'ಶಕ್ತಿ' ಯೋಜನೆಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಆರ್ಥಿಕ ಚೈತನ್ಯ ನೀಡುತ್ತಿದೆಯಾದರೂ ಸರ್ಕಾರಕ್ಕೆ ಮಾತ್ರ ಆರ್ಥಿಕ ಹೊರೆ ತಂದೊಡ್ಡುತ್ತಿದೆ. ಯೋಜನೆ ಜಾರಿಗೆ ಪ್ರಸಕ್ತ ಸಾಲಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಈಗಾಗಲೇ ಶೇ. 99ರಷ್ಟು ವ್ಯಯವಾಗಿದ್ದು, ಬಾಕಿ 3 ತಿಂಗಳು ಯೋಜನೆ ಜಾರಿಗೆ 1,578 ಕೋಟಿರು. ಹೆಚ್ಚುವರಿ ಅನುದಾನ ನೀಡುವಂತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ.
ಗಿರೀಶ್ ಗರಗೆ
ಬೆಂಗಳೂರು (ಡಿ.17): 'ಶಕ್ತಿ' ಯೋಜನೆಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಆರ್ಥಿಕ ಚೈತನ್ಯ ನೀಡುತ್ತಿದೆಯಾದರೂ ಸರ್ಕಾರಕ್ಕೆ ಮಾತ್ರ ಆರ್ಥಿಕ ಹೊರೆ ತಂದೊಡ್ಡುತ್ತಿದೆ. ಯೋಜನೆ ಜಾರಿಗೆ ಪ್ರಸಕ್ತ ಸಾಲಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಈಗಾಗಲೇ ಶೇ. 99ರಷ್ಟು ವ್ಯಯವಾಗಿದ್ದು, ಬಾಕಿ 3 ತಿಂಗಳು ಯೋಜನೆ ಜಾರಿಗೆ 1,578 ಕೋಟಿರು. ಹೆಚ್ಚುವರಿ ಅನುದಾನ ನೀಡುವಂತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಅನುಷ್ಠಾನಗೊಳಿಸಿದೆ. ಕಳೆದ ಜೂ. 11ರಿಂದ ಡಿ.9ರವರೆಗೆ 115.19 ಕೋಟಿ ಮಹಿಳಾ ಪ್ರಯಾಣಿಕರು ನಿಗಮಗಳ ಬಸ್‌ಗಳಲ್ಲಿ 'ಉಚಿತ ಪ್ರಯಾಣ ಮಾಡಿದ್ದಾರೆ.
‘ಶಕ್ತಿ’ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್ ನೀಡಿಕೆಗೆ ಗ್ರಹಣ
ಸರ್ಕಾರದ ನಿರೀಕ್ಷೆಗೂ మిరి ಯೋಜನೆ ಯಶಸ್ವಿಗೊಂಡಿದ್ದು, ಪ್ರತಿದಿನ ಸರಾಸರಿ 60ರಿಂದ 65 ಲಕ್ಷ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ನಿಗದಿ ಮಾಡಿದ್ದ ಅನುದಾನಸಾಲದಂತಾಗಿದ್ದು, ಹೆಚ್ಚುವರಿ ಅನುದಾನಕ್ಕೆ ನಿಗಮಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.
4,300 ಕೋಟಿ ರು.ದಾಟಲಿದೆ ಯೋಜನೆ ವೆಚ್ಚ:
ಒಂದು ವರ್ಷಕ್ಕೆ ಶಕ್ತಿ ಯೋಜನೆಗಾಗಿ 3,500 ಕೋಟಿ ರು.ನಿಂದ 4 ಸಾವಿರ ಕೋಟಿ ರು. ಅವಶ್ಯಕತೆಯಿಂದ ಎಂದು ರಾಜ್ಯ ಸರ್ಕಾರ ಯೋಜನೆ ಜಾರಿಗೂ ಮುನ್ನ ಅಂದಾಜಿಸಿತ್ತು. ಹೀಗಾಗಿಯೇ ಪ್ರಸಕ್ತ ಸಾಲಿನಲ್ಲಿ ಯೋಜನೆಗಾಗಿ 2,800 ಕೋಟಿ ರು. ಅನುದಾನ ನಿಗದಿ ಮಾಡಿದೆ. ಯೋಜನೆಯನ್ನು ಜೂನ್‌ನಲ್ಲಿ ಆರಂಭಿಸಲಾಗಿರುವ ಕಾರಣ ಅಷ್ಟು ಅನುದಾನ ಸಾಕಾಗಲಿದೆ ಎಂದು ಲೆಕ್ಕ ಹಾಕಲಾಗಿತ್ತು. ಆದರೆ, ಯೋಜನೆ ಜಾರಿಗೆ ಬಂದ 7 ತಿಂಗಳಲ್ಲಿಯೇ ಯೋಜನೆಗಾಗಿ ಮೀಸಲಿಟ್ಟ ಅನುದಾನದ ಪೈಕಿ 2,750 ಕೋಟಿ ರು. (ಡಿ. 15ರವರೆಗೆ) ವ್ಯಯಿಸಲಾಗಿದೆ. 50 ಲಕ್ಷ ರು ಮಾತ್ರ ಬಾಕಿ ಇದ್ದು, ಡಿ.18ರೊಳಗೆ ಖಾಲಿ ಆಗಲಿದೆ.
ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ ಮೂರುವರೆ ತಿಂಗಳು ಬಾಕಿಯಿರುವ ಕಾರಣ, ಹೆಚ್ಚು ವರಿಯಾಗಿ 1,577.96 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಿಗಮಗಳು ಸಲ್ಲಿಸಿದ ಪ್ರಸ್ತಾವನೆ ಯಂತೆ ಸರ್ಕಾರ ಅನುದಾನ ನೀಡಿದರೆ 9 ತಿಂಗಳು 20 ದಿನಕ್ಕೆ (ಜೂ. 11ರಂದು ಯೋಜನೆ ಆರಂಭ) 4,377.96 ಕೋಟಿ ರು. ವ್ಯಯಿಸಿದಂತಾಗಲಿದೆ
₹ 5,400 ಕೋಟಿ ತಲುಪಲಿದೆ ಯೋಜನಾ ವೆಚ್ಚ
ರಾಜ್ಯ ಸರ್ಕಾರ ಯೋಜನೆ ಆರಂಭಕ್ಕೂ ಮುನ್ನ ಶಕ್ತಿ ಯೋಜನೆಗಾಗಿ ವಾರ್ಷಿಕ 3,500 ಕೋಟಿ ರು.ನಿಂದ 4 ಸಾವಿರ ಕೋಟಿ ರು. ಖರ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಯೋಜನೆಗಾಗಿ ಸದ್ಯ ಪ್ರತಿ ತಿಂಗಳು ಸರಾಸರಿ 450 ಕೋಟಿ ರು. ಖರ್ಚಾಗುತ್ತಿದೆ. ಅದನ್ನು ಗಮನಿಸಿದರೆ 2024-25ನೇ ಸಾಲಿನಲ್ಲಿ ಯೋಜನಾ ವೆಚ್ಚ 5,400 ಕೋಟಿ ರು.ಗೆ ತಲುಪುವ ಸಾಧ್ಯತೆಗಳಿವೆ.
ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ
ಹೆಚ್ಚುವರಿ ಹಣಕ್ಕೆ ಪ್ರಸ್ತಾವ
ಶಕ್ತಿ ಯೋಜನೆಗೆ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಎಂ ಕೂಡ ಅನುದಾನ ನೀಡುವ ಭರವಸೆ ನೀಡಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ. ಯೋಜನೆಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಾಗುವುದಿಲ್ಲ.
• ರಾಮಲಿಂಗಾರೆಡ್ಡಿ ಸಾರಿಗೆ ಸಚಿವ