ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಆದ್ರೂ ಎಚ್ಚರದಿಂದ ಇರೋಣ

By Suvarna News  |  First Published Sep 14, 2021, 8:15 PM IST

* ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ
* ಇಂದು (ಸೆ.14) 559 ಜನರಿಗೆ ಕೋವಿಡ್ ಸೋಂಕು, 12 ಜನರು ಬಲಿ
 * ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ


ಬೆಂಗಳೂರು, (ಸೆ.14): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ದಿನದಿಂದ ದಿನಕ್ಕೆ ಇಳಿಕೆಯತ್ತ ಸಾಗುತ್ತಿದೆ. ಆದರೂ ನಾವು ಎಚ್ಚರದಿಂದ ಇರೋಣ. 

ಇಂದು (ಸೆ.14) ಮತ್ತಷ್ಟು ಕೊರೋನಾ ಇಳಿಕೆಯಗಿದ್ದು,  ರಾಜ್ಯದಲ್ಲಿ 559 ಜನರಿಗೆ ಕೋವಿಡ್ ಸೋಂಕು ತಗುಲಿದೆ. 12 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, 1034 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Latest Videos

undefined

ಕೊರೋನಾ 3ನೇ ಅಲೆ ಆತಂಕದ ಮಧ್ಯೆ ನೆಮ್ಮದಿ ಸುದ್ದಿ

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,62,967ಕ್ಕೆ ಏರಿಕೆಯಾಗಿದ್ರೆ, . ಇದುವರೆಗೆ 37,529 ಜನ ಮೃತಪಟ್ಟಿದ್ದಾರೆ. ಇನ್ನು 29,09,656 ಮಂದಿ ಗುಣಮುಖರಾಗಿದ್ದಾರೆ. 15754 ಸಕ್ರಿಯ ಪ್ರಕರಣಗಳಿವೆ.  ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಹೊಸದಾಗಿ 231 ಜನರಿಗೆ ಸೋಂಕು ತಗುಲಿದ್ದು, 4 ಜನ ಮೃತಪಟ್ಟಿದ್ದಾರೆ. 302 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7,136 ಸಕ್ರಿಯ ಪ್ರಕರಣಗಳಿವೆ.

click me!