ವಿವಾದಿತ ಪ್ರದೇಶದಿಂದ ಹಿಂದೆ ಸರಿದ ಚೀನಾ: ಡ್ರ್ಯಾಗನ್‌ ಟೆಂಟ್‌ಗಳೂ ಸ್ಥಳಾಂತರ!

By Suvarna News  |  First Published Jul 6, 2020, 3:19 PM IST

ಭಾರತ ಹಾಗೂ ಚೀನಾ ಗಡಿಯಲ್ಲಿರುವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಹಿಂಸಾಚಾರ| ಲಡಾಖ್​ನಲ್ಲಿರುವ ಗಾಲ್ವಾನ್ ಕಣಿವೆಯಿಂದ ಹಿಂದೆ ಸರಿದ ಚೀನಾ ಸೈನಿಕರು| ಟೆಂಟ್‌ಗಳ ಸ್ಥಳಾಂತರ 


ಲಡಾಖ್(ಜು.06): ಭಾರತ ಹಾಗೂ ಚೀನಾ ಗಡಿಯಲ್ಲಿರುವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಹಿಂಸಾಚಾರ ಸಂಘರ್ಷ ನಡೆದಿದ್ದು, ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬೆನ್ನಲ್ಲೇ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದ, ಯುದ್ಧಕ್ಕೆ ಬೇಕಾದ ಸಿದ್ಧತೆಗಳು ನಡೆದಿದ್ದವು. ಅಲ್ಲದೇ ಚೀನಾದ 59 Appಗಳನ್ನು ಬ್ಯಾನ್‌ ಮಾಡುವ ಮೂಲಕ ಡಿಜಿಟಲ್ ಸ್ಟ್ರೈಕ್ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ವಿವಾದಿತ ಗಾಲ್ವಾನ್​ ಕಣಿವೆಯ ಪ್ರದೇಶ ಮತ್ತಿತರೆ ಎರಡು ಪ್ರದೇಶಗಳಿಂದ ಚೀನಾ ಸೇನೆ ಹಿಂದೆ ಸರಿದಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ಕೊಂಚ ಮಟ್ಟಿಗೆ ಬಗೆಹರಿದಂತಾಗಿದೆ.

ಈಗ ಭೂತಾನ್‌ ಜೊತೆಗೂ ಚೀನಾ ಗಡಿ ಜಗಳ!

Latest Videos

undefined

 ಇಂದು ಬೆಳಗ್ಗೆ ಲಡಾಖ್​ನಲ್ಲಿರುವ ಗಾಲ್ವಾನ್ ಕಣಿವೆಯಿಂದ ಚೀನೀ ಸೈನಿಕರು ಹಿಂದೆ ಸರಿದಿದ್ದು, ಇಲ್ಲಿ ಅವರು ಹಾಕಿದ್ದ ಟೆಂಟ್‌ಗಳನ್ನೂ ಸ್ಥಳಾಂತರ ಮಾಡಿರುವುದಾಗಿ ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಆದರೆ ಚೀನೀ ಸೇನೆ ನಿಜಕ್ಕೂ ಹಿಂದೆ ಸರಿದಿದಾ? ಅಥವಾ ಈ ಹೆಜ್ಜೆ ಹಿಂದೆ ಬೇರಾವುದಾದರೂ ಉದ್ದೇಶವಿದೆಯಾ ಕಾದು ನೋಡಬೇಕಷ್ಟೇ. ಇನ್ನು ಗಾಲ್ವಾನ್​ ಕಣಿವೆಯ ಗಡಿಯಲ್ಲಿ ಗಲಾಟೆ ನಡೆದ ಬಳಿಕ ಚೀನಾ ತನ್ನ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿದ್ದು, ವಿವಾದಿತ ಪ್ರದೇಶಗಳಾದ ಗಾಲ್ವಾನ್​ ಕಣಿವೆ, ಗೋಗ್ರಾದಲ್ಲಿ 2 ತಿಂಗಳಿಂದ ಚೀನಾ ಸೇನೆ ಬೀಡುಬಿಟ್ಟಿತ್ತು ಎಂಬುವುದು ಉಲ್ಲೇಖನೀಯ.

ಗಡಿಯ ಬಿಕ್ಕಟ್ಟಿನ ಬಗ್ಗೆ ಈ ಮೊದಲು ಚೀನಾ ಮತ್ತು ಭಾರತದ ಸೇನಾ ಕಮಾಂಡರ್​ಗಳ ಮಟ್ಟದಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಗಾಲ್ವಾನ್​ ಕಣಿವೆಯಿಂದ ಎರಡೂ ದೇಶಗಳ ಸೇನೆಯನ್ನು ಹಿಂಪಡೆಯುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಚೀನಾ ತನ್ನ ಸೇನೆಯನ್ನು ವಾಪಾಸ್​ ಕರೆಸಿಕೊಂಡರೆ ಭಾರತ ಕೂಡ ವಿವಾದಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವುದಾಗಿ ತಿಳಿಸಿತ್ತು.

ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದು ಲಡಾಖ್‌ಗೆ ತೆರಳಿ ಸೈನಿಕರೊಂದಿಗೆ ಮಾತನಾಡಿ ಬಂದ ಮೂರು ದಿನಗಳಲ್ಲೇ ಚೀನಾ ಸೈನಿಕರು ಈ ಹೆಜ್ಜೆ ಇರಿಸಿದ್ದಾರೆ ಎಂಬುವುದು ಗಮನಾರ್ಹ. 

click me!