ತುಮಕೂರು ತಲುಪಿದ ಹೇಮಾವತಿ ನೀರು: ಕುಡಿಯುವ ನೀರಿನ ಆತಂಕ ದೂರ

By Sathish Kumar KH  |  First Published Jun 30, 2023, 1:35 PM IST

ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹರಿದು ಬಂದ ಹೇಮಾವತಿ ನೀರು ಗುರುವಾರ ಮಧ್ಯರಾತ್ರಿ ವೇಳೆಗೆ ತುಮಕೂರಿನ ಬುಗುಡನಹಳ್ಳಿಗೆ ತಲುಪಿದೆ. ಈ ಮೂಲಕ ತುಮಕೂರು ಜನರಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ.


ತುಮಕೂರು (ಜೂ.30): ರಾಜ್ಯದ ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹರಿದು ಬಂದ ನೀರು ಗುರುವಾರ ಮಧ್ಯರಾತ್ರಿ ವೇಳೆಗೆ ತುಮಕೂರಿನ ಬುಗುಡನಹಳ್ಳಿಗೆ ತಲುಪಿದೆ. ಈ ಮೂಲಕ ತುಮಕೂರು ನಗರ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ.

ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಯಡಿ ಹಾಸನ ಜಿಲ್ಲೆ ಗೊರೂರು ಜಲಾಶಯದಿಂದ ಹೇಮಾವತಿ ಕಾಲುವೆಗೆ ನೀರನ್ನು ಹರಿಸಲಾಗಿತ್ತು. ನೀರು ಹರಿಸಿದ ಕೆಲವೇ ದಿನಗಳಲ್ಲಿ ಹೇಮಾವತಿ ನೀರು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಗುರುವಾರ ಮಧ್ಯರಾತ್ರಿ ಬಂದು ತಲುಪಿದೆ. ಈ ಮೂಲಕ ತುಮಕೂರು ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ. ಇನ್ನು ಪ್ರಸ್ತುತ ನೀರಿನ ಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ಸ್‌ಗೂ ಅಧಿಕವಾಗಿದೆ. ಇನ್ನು ನಾಲೆಯ ಒಳ ಹರಿವಿನ ಪ್ರಮಾಣ 500 ಕ್ಯೂಸೆಕ್ಸ್ ಇದೆ ಎಂದು ತಿಳಿದುಬಂದಿದೆ.

Tap to resize

Latest Videos

ಕೊಟ್ಟ ಮಾತಿನಂತೆ ನೀರು ಹರಿಸಿದ ಬಿಎಸ್‌ವೈ: ಕೇಂದ್ರ ಸಚಿವ ನಾರಾಯಣಸ್ವಾಮಿ

ಅಗತ್ಯ ಸಿದ್ಧತೆಗೆ ಸೂಚಿಸಿದ್ದ ಶಾಸಕ ಸುರೇಶ್‌ಗೌಡ: 
ತುಮಕೂರು: ಮುಂದಿನ ತಿಂಗಳು ಮೊದಲ ವಾರದಲ್ಲಿ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆಯಾಗಲಿದ್ದು, ಹೇಮಾವತಿ ನಾಲಾ ವಲಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಬಿ.ಸುರೇಶ್‌ಗೌಡ ಅಧಿಕಾರಿಗಳಿಗೆ ನಿರ್ದೇಶಿಸಿದರು. ಈ ಕುರಿತು ಜೂ.6ರಂದು ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಜತೆ ಸಭೆ ನಡೆಸಿ ಹೆಟ್ಟೂರು- ಗೂಳೂರು, ಬೆಳ್ಳಾವಿ ಏತ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು. ಈ ವೇಳೆ ಮಾತನಾಡಿದ್ದ ಅವರು, ಹೆಬ್ಬರು- ಗೂಳೂರು ಏತ ನೀರಾವರಿ ಯೋಜನೆ ಜಾರಿಯಾಗಿ 15 ವರ್ಷ ಕಳೆದಿದೆ. ಆದರೆ ಇದುವರೆಗೂ ಜನರಿಗೆ ಸಮರ್ಪಕ ನೀರು ಒದಗಿಸಲು ಆಗಿಲ್ಲ. ಈ ನೀರನ್ನೇ ಆಧಾರವಾಗಿಟ್ಟುಕೊಂಡು ರೂಪಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಬಾರಿ ನಿಗದಿಪಡಿಸಿದ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಹೇಳಿದರು.

ಅಕ್ಕಿ ಬದಲು ಹಣ ಕೊಡಿ ಎಂದವರಿಂದಲೇ ಈಗ ಟೀಕೆ, ಬಡವರ ಹಸಿವಲ್ಲಿ ರಾಜಕೀಯ ಬೇಡ: ಸಚಿವ ಪರಮೇಶ್ವರ್‌

ಎತ್ತಿನಹೊಳೆಯಿಮದ ನೀರು ತುಂಬಿಸಲು ಚರ್ಚೆ: ಹೇಮಾವತಿ ನಾಲೆಯಿಂದ ಯಾವುದೇ ಅಡೆತಡೆ ಇಲ್ಲದೆ ಕೆರೆಗೆ ನೀರು ಹರಿಯಲು ಕ್ರಮಕೈಗೊಳ್ಳಬೇಕು. ಹೆಟ್ಟೂರು- ಗೂಳೂರು ಮತ್ತು ಬೆಳ್ಳಾವಿ ಏತ ನೀರಾವರಿ ಯೋಜನೆ ನಿರ್ವಹಣೆಗೆ ಸಂಬಂಧಪಟ್ಟ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಹೆಟ್ಟೂರು- ಗೂಳೂರು ಏತ ನೀರಾವರಿ ಎರಡನೇ ಹಂತದ ಕಾರ್ಯ ಪೂರ್ಣಗೊಂಡಿದೆ. ಪೈಪ್‌ಲೈನ್‌ಗೆ 13 ಹಳ್ಳಿಗಳಲ್ಲಿ ಸುಮಾರು 7 ಎಕರೆಗೂ ಹೆಚ್ಚು ಜಾಗ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಎತ್ತಿನ ಹೊಳೆಯಿಂದ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿ, ತಿಮ್ಮನಾಯಕನಹಳ್ಳಿ, ಹಾಲುಗೊಂಡನಹಳ್ಳಿ ಕೆರೆಗಳಿಗೆ ನೀರು ತುಂಬಿಸಲು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ನಿರ್ದೇಶನ ನೀಡಿದರು.

click me!