‘ಡೇರ್‌ ಡೆವಿಲ್‌ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯ್ತಿ: ಸಿದ್ದರಾಮಯ್ಯ ಆದೇಶ

By Kannadaprabha NewsFirst Published Jun 16, 2023, 3:40 AM IST
Highlights

ಸಾಹಿತಿ ದಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್‌ ಡೆವಿಲ್‌ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಬೆಂಗಳೂರು (ಜೂ.16): ಸಾಹಿತಿ ದಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್‌ ಡೆವಿಲ್‌ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಸಿನಿಮಾ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ನಿರ್ದೇಶಕ ಶಶಾಂಕ್‌ ಸೋಗಾಲ ಅವರು, ಪೂರ್ಣಚಂದ್ರ ತೇಜಸ್ವಿ ಅವರ ಕೋಮು ಸಾಮರಸ್ಯ ಮತ್ತು ಭಾವೈಕ್ಯತೆ ಸಾರುವ ‘ಡೇರ್‌ ಡೆವಿಲ್‌ ಮುಸ್ತಫಾ’ ಕಾದಂಬರಿಯನ್ನು ಸಿನಿಮಾವನ್ನಾಗಿ ರೂಪಿಸಲಾಗಿದೆ. 

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಈ ಸಿನಿಮಾದ ಮೂಲಕ ಹೇಳಲಾಗಿದೆ. ತಾವು ಬಿಡುವು ಮಾಡಿಕೊಂಡು ಈ ಚಲನಚಿತ್ರ ವೀಕ್ಷಿಸಬೇಕು. ಹಾಗೆಯೇ, ಈ ಸಿನಿಮಾ ಮತ್ತಷ್ಟುಜನರನ್ನು ತಲುಪುವಂತೆ ಮಾಡಲು ಹಾಗೂ ಚಿತ್ರತಂಡಕ್ಕೆ ನೆರವಾಗಲು ‘ಡೇರ್‌ ಡೆವಿಲ್‌ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿದ್ದರು.  ಚಲನಚಿತ್ರ ನಿರ್ದೇಶಕರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಣೆ ನೀಡಿದ್ದಾರೆ. 

Latest Videos

ಸೋದರಳಿಯನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಕಿಚ್ಚ ಸುದೀಪ್: ಸೆಟ್ಟೇರಿತು ಸಂಚಿತ್ ನಟನೆಯ 'ಜಿಮ್ಮಿ'

ತಮ್ಮ ಬರಹ ಮತ್ತು ಬದುಕಿನ ಮೂಲಕ ಒಂದಿಡೀ ತಲೆಮಾರಿನ ಜನರನ್ನು ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಲೇ ಇರುವ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ‘ಡೇರ್‌ ಡೆವಿಲ್‌ ಮುಸ್ತಫಾ’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದ್ದೇನೆ. ಇಂದಿನ ಕಾಲಘಟ್ಟಕ್ಕೆ ಬೇಕಿರುವುದು ಸೌಹಾರ್ದತೆ, ಪ್ರೀತಿ, ವಿಶ್ವಾಸದ ಬುನಾದಿಯ ಮೇಲೆ ಸಮಾಜ ಕಟ್ಟುವ ಮನಸುಗಳು. ಅಂತಹದ್ದೊಂದು ಕಾರ್ಯಕ್ಕೆ ಕೈ ಹಾಕಿದ ಚಿತ್ರತಂಡಕ್ಕೆ ಅಭಿನಂದನೆಗಳು. ದ್ವೇಷ ಅಳಿಸಿ, ಪ್ರೀತಿ ಹಂಚುವ ಜನರಿಗೆ ನಮ್ಮ, ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾ ನೋಡಿದ್ರೆ 100 ರು. ಕ್ಯಾಶ್‌ಬ್ಯಾಕ್‌: ಶಶಾಂಕ್‌ ಸೋಗಲ್‌ ನಿರ್ದೇಶನದ, ಧನಂಜಯ್‌ ಅರ್ಪಿಸುತ್ತಿರುವ ‘ಡೇರ್‌ ಡೆವಿಲ್‌ ಮುಸ್ತಾಫಾ’ ಸಿನಿಮಾ ಮೇ 19ಕ್ಕೆ ತೆರೆ ಕಾಣಲಿದೆ. ಒಂದಿಷ್ಟು ಷರತ್ತುಗಳ ಮೇಲೆ ಮೊದಲ ವಾರ ಈ ಸಿನಿಮಾ ನೋಡುವವರಿಗೆ ಸಿನಿಮಾ ತಂಡ 100 ರು. ಕ್ಯಾಶ್‌ಬ್ಯಾಕ್‌ ಘೋಷಿಸಿದೆ. ಈ ಆಫರ್‌ ಪಡೆಯಲು ಇಚ್ಛಿಸುವವರು ಇರುವೆ ಡಾಟ್‌ ಕಾಮ್‌ ವೆಬ್‌ಸೈಟ್‌ನಲ್ಲಿ 50 ರು. ಪಾವತಿಸಿ ಚಿತ್ರದ ಡಿಜಿಟಲ್‌ ಬ್ಯಾಡ್ಜ್‌ ಖರೀದಿಸಬೇಕು. 

ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

ಈ ಖರೀದಿಯಲ್ಲಿ ಡಿಜಿಟಲ್‌ ಬ್ಯಾಡ್ಜ್‌ ಜೊತೆಗೆ ಕೂಪನ್‌ ಕೋಡ್‌ ಇ ಮೇಲ್‌ಗೆ ಬರುತ್ತದೆ. ಈ ಬ್ಯಾಡ್ಜ್‌ ಖರೀದಿಸಿದವರು ಮೊದಲವಾರ ಅಂದರೆ ಮೇ 19ರಿಂದ ಮೇ 25ರ ಒಳಗೆ ಸಿನಿಮಾ ನೋಡಬೇಕು. ಬಳಿಕ ಸಿನಿಮಾ ಟಿಕೆಟ್‌, ಕೂಪನ್‌ ಕೋಡ್‌ ಹಾಗೂ ಯುಪಿಐ ಐಡಿಯನ್ನು ಚಿತ್ರತಂಡ ನೀಡುವ ಮೊಬೈಲ್‌ ನಂಬರ್‌ಗೆ ವಾಟ್ಸಾಪ್‌ ಮಾಡಿದರೆ 100 ರು. ಯುಪಿಐ ಐಡಿಗೆ ಬರುತ್ತದೆ. ಈ ಬ್ಯಾಡ್ಜ್‌ ಪಡೆದರೂ ಸಿನಿಮಾ ಟಿಕೇಟ್‌ ಖರೀದಿಸಲೇ ಬೇಕು. ಸಾಮಾಜಿಕ ಜಾಲತಾಣದಲ್ಲಿ ಈ ಹೊಸ ಪ್ರಚಾರ ತಂತ್ರ ಸದ್ದು ಮಾಡುತ್ತಿದ್ದು, ಒಂದಿಷ್ಟುಮಂದಿ ಸೆಲೆಬ್ರಿಟಿಗಳೂ ಬ್ಯಾಡ್ಜ್‌ ಖರೀದಿಸಿ ಸಿನಿಮಾ ತಂಡದ ಬೆಂಬಲಕ್ಕೆ ನಿಂತಿದ್ದಾರೆ.

click me!