ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಸಚಿವ ಈಶ್ವರ್ ಖಂಡ್ರೆ ಆಯಾತಪ್ಪಿ ಮುಗ್ಗರಿಸಿ ಸ್ವಲ್ಪದರಲ್ಲೇ ಜಲಾಶಯಕ್ಕೆ ಬಿಳುವುದರಲ್ಲಿ ಬಚಾವ್ ಆಗಿದ್ದಾರೆ.
ಬೀದರ್ (ಸೆ.7): ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಸಚಿವ ಈಶ್ವರ್ ಖಂಡ್ರೆ ಆಯಾತಪ್ಪಿ ಮುಗ್ಗರಿಸಿ ಸ್ವಲ್ಪದರಲ್ಲೇ ಜಲಾಶಯಕ್ಕೆ ಬಿಳುವುದರಲ್ಲಿ ಬಚಾವ್ ಆಗಿದ್ದಾರೆ.
ಹೌದು ಬೀದರ್ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಜೀವನಾಡಿಯಾಗಿರುವ ಕಾರಂಜಾ ಜಲಾಶಯ ತುಂಬಿಕೊಂಡಿದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಕಾರಂಜಾ ಜಲಾಶಯಕ್ಕೆ ಸಚಿವ ಈಶ್ವರ್ ಖಂಡ್ರೆ ಬಾಗಿನ ಅರ್ಪಿಸಲು ಆಗಮಿಸಿದ್ದರು. ಈ ವೇಳೆ ಜಲಾಶಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಾಗಿನದ ತೆಪ್ಪೆಗೆ ಟೆಂಗು ಹಾಕಲು ಮುಂದಾದ ಖಂಡ್ರೆ. ಕೆಳಗೆ ಕುಳಿತು ನೀರಲ್ಲಿ ಬಿಟ್ಟು ಮೇಲೇಳುವಾಗ ಆಯಾತಪ್ಪಿದ ಸಚಿವರು, ಅದೃಷ್ಟವಶಾತ್ ತಕ್ಷಣಕ್ಕೆ ಹಿಂಬದಿಯಿದ್ದವರು ಕೈಹಿಡಿದರು. ಬಳಿಕ ಸುಧಾರಿಸಿಕೊಂಡ ಸಚಿವರು ಬ್ಯಾಲೆನ್ಸ್ ಮಾಡಿಕೊಂಡರು.
undefined
3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ತೆರವು ಸದ್ಯಕ್ಕಿಲ್ಲ: ಸಚಿವ ಈಶ್ವರ್ ಖಂಡ್ರೆ
7.69 ಸಾಮರ್ಥ್ಯದ ಕಾರಂಜಾ ಜಲಾಶಯ ಈಗಾಗಲೇ ಸುಮಾರು 93ರಷ್ಟು ಭರ್ತಿಯಾಗಿದೆ. ಹೀಗಾಗಿ ಇಂದು ಬಾಗಿನ ಅರ್ಪಣೆ ಮಾಡಲು ಜಲಾಶಯಕ್ಕೆ ಭೇಟಿ ನೀಡಿದ್ದ ಸಚಿವರು, ಸಚಿವ ಖಂಡ್ರೆಗೆ ಸಚಿವರಾದ ರಹೀಂ ಖಾನ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಮಾಲಾ ಬಿ ನಾರಾಯಣ, ಎಸ್ಪಿ, ಡಿಸಿ ಸೇರಿ ಹಲವು ಗಣ್ಯರು ಸಾಥ್ ನೀಡಿದರು.