60 ವರ್ಷ ಮೇಲ್ಪಟ್ಟವರು ಹೊರಬರದಂತೆ ರಾಜ್ಯದಲ್ಲಿ ಕಾನೂನು!

By Kannadaprabha NewsFirst Published Jul 6, 2020, 7:52 AM IST
Highlights

60 ವರ್ಷ ಮೇಲ್ಪಟ್ಟವರು ಹೊರಬರದಂತೆ ಕಾನೂನು| ವಿವಿಧ ಅರೋಗ್ಯ ಸಮಸ್ಯೆ ಹೊಂದಿರುವವರಿಗೆ ಅನ್ವಯ| ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಇದರ ಜಾರಿ| ರಾಜ್ಯ ಸರ್ಕಾರದ ಚಿಂತನೆ: ಸಚಿವ ಸುಧಾಕರ್‌

ಬೆಂಗಳೂರು(ಜು.06): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಕಿಡ್ನಿ, ಲಿವರ್‌, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಪೂರ್ವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬಾರದೆಂಬ ಕಾನೂನು ರೂಪಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರು ಹಾಗೂ ಈಗಾಗಲೇ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಾಗಿದ್ದಾರೆ. ಹಾಗಾಗಿ ಅವರ ಸುರಕ್ಷತೆ ದೃಷ್ಟಿಯಿಂದ ಕೊರೋನಾ ನಿಯಂತ್ರಣವಾಗುವವರೆಗೆ ಅಂತಹವರನ್ನು ಮನೆಯಿಂದ ಹೊರಬರದಂತೆ ತಡೆಯಲು ಕಾನೂನು ತರಲು ವಿಚಾರ ಮಾಡುತ್ತಿದ್ದೇವೆ ಎಂದರು.

‘ಕೋವಿಡ್‌ ಸಾಮಾಜಿಕ ಪಿಡುಗಲ್ಲ. ಸೋಂಕು ಬಂದವರೆಲ್ಲರೂ ಸಾವನ್ನಪ್ಪುವುದಿಲ್ಲ. ಈವರೆಗೆ ಶೇ.60ರಷ್ಟುಮಂದಿ ಗುಣಮುಖರಾಗಿದ್ದಾರೆ. ಇತ್ತೀಚೆಗೆ ಸೋಂಕು ಹೆಚ್ಚುತ್ತಿರುವುದರಿಂದ ಗುಣಮುಖರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಯಾರೂ ಆತಂಕಪಡದೆ ಧೈರ್ಯವಾಗಿ ಎದುರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕೊವಿಡ್‌ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಸೋಂಕಿತರ ಅಡ್ಮಿಟ್‌ ಮಾಡಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌!

ಬೂತ್‌ ಮಟ್ಟದ ಟಾಸ್ಕ್‌ ಫೋರ್ಸ್‌ ಹೊಣೆ ಅತೀಕ್‌ಗೆ:

ಕೋವಿಡ್‌ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ 8800 ಬೂತ್‌ಗಳು ಸೇರಿದಂತೆ ರಾಜ್ಯದಲ್ಲಿ ಪ್ರತಿ ಹಳ್ಳಿಯ ಎಲೆಕ್ಷನ್‌ ಬೂತ್‌ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್‌ ಅವರಿಗೆ ಈ ಉಸ್ತುವಾರಿ ನೀಡಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

click me!