ಶಿವಮೊಗ್ಗದ ಅಭಿವೃದ್ಧಿಗೆ ಕೇಂದ್ರ ಕೊಟ್ಟ ಅನುದಾನ ವಾಪಸಾತಿಗೆ ಪತ್ರ ಬರೆದ ರಾಜ್ಯ ಸರ್ಕಾರ!

By Sathish Kumar KHFirst Published Jan 15, 2024, 3:34 PM IST
Highlights

ಶಿವಮೊಗ್ಗ ಜಿಲ್ಲೆಯ 10 ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರವೇ ಪತ್ರವನ್ನು ಬರೆದಿದೆ.

ಶಿವಮೊಗ್ಗ (ಜ.15): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ 10 ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರವೇ ಪತ್ರವನ್ನು ಬರೆದಿದೆ.

ಈ ಕುರಿತು ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಿದ್ದು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಂದಿದ್ದು, ವಿಮಾನ ನಿಲ್ದಾಣ ಮಾಡಿದ್ದು ಯಾರು? ಎಂದು ಜಿಲ್ಲೆಯ ಜನತೆಯನ್ನೇ ಕೇಳಿ, ಅವರೇ ಉತ್ತರ ನೀಡ್ತಾರೆ. ಕಳೆದ 15 ವರ್ಷಗಳಲ್ಲಿ ಜಿಲ್ಲೆಗೆ ಬಿಜೆಪಿ ಏನು ಮಾಡಿದೆ ಎಂದು ಕೇಳುವ ನೀವು, ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಮೊದಲು ಲೆಕ್ಕ ಕೊಡಿ, ಆಮೇಲೆ ಮಾತನಾಡಿ ಎಂದು ಕಿಡಿಕಾರಿದರು.

Latest Videos

ಹಾವೇರಿ ಗ್ಯಾಂಗ್‌ ರೇಪ್ ಸಂತ್ರಸ್ತೆ ಬಗ್ಗೆ ಮಾನವೀಯತೆಯನ್ನೂ ತೋರಿಸದ ಸಿಎಂ ಸಿದ್ದರಾಮಯ್ಯ!

ಮುಂದುವರೆದು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಪದೇ ಪದೇ ಅಡ್ಡಗಾಲು ಹಾಕುತ್ತಲೇ ಇದ್ದಾರೆ. ಅದರಲ್ಲೂ ಜಿಲ್ಲೆಯ ಹತ್ತು ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಮಂಜೂರಾಗಿದ್ದ ಅನುದಾನ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರ ಪತ್ರವನ್ನು ಬರೆದಿದೆ. ರಾಜ್ಯ ಸರ್ಕಾರದ್ದು ಇದ್ಯಾವ ಸೀಮೆ ರಾಜಕೀಯ? ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಯೋಜನೆಗಳಿಗೆ ದುಡ್ಡು ಕೊಡೋದಿರಲಿ, ಸದ್ಯ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಧಮ್ಕಿ ಹಾಕೋದು ನಿಲ್ಲಿಸಿದರೆ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಿದ್ದು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಬಂದಿದ್ದು, ವಿಮಾನ ನಿಲ್ದಾಣ ಮಾಡಿದ್ದು ಯಾರು? ಎಂದು ಜಿಲ್ಲೆಯ ಜನತೆಯನ್ನೇ ಕೇಳಿ, ಅವರೇ ಉತ್ತರ ನೀಡ್ತಾರೆ.

ಕಳೆದ 15 ವರ್ಷಗಳಲ್ಲಿ ಜಿಲ್ಲೆಗೆ ಬಿಜೆಪಿ ಏನು ಮಾಡಿದೆ ಎಂದು ಕೇಳುವ ನೀವು, ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಮೊದಲು ಲೆಕ್ಕ… pic.twitter.com/AMDHZ0TAoG

— B Y Raghavendra (@BYRBJP)

ಅನಂತ್ ಕುಮಾರ್ ಹೆಗಡೆ ಅವರದ್ದು ವೈಯಕ್ತಿಕ ಹೇಳಿಕೆ, ಪಕ್ಷದ್ದಲ್ಲ: ಸಂಸದರಿಗೆ ಕೈಕೊಟ್ರಾ ರಾಜ್ಯಧ್ಯಕ್ಷ ವಿಜಯೇಂದ್ರ!

ಮಧು ಬಂಗಾರಪ್ಪ ಮೊದಲು ಈ ರೀತಿ ಇರಲಿಲ್ಲ:
ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮೊದಲು ಈ ರೀತಿ ಇರಲಿಲ್ಲ. ಇವರು ಯಾರದ್ದೋ ಚುಚ್ಚು ಮಾತನ್ನು ಕೇಳಿಕೊಂಡು ಈ ರೀತಿ ಮಾಡುತ್ತಿದ್ದಾರೆ. ನಿಮ್ಮ ಕೈಯಿಂದ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ, ಸುಮ್ಮನಿರಿ. ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೂ ಯಾಕೆ ಅಡ್ಡಿಪಡಿಸುತ್ತೀರಿ. ನೀವು ಅಭಿವೃದ್ಧಿ ಮಾಡದಿದ್ದರೂ ಹೋಯ್ತು, ಈಗಾಗೇ ಸಾಂಕ್ಷನ್ ಆಗಿರುವುದರ ಯೋಜನೆಗಳ ಅಭಿವೃದ್ಧಿಗೆ ಸಹಕಾರ ಕೊಟ್ಟರೂ ನಿಮಗೆ ಒಳ್ಳೆಯ ಹೆಸರಾದರೂ ಬರುತ್ತದೆ.
- ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸಂಸದ

click me!