ಸರ್ಕಾರದ ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಜೂ.22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಬೆಂಗಳೂರು (ಜೂ.18): ರಾಜ್ಯದಲ್ಲಿ ಈಗಾಗಲೇ ವಿದ್ಯತ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಎರಡು ತಿಂಗಳ ಬಿಲ್ ಅನ್ನು ಒಟ್ಟಿಗೆ ನೀಡಿದ್ದರಿಂದ ಸಮಸ್ಯೆಯಾಗಿದೆ. ಮುಂದಿನ ತಿಂಗಳಿಂದ ಸರಿಹೋಗಲಿದೆ. ಆದರೆ, ವಿದ್ಯುತ್ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆದರೆ, ಇದಕ್ಕೆ ವಿರೋಧ ಮಾಡುತ್ತಿರುವ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಯಿಂದ ಜೂ.22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಅದಕ್ಕಾಗಿ ಜಾಸ್ತಿ ಬಿಲ್ ಬಂದಿದೆ. ಮುಂದಿನ ತಿಂಗಳಿಂದ ಸರಿಯಾದ ಬಿಲ್ ಬರುತ್ತದೆ. ವಿದ್ಯುತ್ ದರ ಹೆಚ್ಚಳದಿಂದಾಗಿ ಎಫ್‌ಕೆಸಿಸಿಐ ಬಂದ್ ಗೆ ನಿರ್ಧಾರ ಮಾಡಿದೆ. ನಾನು ಎಫ್‌ಕೆಸಿಸಿಐ ನವರಿಗೆ ಇಂಧನ ಅಧಿಕಾರಿಗಳು ಕರೆಸಿ ಮಾತಾಡಿ ಎಂದು ಹೇಳಿದ್ದೇನೆ. ಮುಂದಿನ ತಿಂಗಳಿಂದ ಸಹಜ ಆಗಲಿದೆ. ಈಗ ಎರಡು ತಿಂಗಳ ದರ ಒಟ್ಟಿಗೇ ಹಾಕಿದಾರೆ. ಹಾಗಾಗಿ ಅವರಿಗೆ ವಿದ್ಯುತ್ ದರ ಭಾರವಾಗಿ ಕಾಣಿಸ್ತಿದೆ. ವಿದ್ಯುತ್ ದರ ಕಡಿಮೆ ಆಗಲ್ಲ. ನಾನು ಮತ್ತೊಮ್ಮೆ ಎಫ್‌ಕೆಸಿಸಿಐ ಸಿಬ್ಬಂದಿಯನ್ನು ಕರೆದು ಮಾತಾಡ್ತೀನಿ ಎಂದರು.
undefined
ಅನ್ಯ ರಾಜ್ಯದವರಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾತಾಡಿ ಭಾಷಾ ಅಭಿಮಾನ ಮೆರೆದ ಸಿದ್ದರಾಮಯ್ಯ
ಕರ್ನಾಟಕ ಬಂದ್‌ಗೆ ಕರೆಕೊಟ್ಟ ಕೆಸಿಸಿಐ: ರಾಜ್ಯದಲ್ಲಿ ಜನಸಾಮಾನ್ಯರಿಗೆ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ನೀಡಲು ಮುಂದಾಗಿದೆ. ಸರ್ಕಾರದ ವಿರುದ್ದ ಬೀದಿಗಿಳಿಯಲು ನಿರ್ಧರಿಸಿದೆ. ವಿದ್ಯುತ್ ದರ ಏಕಾಏಕಿ ಪರಷ್ಕರಣೆ ಮಾಡಿರುವುದನ್ನು ವಿರೋಧಿಸಿ ಜೂ.22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳು ರಾಜ್ಯಾದ್ಯಂತ ಬಂದ್ ಗೆ ಕರೆ ಕೊಟ್ಟಿವೆ. ಅಂದು ಎಲ್ಲಾ ರೀತಿಯ ವಹಿವಾಟುಗಳಿಗೆ ಬ್ರೇಕ್ ಹಾಕಿ ಸರ್ಕಾರಕ್ಕೆ ಒತ್ತಡ ತರಲು ನಿರ್ಧಾರ ಮಾಡಲಾಗಿದೆ.
ದರ ಪರಿಷ್ಕರಣೆ ವಾಪಸ್‌ಗೆ ಯಾರೊಬ್ಬರೂ ಸ್ಪಂದಿಸಲಿಲ್ಲ: ಇದೇ ಮೊದಲ ಬಾರಿಗೆ ವಿದ್ಯುತ್ ದರ ಪರಿಷ್ಕರಣೆಯನ್ನು ಹಿಂಪಡೆಯುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಮನವಿಯನ್ನು ಪುರಸ್ಕಾರ ಮಾಡ ಹಿನ್ನೆಲೆಯಲ್ಲು ಸರ್ಕಾರದ ಗಮನ ಸೆಳೆಯಲು ಬೀದಿಗಿಳಿಯಲು ನಿರ್ಧರಿಸಲಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳ ಸಂಘದಿಂದಲೂ ಬಂದ್ ಗೆ ಬೆಂಬಲ ಸಿಗಲಿದೆ. ಈ ಹಿಂದೆಯೇ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಮಾಡಲಾಗಿತ್ತು. ಯಾರಿಂದಲೂ ಸರಿಯಾದ ರೆಸ್ಪಾನ್ಸ್ ಸಿಗದ ಹಿನ್ನಲೆಯಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಬಿಜೆಪಿಯವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ:
ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಕ್ಕಿ ಖರೀದಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡ್ತಿದೆ. ನಾವು 9ರಂದು ಅಕ್ಕಿ ಕೊಡಿ ಎಂದು ಪತ್ರ ಬರೆದಿದ್ದೆವು. ಅವರು ಒಪ್ಕೊಂಡು ಅಕ್ಕಿ ಸಪ್ಲೈ ಮಾಡೋದಾಗಿ ಪತ್ರ ಬರೆದಿದ್ದರು. ನಮ್ಮ ಬಳಿ 7 ಲಕ್ಷ ಟನ್ ಇದೆ ಅಂತಾ ಒಪ್ಪಿಕೊಂಡು ಆ ಮೇಲೆ ಇಲ್ಲ ಅಂದರೆ ಏನಂತ ಅಂದ್ಕೊಬೇಕು? ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ) ನಮಗೆ ಅಕ್ಕಿ ಕೊಡ್ತೀನಿ ಎಂದು ಪತ್ರನೂ ಬರೆದಿದ್ದರು. ಒಂದು ವೇಳೆ ಅಕ್ಕಿ ಇಲ್ಲ ಅಂದಿದ್ರೆ ಕೇಂದ್ರ ಸರ್ಕಾರದ ಜೊತೆ ಮಾತಾಡಿ ಎಂದಿದ್ದರೆ ನಾವು ಮಾತನಾಡುತ್ತಿದ್ದೆವು. ಆದರೆ, ಏಕಾಏಕಿ ನಿಯಮ ಮಾಡಿರುವ ಆದೇಶ ಕಾಪಿಯನ್ನು ಕಳಿಸುತ್ತಾರೆ. ಇವಾಗ ಬಿಜೆಪಿ ಯವರು ಏನೋ ಇವತ್ತು ನೆಪಕ್ಕೆ ಮಾತಾಡ್ತಿದ್ದಾರೆ. ಇರಲಿ, ಇದೊಂದು ಬಡವರ ಕಾರ್ಯಕ್ರಮ. ಬಡವರ ಕಾರ್ಯಕ್ರಮಕ್ಕೆ ಅವರು ಅಡ್ಡಿ ಪಡಿಸೋದು ಯಾಕೆ? ದ್ವೇಷದ ರಾಜಕಾರಣ ಯಾಕೆ ಮಾಡ್ತಿದ್ದಾರೆ..? ಎಂದರು.
ನಮ್ಮ ವಿರುದ್ಧ ಮಾತಾಡೋದು, ಕಿಚ್ಚ ಸುದೀಪ್ ಭವಿಷ್ಯಕ್ಕೆ ಕುತ್ತು: ಸಚಿವ ಕೆ.ಎನ್. ರಾಜಣ್ಣ
ದುಡ್ಡು ತಿನ್ನೋಕೆ ಆಗುತ್ತಾ? : ಅಕ್ಕಿ ಕೊಡಲು ಆಗದಿದ್ದರೆ ಹಣ ಕೊಡಲಿ ಎಂದು ಬಿಜೆಪಿ ನಾಯಕರು ಹೇಳ್ತಾರೆ. ಅಕ್ಕಿ ಕೊಡೋದು ಅನ್ನ ತಿನ್ನಿ ಅಂತಾ, ಆದರೆ ದುಡ್ಡು ತಿನ್ನಲಿ ಅಂತನಾ..? ಬಿಜೆಪಿ ಯವರು ಇದನ್ನೆಲ್ಲ ಮಾತಾಡೋದು ಬಿಟ್ಟು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅಕ್ಕಿ ಕೊಡಿಸಲಿ. ಬಡವರ ಬಗ್ಗೆ ನಿಜವಾಗಿಯೂ ಅವರಿಗೆ ಕಾಳಜಿ ಇದ್ರೆ ಅಕ್ಕಿ ಕೊಡಿಸಲಿ. ರಾಜಕೀಯ ಮಾಡೋದು ಬಿಡಿ, ಅಕ್ಕಿ ಕೊಡಿಸಲಿ ಎಂದು ಕೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.