ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!

By Sathish Kumar KH  |  First Published Jan 15, 2024, 2:09 PM IST

ಶ್ರೀರಾಮನ ಜನ್ಮಸ್ಥಳ ಆಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಆಗುತ್ತಿದೆ. ಈಗ ಅದೇ ರೀತಿ ರಾಮನ ಭಕ್ತ ಹನುಮನ ಜನ್ಮಸ್ಥಳ ಅಂಜನಾದ್ರಿ ಕೂಡ ವಿಸ್ಮಯ ತಾಣವಾಗುತ್ತಿದೆ.


ಕೊಪ್ಪಳ (ಜ.15): ರಾಮ ಮಂದಿರ ಲೋಕಾರ್ಪಣೆ ದಿನ ಹತ್ತಿರವಾಗ್ತಾ ಇದ್ದ ಹಾಗೇ ರಾಮ ಭಕ್ತರಲ್ಲಿ ಖುಷಿ ದುಪ್ಪಟ್ಟಾಗ್ತಾ ಇದೆ. ಅಯೋಧ್ಯಾ ನಗರಿಗೆ ಆದಷ್ಟು ಬೇಗ ಹೋಗಬೇಕು ರಾಮನ ದರ್ಶನ ಪಡೀಬೇಕು ಅನ್ನೋದು ಕೋಟಿ ಕೋಟಿ ಭಕ್ತರ ಕನಸು. ನೀವು ಅಯೋಧ್ಯೆಗೆ ಹೋಗೋಕೆ ಮೊದಲು ಒಂದು ದೇವಸ್ಥಾನಕ್ಕೆ ಭೇಟಿಯನ್ನ ಕೊಟ್ಟೇ ಮುಂದೆ ಸಾಗಬೇಕು. ಅದು ರಾಮ ಭಕ್ತ ಆಂಜನೇಯನ ಗುಡಿ. ಆಂಜನೇಯನಿಗೂ ರಾಮನಿಗೂ ಇರೋ ನಂಟೇ ತುಂಬಾ ಅಪೂರ್ವವಾಗಿದ್ದು. ರಾಮನ ಪರಮ ಭಕ್ತ ಆಂಜನೇಯ ನಮ್ಮ ಕರ್ನಾಟಕದ ವೀರ.

ಅಂಜನಾದ್ರಿ ಹನುಮನ ಜನ್ಮಸ್ಥಳ ಅನ್ನೋದು ಪುರಾಣದಲ್ಲೂ ಉಲ್ಲೇಖವಿದೆ. ಆದ್ರೆ ಹನುಮ ಹುಟ್ಟಿದ್ದು ಆಂಧ್ರ  ಪ್ರದೇಶದಲ್ಲಿ ಅನ್ನೋ ವಿವಾದ ಶುರುವಾಗಿತ್ತು. ಅಂಜನಾದ್ರಿ ಬೆಟ್ಟವನ್ನ ಹನುಮಂತನ ಜನ್ಮಸ್ಥಾನವಾದ್ರೂ ಕೂಡ  ಅನೇಕರು ಜನ್ಮಸ್ಥಾನದ ಬಗ್ಗೆ ವಿವಾದ ಹುಟ್ಟು ಹಾಕೋಕೆ ನೋಡಿದ್ದರು. ಆಂಜನೇಯ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿಯಲ್ಲಿ ಅಲ್ಲ, ಆಂಧ್ರದ ತಿರುಪತಿಯಲ್ಲಿ ಅನ್ನೋ ವಿವಾದ ಸೃಷ್ಟಿಯಾಗಿತ್ತು. ಆದ್ರೆ ಹನುಮನ ಶಕ್ತಿ ಮುಂದೆ ಅದೆಲ್ಲವೂ ಕ್ಷೀಣವಾಯ್ತು. ವಿವಾದ ಹಚ್ಚಿದವರಿಗೆ ಸಾಕ್ಷಿ ಕೊಡೋಕೆ ಸಾಧ್ಯವೇ ಆಗಲಿಲ್ಲ. 

Tap to resize

Latest Videos

undefined

ಅಂಜನಾದ್ರಿ ಬೆಟ್ಟದಲ್ಲಿ ಇರೋ ಹನುಮನ ದೇವಸ್ಥಾನಕ್ಕೆ ಹೋಗೋದು ಹೇಗೆ..? ಅಲ್ಲಿರೋ ವ್ಯವಸ್ಥೆಗಳೇನು ಇಲ್ಲಿದೆ ಮಾಹಿತಿ. ಇನ್ನು ಹಂಪಿಗೆ ಹೋದವರು ಸಾಮಾನ್ಯವಾಗಿ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡ್ತಾರೆ. ಆದ್ರೆ ಅನೇಕರಿಗೆ ಅಲ್ಲಿ ತಲುಪೋಕೆ ಇರೋ ವ್ಯವಸ್ಥೆಗಳ ಬಗ್ಗೆ ಗೊತ್ತಿರಲ್ಲ. ಹಾಗಾಗಿ, ಭಕ್ತರಿಗೆ ಇಂಚಿಂಚು ಮಾಹಿತಿಯನ್ನೂ ನೀಡಲಾಗುತ್ತಿದೆ.

ಹಾವೇರಿ ಗ್ಯಾಂಗ್‌ ರೇಪ್ ಸಂತ್ರಸ್ತೆ ಬಗ್ಗೆ ಮಾನವೀಯತೆಯನ್ನೂ ತೋರಿಸದ ಸಿಎಂ ಸಿದ್ದರಾಮಯ್ಯ!

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಕೊಪ್ಪಳದ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮಧೂತ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ಸಾಧ್ಯತೆಗಳಿವ ಹಿನ್ನೆಲೆಯಲ್ಲಿ ಅಂಜನಾದ್ರಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗುತ್ತಿದೆ.

ಅಂಜನಾದ್ರಿಯಲ್ಲಿ ಭದ್ರತೆಗಾಗಿ ಕೆಎಸ್‌ಆರ್‌ಪಿ ಜೊತೆಗೆ, 250 ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು 15 ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಕೂಡ ಸ್ಥಾಪಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಹಂಪಿಯ ಸಮೀಪದಲ್ಲಿರುವ ಅಂಜನಾದ್ರಿ ಹನುಮಂತನ ಜನ್ಮಸ್ಥಳವೆಂದು ನಂಬಲಾಗಿದೆ, ಹೀಗಾಗಿ ಈ ಪ್ರದೇಶ ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ನಡುವೆ ರಾಮಮಂದಿರ ಶಂಕುಸ್ಥಾಪನೆಯ ದಿನದಂದೇ ಅಂಜನಾದ್ರಿ ಬೆಟ್ಟದ ತಳದಲ್ಲಿ ಹನುಮಾನ್ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಕಿಷ್ಕಿಂದಾ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಮಠಾಧೀಶ ಗೋವಿಂದಾನಂದ ಸರಸ್ವತಿ ತಿಳಿಸಿದ್ದಾರೆ.

ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ; ಶಾಸಕ ಜನಾರ್ದನ ರೆಡ್ಡಿ ಭರವಸೆ

ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 3-4 ವರ್ಷಗಳು ಬೇಕಾಗುತ್ತದೆ, ನಂತರ ಅಯೋಧ್ಯೆ ಮತ್ತು ಅಂಜನಾದ್ರಿ ಎರಡೂ ದೇವಾಲಯಗಳಿಗೂ ಭಕ್ತರು ಭೇಟಿ ನೀಡಬಹುದು. ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿಯನ್ನು ಜನರಿಗೆ ತಿಳಿಸುವ ಅಗತ್ಯತೆಯ ಬಗ್ಗೆ ಕೇಂದ್ರ ಸರ್ಕಾರವೂ ವಿವರಿಸಿದೆ ಎಂದು ಹೇಳಿದ್ದಾರೆ. ರ್ಕಾರದ ನೆರವಿನೊಂದಿಗೆ ಪ್ರವಾಸಿಗರಿಗೆ ವಸತಿ ಸೌಕರ್ಯಗಳ ನೀಡಲು ಹಾಗೂ ಕೊಪ್ಪಳ ಜಿಲ್ಲೆಯ ಹೆಸರನ್ನು ಕಿಷ್ಕಿಂದೆ ಎಂದು ಬದಲಾಯಿಸುವಂತೆ ಸರ್ಕಾರವನ್ನು ಕಿಷ್ಕಿಂದಾ ಟ್ರಸ್ಟ್ ಒತ್ತಾಯಿಸಿದೆ. ಈ ನಡುವೆ ಕಿಷ್ಕಿಂದಾ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಅವರಿಗೆ ಜನವರಿ 22 ರಂದು ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಯೋಧ್ಯೆ ದೇವಸ್ಥಾನದ ಅಧಿಕಾರಿಗಳಿಂದ ಆಹ್ವಾನ ನೀಡಿದ್ದಾರೆ.

click me!