ಲೆಕ್ಕ ಸಹಾಯಕರ ಹುದ್ದೆಗೆ ಇಂದು ಬಿಗಿಭದ್ರತೆಯಲ್ಲಿ ಕೆಪಿಎಸ್ಸಿ ಪರೀಕ್ಷೆ, ಈ ವಸ್ತುಗಳು ತರುವಂತಿಲ್ಲ!

By Kannadaprabha NewsFirst Published Dec 17, 2023, 10:55 AM IST
Highlights

ಇತ್ತೀಚಿನ ಸರ್ಕಾರಿ ಹುದ್ದೆಗಳ ನೇಮಕದ ಪರೀಕ್ಷಾ ಅಕ್ರಮದಿಂದ ರಾಜ್ಯ ಸರ್ಕಾರ ಮತ್ತಷ್ಟು ಎಚ್ಚೆತ್ತಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಕಿರಿಯ ಲೆಕ್ಕ ಸಹಾಯಕರ 67 (ಆರ್.ಪಿ.ಸಿ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಕೆಪಿಎಸ್‌ಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರು (ಡಿ.17): ಇತ್ತೀಚಿನ ಸರ್ಕಾರಿ ಹುದ್ದೆಗಳ ನೇಮಕದ ಪರೀಕ್ಷಾ ಅಕ್ರಮದಿಂದ ರಾಜ್ಯ ಸರ್ಕಾರ ಮತ್ತಷ್ಟು ಎಚ್ಚೆತ್ತಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಕಿರಿಯ ಲೆಕ್ಕ ಸಹಾಯಕರ 67 (ಆರ್.ಪಿ.ಸಿ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಕೆಪಿಎಸ್‌ಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

 ಅಭ್ಯರ್ಥಿಗಳ ನೈಜತೆ ಪತ್ತೆಗೆ 'ಬಯೋಮೆಟ್ರಿಕ್ ಫೇಸ್ ರೆಕಗ್ನಿಷನ್' ವ್ಯವಸ್ಥೆ ಬಳಕೆ ಮಾಡಲಾಗುತ್ತಿದೆ. ಇದೇ ವೇಳೆ, ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ವರ್ಕ್ ಜಾಮರ್‌ ಅಳವಡಿಸಲಾಗಿದ್ದು, ಪರೀಕ್ಷಾ ಉಪ ಕೇಂದ್ರಗಳ ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾವನ್ನು ಅಳವಡಿಸಲಾಗುತ್ತದೆ. ಈ ಮೂಲಕ ಬ್ಲೂಟೂತ್ ಬಳಸಿ ಪರೀಕ್ಷಾ ಅಕ್ರಮ ನಡೆಸುವ ಹುನ್ನಾರಗಳಿಗೆ ಕಡಿವಾಣ ಹಾಕಲಾಗಿದೆ.

4 ವರ್ಷದಿಂದ ನಡೆಯದ ಎಫ್‌ಡಿಎ, ಎಸ್‌ಡಿಎ ನೇಮಕಾತಿ, 150 ಹುದ್ದೆಗಳ ನೇಮಕಕ್ಕೆ 5 ಲಕ್ಷಕ್ಕೂ ಹೆಚ್ಚು ಅರ್ಜಿ ನಿರೀಕ್ಷೆ!

ಕೇವಲ ಸರ್ಕಾರಿ ಕಾಲೇಜಲ್ಲಿ ಪರೀಕ್ಷೆ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ

ಪರೀಕ್ಷಾ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇವಲ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಪರೀಕ್ಷಾ ಉಪಕೇಂ ದ್ರಗಳಾಗಿ ಆರಿಸಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಧಾರವಾಡ, ಯಾದಗಿರಿ ಸೇರಿ 22 ಜಿಲ್ಲಾ ಕೇಂದ್ರಗಳಲ್ಲಿನ 114 ಪರೀಕ್ಷಾ ಉಪ ಕೇಂದ್ರಗಳಲ್ಲಿ 44 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ.

2,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಸಜ್ಜು

ಇವುಗಳು ನಿಷಿದ್ದ

  • ಯಾವುದೇ ಆಧುನಿಕ ಉಪಕರಣ, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ ಕ್ಯುಲೇಟರ್, ವೈಟ್ ಫ್‌ಲ್ಯೂಯೆಡ್, ವೈರ್‌ಲೆಸ್‌ ಸೆಟ್‌ಗಳು, ಪೇಪರ್, ಬುಕ್ ತೆಗೆದುಕೊಂಡು ಹೋಗುವಂತಿಲ್ಲ.
  •  ಮಂಗಳಸೂತ್ರ, ಕಾಲುಂಗರ ಹೊರತುಪಡಿಸಿ ಯಾವುದೇ ಆಭರಣ ಧರಿಸುವಂತಿಲ್ಲ.
  • ಕಿವಿ, ಬಾಯಿ ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ಫಿಲ್ಟರ್‌ಇರುವ ಫೇಸ್ ಮಾಸ್ಕ್ ಅನ್ನು ಧರಿಸುವಂತಿಲ್ಲ.
  •  ತುಂಬು ತೋಳಿನ ಶರ್ಟ್, ಪುಲ್ ಓವರ್, ಜಾಕೆಟ್, ಸೈಟರ್ ಧರಿಸುವಂತಿಲ್ಲ.
  • ಲೋಹದ ನೀರಿನ ಬಾಟಲಿ, ಪಾರದರ್ಶಕವಲ್ಲದ ನೀರಿನ ಬಾಟಲಿಗೆ ನಿಷೇಧ.
click me!