
ಬೆಂಗಳೂರು (ಜೂ.18): ಇಡೀ ದೇಶದಲ್ಲಿಯೇ ಬೆಂಗಳೂರು ಅತ್ಯಂತ ಟಾಪ್ ಐಟಿ/ಬಿಟಿ ಸಿಟಿ, ಸಾಕಷ್ಟು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿರುವ ರಾಜ್ಯದಲ್ಲಿನ ಸರ್ಕಾರ ಸರಿಯಾದ ಸರ್ವರ್ ಸೇವೆ ಇಲ್ಲದೆ ಇಂದು ಮುಜುಗರಕ್ಕೆ ಈಡಾಗುವಂಥ ದಿನ ಎದುರಾಗಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ತನ್ನ 2ನೇ ಯೋಜನೆಯಾದ ಗೃಹಜ್ಯೋತಿಗೆ ಅರ್ಜಿ ಸ್ವೀಕರಿಸುವುದಾಗಿ ಘೋಷಣೆ ಮಾಡಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡುವ ನಿರ್ಧಾರ ಮಾಡಿತ್ತು. ಇವೆಲ್ಲಾ ಆಗಿ ಅಂದಾಜು ಒಂದು ತಿಂಗಳಾದರೂ, ಸಾಮಾನ್ಯ ಪ್ರಜೆಯ ಅರ್ಜಿ ಸ್ವೀಕಾರಕ್ಕೆ ಸರಿಯಾದ ವೆಬ್‌ಸೈಟ್, ಲಿಂಕ್ ಇಲ್ಲದೆ ಸರ್ಕಾರ ಪರದಾಡಿದೆ. ಸೇವಾಸಿಂಧು ವೆಬ್‌ಸೈಟ್ ಮೂಲಕ ಅರ್ಜಿ ಸ್ವೀಕಾರ ಮಾಡುವುದಾಗಿ ಸರ್ಕಾರ ಮೊದಲಿನಿಂದಲೂ ಹೇಳುತ್ತಲೇ ಒಂದಿದೆ. ಆದರೆ, ಅರ್ಜಿ ಸ್ವೀಕಾರ ಮಾಡುವ ದಿನ ಬಂದರೂ ಅದಕ್ಕೊಂದು ಪರ್ಫೆಕ್ಟ್ ಆದ ವೆಬ್‌ಸೈಟ್ ಹಾಗೂ ಏಕಕಾಲಕ್ಕೆ ಅರ್ಜಿ ಸ್ವೀಕಾರಕ್ಕೆ ಇರಬೇಕಾದ ಸರ್ವರ್ ಇದ್ದಿರಲಿಲ್ಲ. ಏಕಕಾಲಕ್ಕೆ ಸಾಕಷ್ಟು ಜನರು ಅರ್ಜಿ ಸಲ್ಲಿಸಲು ವೆಬ್‌ಸೈಟ್‌ಗೆ ನುಗ್ಗಿದ್ದರಿಂದ ಇಡೀ ದಿನ ಗೃಹಜ್ಯೋತಿ ವೆಬ್‌ಸೈಟ್ ಸರ್ವರ್ ಡೌನ್ ತೋರಿಸುತ್ತಲೇ ಇತ್ತು. ಒಟ್ಟಾರೆಯಾಗಿ ವೀಕೆಂಡ್ ಖುಷಿಯನ್ನು ಗೃಹಜ್ಯೋತಿ ಕಿತ್ತುಕೊಂಡಿದೆ.
'ಬೆಂಗಳೂರು ದೇಶದ ಟಾಪ್ ಐಟಿ/ಬಿಟಿ ನಗರ ಹಾಗುದ್ದರೂ ಸರ್ಕಾರ ಒಂದು ವೆಬ್‌ಸೈಟ್ ಸರಿಯಾಗಿ ರನ್ ಮಾಡಲಾಗದೆ ಸೋತಿದೆ. ಗೃಹಜ್ಯೋತಿ ಅರ್ಜಿಗಳನ್ನು ಸ್ವೀಕರಿಸುವ ಸರ್ವರ್ ಎಷ್ಟು ದಯನೀಯ ಸ್ಥಿತಿಯಲ್ಲಿದೆ. ಇದರ ನಡುವೆ ಆಡಳಿಯ, ಡಿಜಿಟಲೀಕರಣ ಮಾಡ್ತೇವೆ ಎನ್ನುತ್ತಿದ್ದಾರೆ' ಎಂದು ಸಾಹೀಲ್ ಅಹ್ಮದ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದು, ಈ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
'ಗೃಹಜ್ಯೋತಿ ವೆಬ್‌ಸೈಟ್ ಬೆಳಗ್ಗೆಯಿಂದ ಡೌನ್ ಆಗಿದೆ. ಇಷ್ಟು ದಿನ ಕಳೆದರು ಒಂದು ಅರ್ಜಿ ಸ್ವೀಕಾರಕ್ಕೆ ಸರ್ಕಾರ ಸರಿಯಾಗಿ ಸಿದ್ಧವಾಗಿಲ್ಲ. ಈ ಸೈಟ್ ಒಂಚೂರು ಕೆಲಸ ಮಾಡುತ್ತಿಲ್ಲ' ಎಂದು ಛಾಯಾಪತಿ ಎನ್ನುವರು ಟ್ವೀಟ್ ಮಾಡಿದ್ದಾರೆ. 'ಗೃಹಜ್ಯೋತಿ ವೆಬ್‌ಸೈಟ್‌ನ ಸಂಪೂರ್ಣವಾಗಿ ದಯನೀಯವಾಗಿದೆ' ಎಂದು ಪ್ರಶಾಂತ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
'ನಾನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಕೂಡ ಮಾಡಿಕೊಂಡೆ. ಅದರೆ, ಗೃಹಜ್ಯೋತಿ ಯೋಜನೆಗೆ ಅಪ್ಲಿಕೇಶನ್ ಹಾಕಲು ಸಾಧ್ಯವಾಗುತ್ತಿಲ್ಲ. ಲಭ್ಯವಿರುವ ಸೇವೆಗಳಲ್ಲೂ ಗೃಹಜ್ಯೋತಿ ಕಾಣುತ್ತಿಲ್ಲ. ಯಾರಿಗಾದರೂ ಇದೇ ಸಮಸ್ಯೆ ಆಗುತ್ತಿದೆಯೇ? ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಆರಂಭದಲ್ಲೇ ವಿಘ್ನ: ಕೆಲಸಕ್ಕೆ ಬಾರದ ಸಿಬ್ಬಂದಿ, ಕೆಲಸ ಮಾಡದ ಸರ್ವರ್
ಇಂದು ಸರ್ಕಾರ ನಮ್ಮೆಲ್ಲರ ಜೊತೆ ಸಣ್ಣ ಪ್ರ್ಯಾಂಕ್ ಮಾಡಿದೆ ಅಷ್ಟೇ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಗೃಹಜ್ಯೋತಿಗೆ ಅಪ್ಲಿಕೇಶನ್ ಹಾಕಿದ ಬಳಿದ ಒಂದು ಗಂಟೆಗಳ ಕಾಲ ಪ್ರೊಸೆಸಿಂಗ್ ಅಂತಾ ತೋರಿಸ್ತಿದೆ. ಐಟಿ ಸಿಟಿ ಬೆಂಗಳೂರಿಗೆ ನಿಮಗೆಲ್ಲರಿಗೂ ಸ್ವಾಗತ ಎಂದು ಶ್ರೀನಾಥ್ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ಬಹುಶಃ ಸರ್ಕಾರ ರೆಡಿಯಾದ್ರೂ, ಗೃಹಜ್ಯೋತಿ ಯೋಜನೆಗೆ ನಮ್ಮ ಟೆಕ್ನಿಕಲ್ ಟೀಮ್ ರೆಡಿಯಾಗಿಲ್ಲ. ಅವರು ರೆಡಿ ಮಾಡೋ ತನಕ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು' ಎಂದು ಜೆಆರ್ ಪ್ರಶಾಂತ್ ಎನ್ನುವವರು ಸಿಟ್ಟುತೋಡಿಕೊಂಡಿದ್ದಾರೆ.
ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ಹಾಕಿ: ‘ಗೃಹಜ್ಯೋತಿ’ ಯೋಜನೆ ಅರ್ಜಿ ಸ್ವೀಕಾರ ಆರಂಭ
ವೆಬ್‌ಸೈಟ್‌ನಲ್ಲಿ 503 ಎರರ್ ಎಂದು ತೋರಿಸಲು ಬದಲು 420 ಎಂದು ತೋರಿಸಬೇಕಿತ್ತು. ಆಗ ಸರಿಯಾಗ್ತಿತ್ತು ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಕೆಲವರು ಅರ್ಜಿ ಹಾಕಿರುವ ಬಗ್ಗೆಯೂ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಹೆಚ್ಚಿನ ಗ್ರಾಹಕರು, ವೆಬ್‌ಸೈಟ್‌ನಲ್ಲಿ ಬೆಸ್ಕಾಂ ಎನ್ನುವ ಆಯ್ಕೆ ಕಾಣುತ್ತಿಲ್ಲ ಎನ್ನುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ