Bengaluru: ನಗರದ ಅಭಿವೃದ್ಧಿ ಚರ್ಚೆಗೆ ಸಿಎಂ ಸವಾಲು ಸ್ವೀಕಾರ: ರೆಡ್ಡಿ

By Kannadaprabha News  |  First Published Jan 31, 2023, 8:51 AM IST

ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಪ್ರತಿಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ. ರಾಜಕೀಯ ಪಕ್ಷವಾಗಿ ನಾವು ಆ ಸವಾಲು ಸ್ವೀಕರಿಸಲು ಸಿದ್ಧವಾಗಿದ್ದು, ಅವರು ಹೇಳಿದ ದಿನ ಚರ್ಚೆಗೆ ತೆರಳಲು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿ ಸವಾಲು ಹಾಕಿದ್ದಾರೆ.


ಬೆಂಗಳೂರು (ಜ.31) : ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಪ್ರತಿಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ. ರಾಜಕೀಯ ಪಕ್ಷವಾಗಿ ನಾವು ಆ ಸವಾಲು ಸ್ವೀಕರಿಸಲು ಸಿದ್ಧವಾಗಿದ್ದು, ಅವರು ಹೇಳಿದ ದಿನ ಚರ್ಚೆಗೆ ತೆರಳಲು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಕಾನ್‌ ಸಿಟಿ ಎನಿಸಿಕೊಂಡಿದ್ದ ಬೆಂಗಳೂರು ಈಗ ರಸ್ತೆ ಗುಂಡಿ ನಗರ ಆಗಿದೆ. ರಸ್ತೆ ಗುಂಡಿಗಳಿಗೆ 20ಕ್ಕೂ ಹೆಚ್ಚು ಪ್ರಾಣ ಬಲಿಯಾಗಿವೆ. ನೂರಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇದೇನಾ ಅವರು ಹೇಳುವ ಅಭಿವೃದ್ಧಿ? ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಹೇಳಿದರು.

Tap to resize

Latest Videos

ರಾಜಕಾರಣಿಗಳ ಗಿಫ್ಟ್ ತಿರಸ್ಕರಿಸಿದರೆ ₹5000 ಬಹುಮಾನ: ರವಿ ಕೃಷ್ಣಾರೆಡ್ಡಿ ಘೋಷಣೆ

ಪ್ರಧಾನಮಂತ್ರಿ(PM Narendra Modi) ಭೇಟಿ ಸಮಯದಲ್ಲಿ ಹಾಕಿದ್ದ ಡಾಂಬರ್‌ ರಸ್ತೆ 2 ದಿನದಲ್ಲೇ ಮಾಯವಾದವು. ರಾಪಿಡ್ ರಸ್ತೆಗಳು ಉದ್ಘಾಟನೆಯಾದ 1 ತಿಂಗಳಲ್ಲಿ ಕಿತ್ತು ಹೋದವು. ಬಿಬಿಎಂಪಿ ವ್ಯಾಪ್ತಿ ಕಾಮಗಾರಿಗಳಲ್ಲಿ 40% ಕಮಿಷನ್‌ ಪಡೆಯುತ್ತಿದ್ದಾರೆ. ಹಿಂದೆಂದೂ ಕಂಡು ಕೇಳದ ಪ್ರವಾಹ ಬರುವಂತೆ ನಗರದ ಮೂಲಸೌಕರ್ಯ ಹಾಳು ಮಾಡಿದ್ದಾರೆ. ಮತ ಕಳ್ಳತನ ಮಾಡಿ ಐಎಎಸ್‌ ಅಧಿಕಾರಿಗಳ ತಲೆ ತಂಡ ಆಗಿದೆ. ಇವರ ಅಭಿವೃದ್ಧಿ ಇದೇನಾ? ಎಂದು ಪ್ರಶ್ನಿಸಿದರು.

ಮೆಟ್ರೋ ಪಿಲ್ಲರ್‌, ರಸ್ತೆ ಗುಂಡಿಯಿಂದ ಜನರ ಸಾವಿಗೆ ಸರ್ಕಾರ ಹೊಣೆ: ರಾಮಲಿಂಗಾರೆಡ್ಡಿ

ರಾತ್ರೋರಾತ್ರಿ 10 ಸಾವಿರ ಕೋಟಿ ಬಿಬಿಎಂಪಿ ಬಜೆಟ್‌ ಘೋಷಣೆ ಮಾಡಿದರು. ಅದರಲ್ಲಿ ಯಾವ ಕಾರ್ಯಕ್ರಮ ಜಾರಿ ಆಗಿದೆ. ನಿಮ್ಮ ಸರ್ಕಾರದ ಪ್ರಚಾರದ ಗಿಮಿಕ್‌ ಆಗಿರುವ ನಮ್ಮ ಕ್ಲಿನಿಕ್‌ ಯೋಜನೆ ವಿಫಲವಾಗಿರುವುದು ನಿಮ್ಮ ಸಾಧನೆಯೇ? ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಬೇರೆ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಮಾಡಿರುವುದು ನಿಮ್ಮ ಅಭಿವೃದ್ಧಿಯೇ? ಸಬ್‌ ಅರ್ಬನ್‌ ರೈಲು, ಪೆರಿಫೆರಲ್‌ ರಿಂಗ್‌ರಸ್ತೆ ಯೋಜನೆ ಕುಂಠಿತ ವಾಗಿರುವುದು ನೀವು ಹೇಳುವ ಸಾಧನೆಯೇ? ಚರ್ಚೆಗೆ ಬನ್ನಿ ಎಂದು ಹೇಳಿದರು.

click me!