* ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದಕ್ಕೆ ಕೊನೆಗೂ ಮೌನ ಮುರಿದ ಸಿಎಂ
* ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
* ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ
ಬೆಂಗಳೂರು, (ಸೆ.14): ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ಮುರಿದಿದ್ದಾರೆ.
ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಅಧಿಕೃತವಾಗಿಯೇ ದೇಗುಲ ತೆರವು ಮಾಡಿದ್ದೇವೆ : ಶೀಘ್ರ ವರದಿ ನೀಡುತ್ತೇವೆ
ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ದೇಗುಲ ಒಡೆದ ವಿಚಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅವಸರದಲ್ಲಿ ದೇಗುಲ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸುಪ್ರೀಂಕೋರ್ಟ್ ಆದೇಶದ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ನಾಳೆ ನಾಡಿದ್ದರಲ್ಲಿ ಕ್ಯಾಬಿನೆಟ್ ಕರೆದು ಸ್ಪಷ್ಟವಾಗಿ ನಿರ್ದೇಶನ ಕೊಡುತ್ತೇವೆ. ಸದನ ನಡೆಯುತ್ತಿದೆ ಇದರ ಬಗ್ಗೆ ಸದನದಲ್ಲಿ ಎಲ್ಲಾ ವಿವರವನ್ನ ನಾನು ಸದನದಲ್ಲಿ ಉತ್ತರಿಸುತ್ತೇನೆ ಎಂದು ತಿಳಿಸಿದರು.