ಉತ್ತರದಿಂದ ತೃಪ್ತರಾಗದ ಸಿಎಂ ಸಿದ್ದರಾಮಯ್ಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸರಿಯಾಗಿ ವರದಿ ನಡೆಸಲು ಆಗುವುದಿಲ್ಲವೇ? ಇಷ್ಟೆಲ್ಲಾ ತಪ್ಪು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಎಂದು ಅಧಿಕಾರಿಗಳನ್ನು ಜಾಡಿಸಿ ಮರು ಪರೀಕ್ಷೆ ನಿರ್ಧಾರ ತೆಗೆದುಕೊಂಡರು.
ಬೆಂಗಳೂರು(ಸೆ.07): ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ತಪ್ಪುಗಳಾಗಿದ್ದರೂ ಕೇವಲ 6 ಪ್ರಶ್ನೆಗಳಲ್ಲಿ ಲೋಪ ಕಂಡುಬಂದಿದ್ದು, 12 ಕೃಪಾಂಕ ನೀಡಬೇಕಾಗುತ್ತದೆ ಎಂದ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆ.27ರಂದು ನಡೆದ ಪರೀಕ್ಷೆಯಲ್ಲಿ ಭಾಷಾಂತರ, ವಾಸ್ತವಾಂಶಗಳ ದೋಷಗಳ ಕುರಿತು ಅಭ್ಯರ್ಥಿಗಳು, ಸಂಘಟನೆ ಗಳು, ಸಾಹಿತ್ಯಕ ವಲಯದ ಪ್ರಮುಖರು ಸಿದ್ದರಾಮಯ್ಯರಿಗೆ ದೂರು ನೀಡಿದ್ದರು. ಹೀಗಾಗಿ, ಕೆಪಿಎಸ್‌ಸಿಯಿಂದ ಸಿಎಂ ಸ್ಪಷ್ಟನೆ ಕೇಳಿದರು.
ಕನ್ನಡಕ್ಕೆ ಕೆಪಿಎಸ್‌ಸಿಯಿಂದಲೇ ಕಂಟಕ, ಬೃಹತ್ ಹೋರಾಟಕ್ಕೆ ರೆಡಿಯಾದ ಕರವೇ!
ಮುಖ್ಯಮಂತ್ರಿಯವರಿಗೆ ಪ್ರಾಥಮಿಕ ವರದಿಯ ವೇಳೆ 'ಗೆಜೆಟೆಡ್ ಅಧಿಕಾರಿ ಆಗದೇ ಕಿರುಯರಿಗೆ ಇಂಗ್ಲಿಷ್ ಅರ್ಥೈಸಿಕೊಳ್ಳುವ ಸಾಮರ್ಥ ಬೇಕು. ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆ ಪರೀಕ್ಷೆ ಇರಲಿವೆ. ಎರಡರಲ್ಲಿ ಯಾವುದೇ ಒಂದು ಪತ್ರಿಕೆಯಲ್ಲಿ ಅರ್ಹತಾ ಅಂಕ ಗಳಿಸಿದ್ದರೆ ಪರೀಕ್ಷೆಯಲ್ಲಿ ಅನರ್ಹರಾದಂತೆ. ಪತ್ರಿಕೆಯಲ್ಲಿನ ದೋಷಗಳು ಗಂಭೀರ ಸ್ವರೂಪದಲ್ಲ' ಎಂದು ಸಮರ್ಥಿಸಿತ್ತು.
ಉತ್ತರದಿಂದ ತೃಪ್ತರಾಗದ ಸಿಎಂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸರಿಯಾಗಿ ವರದಿ ನಡೆಸಲು ಆಗುವುದಿಲ್ಲವೇ? ಇಷ್ಟೆಲ್ಲಾ ತಪ್ಪು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಎಂದು ಅಧಿಕಾರಿಗಳನ್ನು ಜಾಡಿಸಿ ಮರು ಪರೀಕ್ಷೆ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.
ತಜ್ಞರಿಂದಲೂ ಗೂಗಲ್ ಟ್ರಾನ್ಸ್‌ಲೇಟರ್ ಬಳಕೆ!:
ತಜ್ಞರೇ ಸುಮಾರು 12 ಪ್ರಶ್ನೆಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಗೂಗಲ್ ಟ್ರಾನ್ಸ್ ಲೇಟ್ ಬಳಸಿರುವುದು ಪತ್ತೆಯಾಗಿದೆ. ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಪಿಎಸ್ ಸಿಭಾಷಾಂತರ ಸಮಸ್ಯೆ ಎಂದಿತ್ತು. ಆದರೆ, ಎಲ್ಲಾ ಪ್ರಶ್ನೆಗಳನ್ನು ವಿವರ ವಾಗಿ ಪರಿಶೀಲಿಸಿದಾಗ ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರಕ್ಕೆ ಒಳಪಡದ ಪ್ರಶ್ನೆಗಳು ಕೂಡ ಗೂಗಲ್ ತಂತ್ರಾಂಶದಿಂದ ಭಾಷಾಂತ ರವಾಗಿರುವುದು ದೃಢವಾಗಿದೆ.