ಕರ್ನಾಟಕ ಕುಸ್ತಿ ಹಬ್ಬ, ಶಿಗ್ಗಾಂವಿಯತ್ತ ವಿಶ್ವದ ಚಿತ್ತ: ಸಿಎಂ ಬೊಮ್ಮಾಯಿ

By Kannadaprabha News  |  First Published Mar 6, 2023, 2:00 AM IST

ಶಿಗ್ಗಾಂವಿ ಪಟ್ಟಣದಲ್ಲಿ ರಾಜ್ಯಮಟ್ಟದ ಕರ್ನಾಟಕ ಕುಸ್ತಿ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇತ್ತ ನೋಡುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


ಹಾವೇರಿ (ಮಾ.06): ಶಿಗ್ಗಾಂವಿ ಪಟ್ಟಣದಲ್ಲಿ ರಾಜ್ಯಮಟ್ಟದ ಕರ್ನಾಟಕ ಕುಸ್ತಿ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇತ್ತ ನೋಡುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಶ್ರೀರಂಭಾಪುರಿ ಜಗದ್ಗುರು ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗಿದ ಕರ್ನಾಟಕ ಕುಸ್ತಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಕುಸ್ತಿ ಹಬ್ಬದಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಪಾಲ್ಗೊಂಡಿದ್ದಾರೆ. ಪಾರಂಪರಿಕ ಕುಸ್ತಿ, ಆಧುನಿಕ ಕುಸ್ತಿಗೂ ಬಹಳ ವ್ಯತ್ಯಾಸವಿದೆ. ಈ ಕುಸ್ತಿ ಹಬ್ಬವನ್ನು ಈ ಭಾಗದ ಜನತೆ ಕಣ್ತುಂಬಿಕೊಂಡಿರುವುದು ಸಂತಸ ತಂದಿದೆ ಎಂದರು. ಉಕ್ರೇನ್‌ ಯುದ್ಧದಿಂದ ನಲುಗಿ ಹೋಗಿದೆ. ಆದರೂ ಸಹ ಅಲ್ಲಿನ ದೇಶದ ಕುಸ್ತಿಪಟುಗಳು ಜೋಶ್‌ನಿಂದ ಕುಸ್ತಿಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದೋದು ಶ್ಲಾಘನೀಯ ಎಂದರು. ಮೊದಲ ಬಾರಿಗೆ ಈ ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿ ನಡೆಯುತ್ತಿದ್ದು, ಹಿಂದೆ ಎಂದೂ ನಡೆದಿಲ್ಲ ಎಂದರು.

Latest Videos

undefined

ಆಡಳಿತಗಾರನಿಗೆ ತಲೆ ತಣ್ಣಗಿರಬೇಕು, ಹೃದಯ ವಿಶಾಲವಾಗಿರಬೇಕು: ಸಿಎಂ ಬೊಮ್ಮಾಯಿ

ಫಲಿತಾಂಶ: 2022-23ನೇ ಸಾಲಿನ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ದಾವಣಗೆರೆಯ ಕಿರಣ ಎನ್‌. ಪಡೆದರು. ಬೆಳಗಾವಿಯ ಶಿವಾನಂದ ಅವರನ್ನು ಮಣಿಸುವ ಮೂಲಕ .4.50 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.

ಪ್ರದರ್ಶನ ಪಂದ್ಯ: ಇರಾನಿನ ರಾಷ್ಟ್ರೀಯ ಚಾಂಪಿಯನ್‌ ಅಲಿ ಮೆಹರಿ ಇರಾನ್‌ ಜತೆ ಮಹಾರಾಷ್ಟ್ರದ ಪೈಲ್ವಾನ್‌ ಸಾಗರ ಬಿರಾಜದಾರ ಪ್ರದರ್ಶನ ಪಂದ್ಯ ಜರುಗಿತು. ಅಂತಾರಾಷ್ಟ್ರೀಯ ಕುಸ್ತಿಪಟು ಇರಾನಿನ ಹುಸೇನ್‌ ರುಸ್ತುಂ ಇರಾನ್‌ ಜತೆ ಭಾರತ ಕೇಸರಿ ಹರಿಯಾಣದ ಉಮೇಶ ಚೌಧರಿ ಹಾಗೂ ರಾಣಿಬೆನ್ನೂರಿನ ಕಾರ್ತಿಕ ಕಾಟೆ ಜತೆ ಹರಿಯಾಣದ ಬೋಲಾ ಠಾಕೂರ ಕುಸ್ತಿ ಪ್ರದರ್ಶಿಸಿದರು. ಹಂಗೇರಿಯ ನೇಮಿತ್‌ ಜೆಸ್ನಿತ್‌ ಜತೆ ವಿಶ್ವಕುಸ್ತಿ ಪದಕ ವಿಜೇತೆ ಲಲಿತಾ ಶರಾವತ, ಉಕ್ರೇನಿನ ಅನಸ್ಥಾಶ ಜತೆ ಹರಿಯಾಣದ ಪ್ರಿಯಾ ನಡುವೆ ಭರ್ಜರಿ ಪ್ರದರ್ಶನ ನಡೆಯಿತು. ಉಕ್ರೇನಿನ ತೆತಿನಾ ಜತೆ ಹರಿಯಾಣದ ಕವಿತಾ ಪರಮಾರ ನಡುವೆ ನಡೆದ ಪಂದ್ಯದಲ್ಲಿ ಉಕ್ರೇನ್‌ ಪಟು ತೆತಿನಾ ಗೆಲುವು ಸಾಧಿಸಿದರು.

ತಾಸುಗಟ್ಟಲೇ ಕುಳಿತು ಕುಸ್ತಿ ವೀಕ್ಷಿಸಿದ ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ತಾಸಿಗೂ ಹೆಚ್ಚು ಕಾಲ ಕುಳಿತು ಕರ್ನಾಟಕ ಕುಸ್ತಿ ಹಬ್ಬವನ್ನು ವೀಕ್ಷಿಸಿ, ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದರು. ಅಲ್ಲದೇ ಬೇರೆ, ಬೇರೆ ಭಾಗದಿಂದ ಆಗಮಿಸಿದ್ದ ಸಾವಿರಾರು ಜನ ಕುಸ್ತಿ ಹಬ್ಬಕ್ಕೆ ಸಾಕ್ಷಿಯಾದರು.

ಬಿ​ಜೆ​ಪಿ ಗೆಲು​ವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿ​ಸಲಿ: ಕಟೀಲ್‌ ಸವಾಲು

ಕರ್ನಾಟಕ ಕೇಸರಿ: ಶಿಗ್ಗಾವಿಯಲ್ಲಿ ಭಾನುವಾರ ಮುಕ್ತಾಯಗೊಂಡ ಕರ್ನಾಟಕ ಕುಸ್ತಿ ಹಬ್ಬದಲ್ಲಿ 2022-23ನೇ ಸಾಲಿನ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ದಾವಣಗೆರೆಯ ಕಿರಣ ಎನ್. ಪಡೆದರು. ಬೆಳಗಾವಿಯ ಶಿವಾನಂದ ಗಡ್ಡಿ ಅವರನ್ನು ಮಣಿಸುವ ಮೂಲಕ ₹4.50 ಲಕ್ಷ ಬಹುಮಾನ ಮತ್ತು ಬೆಳ್ಳಿ ಗದೆಯನ್ನು ತಮ್ಮದಾಗಿಸಿಕೊಂಡರು.

click me!