ್ರೀದ್ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು. ನಾವು ದುಡ್ಡು ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಎಫ್‌ಸಿಐನಲ್ಲಿ 7 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಖಾಸಗಿಯವರಿಗೆ ಮಾರುತ್ತಿದ್ದಾರೆ ಎಂದು ದೂರಿದರು. 5 ಕೆ.ಜಿ. ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಕೇವಲ ಮೂರು ತಿಂಗಳ ಕಾಲ ಮಾತ್ರ ದುಡ್ಡು ಕೊಡುತ್ತೇವೆ. ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ. ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿಯವರೇ ಬೊಬ್ಬೆ ಹೊಡೆದರು. ಈಗ ಏಕಾಏಕಿ ಟೀಕೆ ಮಾಡುತ್ತಿದ್ದಾರೆ. ಬಡವರ ಹಸಿವಿನ ವಿಚಾರದಲ್ಲಿ ಹೀಗೆ ರಾಜಕೀಯ ಮಾಡಬಾರದು ಎಂದರು.