ಗಣಪತಿ ವಿಸರ್ಜನೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ!

By Ravi JanekalFirst Published Sep 8, 2024, 7:56 AM IST
Highlights

ಹಳೆಯ ವೈಷಮ್ಯದಿಂದ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದಿದೆ.

ಶಿವಮೊಗ್ಗ (ಸೆ.8): ಹಳೆಯ ವೈಷಮ್ಯದಿಂದ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ದಿ. ಅಣ್ಣಾಮಲೈ ಮಗ ಅರ್ಜುನ್ ಮೇಲೆ ಹಲ್ಲೆಯಾಗಿದ್ದು ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಜಗಳ ಬಿಡಿಸಲು ಹೋದ ಪೋಲಿಸ್ ಪೇದೆಗಳಾದ ನಾಗರಾಜ್ ಮತ್ತು ವಿಶ್ವ ಎಂಬುವರ ಮೇಲೆಯೂ ಹಲ್ಲೆ ನಡೆದಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಭೇಟಿ ನೀಡಿದ್ದು ಪ್ರಕರಣ ಸಂಬಂಧ ಸುಮಾರು15 ರಿಂದ 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Latest Videos

ಬಳ್ಳಾರಿ ಜೈಲಿನಲ್ಲಿ ಗಣೇಶ ಹಬ್ಬ ಆಚರಿಸಿದರೂ ನಟ ದರ್ಶನ್‌ಗೆ ಸಿಗಲಿಲ್ಲ ದರ್ಶನ!

ಡೊಳ್ಳು ಹೊಡೆಯುವ ವಿಚಾರಕ್ಕೆ ಗಲಾಟೆ:

ನಟೇಶ್ ಕಾಲೋನಿ ಆದಿಕರ್ನಾಟಕದವರ ಗಣಪತಿ, ಬೋವಿ ಜನಾಂಗದವರ ಸರ್ಕಲ್‌ ಗಣಪತಿ ಕೂರಿಸಿದ್ದರು. ನಿನ್ನೆ ಗಣಪತಿ ವಿಸರ್ಜನೆ ಮಾಡಲು ಡೊಳ್ಳು ಹೊಡೆಯುವವರಿಗೆ ಮುಂಗಡ ಹಣ ಕೊಟ್ಟು ಬುಕ್ ಮಾಡಲಾಗಿತ್ತು. ಎರಡೂ ಸಮಿತಿಯವರು ಡೊಳ್ಳು ಹೊಡೆಯುವ ಒಂದೇ ತಂಡ ಬುಕ್ ಮಾಡಿದ್ದರು. ಇದರಿಂದ ಒಂದೇ ಕಡೆ ಡೊಳ್ಳು ಬಾರಿಸಿದ್ದ ಕಲಾವಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಂದು ಸಮಿತಿ. ಮುಂಗಡ ಹಣ ಕೊಟ್ಟಿದ್ದೇವೆ ಡೊಳ್ಳು ಬಾರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಇದರಿಂದ ಎರಡೂ ಕಡೆಯವರಿಗೆ ಮಾತಿಗೆ ಮಾತು ಬೆಳೆದು ನಂತರ ಕೈಕೈ ಮಿಲಾಯಿಸಿದ ಸದಸ್ಯರು. ಘಟನೆ ತೀವ್ರ ಸ್ವರೂಪಕ್ಕೆ ಹೋಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಲು ಪೇದೆಗಳಾದ ನಾಗರಾಜ್, ವಿಶ್ವ ಮುಂದಾಗಿದ್ದಾರೆ. ರೊಚ್ಚಿಗೆದ್ದ ಗುಂಪು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಗಣೇಶ ಹಬ್ಬದಂದೇ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಡ್ತಾರಾ?

ಘಟನೆ ಹಿನ್ನೆಲೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಐದು ಗಣಪತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಮುಂದಾಳತ್ವದಲ್ಲಿ ನಿನ್ನೆಯೇ ವಿಸರ್ಜನೆ ಮಾಡಿಸಿದ ಆಡಳಿತ.  ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ
 

click me!