ಕಳೆದ ಬಾರಿ ಬಜೆಟ್‌ನಲ್ಲಿ ನಾವು ಏನೆಲ್ಲಾ ಘೋಷಣೆ ಮಾಡಿದ್ದೆವು. ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಬಜೆಟ್ ಮಂಡನೆ ವೇಳೆ ತಿಳಿಸುತ್ತೇವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಮೈಸೂರು(ಜ.28): ಕಳೆದ ಬಾರಿಯಂತೆ ಈ ಬಾರಿಯೂ ಜನಪರ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಉದ್ದೇಶದಿಂದ ಮಾತ್ರವಲ್ಲ, ಕಳೆದ ಬಾರಿಯೂ ಜನಪರ ಬಜೆಟ್ ನೀಡಿದ್ದೆವು. ಈಗಲೂ ಜನಪರವಾದ ಬಜೆಟ್ ನೀಡುತ್ತೇವೆ ಎಂದರು.
ಕಳೆದ ಬಾರಿ ಬಜೆಟ್‌ನಲ್ಲಿ ನಾವು ಏನೆಲ್ಲಾ ಘೋಷಣೆ ಮಾಡಿದ್ದೆವು. ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಬಜೆಟ್ ಮಂಡನೆ ವೇಳೆ ತಿಳಿಸುತ್ತೇವೆ ಎಂದರು.
ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್?
ಟಾಸ್ಕ್ ಫೋರ್ಸ್:
ಚಿರತೆ ಮತ್ತು ಆನೆ ಸೆರೆ ಹಿಡಿಯಲು ರಚಿಸಲಾದ ಟಾಸ್ಕ್ ಫೋರ್ಸ್‌ಗಳು ಇರುತ್ತವೆ. ಒಂದು ಕಾರ್ಯಾಚರಣೆ ಮುಗಿದ ಕೂಡಲೇ ಅವರನ್ನು ರದ್ದು ಪಡಿಸು ವುದಿಲ್ಲ, ಟಾಸ್ಕ್ ಫೋರ್ಸ್ ನಿರಂತರವಾಗಿ ಇರುತ್ತದೆ ಎಂದರು. ಭಾಗ್ಯವೇ ಕಾಂಗ್ರೆಸ್‌ಗೆ ದೌರ್ಭಾಗ್ಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾದಿ ಭಾಗ್ಯ, ಅನ್ನ ಭಾಗ್ಯ ನೀಡುವುದಾಗಿ ಹೇಳಿದ್ದರು. ಆದರೆ ಪಕ್ಷಕ್ಕೆ ಹಿಂದಿನ ಭಾಗ್ಯವೇ ದೌರ್ಭಾಗ್ಯವಾಗಿದೆ. ಅದೇ ಬೇಕು ಎಂದಾದರೆ ಮುಂದುವರೆಸಿಕೊಂಡು ಹೋಗಲಿ ಎಂದು ವ್ಯಂಗ್ಯವಾಡಿದರು.