ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

By Kannadaprabha News  |  First Published Jul 6, 2020, 7:36 AM IST

ಕಲಬುರಗಿ: ನಗರದ ರಾಘವೇಂದ್ರ ಕಾಲೋನಿಯ ರುದ್ರಭೂಮಿಯಲ್ಲಿರುವ ವಿದ್ಯುತ್‌ ಚಿತಾಗಾರ| ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು| ಸ್ಥಲೀಯರಲ್ಲಿ ಹೆಚ್ಚಿದ ಆತಂಕ


ಕಲಬುರಗಿ(ಜು.06): ನಗರದ ರಾಘವೇಂದ್ರ ಕಾಲೋನಿಯ ರುದ್ರಭೂಮಿಯಲ್ಲಿರುವ ವಿದ್ಯುತ್‌ ಚಿತಾಗಾರಕ್ಕೆ ಮಹಾರಾಷ್ಟ್ರ ಗಡಿಯಿಂದ ಕೋವಿಡ್‌ ಸೋಂಕಿತ ಮೃತ ದೇಹಗಳು ಆಗಮಿಸುತ್ತಿದ್ದು ಅವುಗಳನ್ನು ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ್‌ ಆರೋಪಿಸಿದ್ದಾರೆ.

ಲಾಕ್‌ಡೌನ್‌ ಜಾರಿ ಇಲ್ಲ, ಬೆಂಗಳೂರು ಬಿಟ್ಟು ಹೋಗ್ಬೇಡಿ: ಸಚಿವರ ಮನವಿ!

Tap to resize

Latest Videos

undefined

ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರೆ ರಾಜ್ಯಗಳ ಮೃತ ದೇಹಗಳನ್ನು ಕಲಬುರಗಿ ಚಿತಾಗಾರದಲ್ಲೇಕೆ ಸಂಸ್ಕಾರ ಮಾಡಬೇಕು. ಆಯಾ ಊರಲ್ಲೇ ಸಂಸ್ಕಾರ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಕಳೆದೊಂದು ವಾರದಿಂದ ಆ್ಯಂಬುಲೆನ್ಸ್‌ನಲ್ಲಿ ಕಲಬುರಗಿ ವಿದ್ಯುತ್‌ ಚಿತಾಗಾರಕ್ಕೆ ಹಲವು ಮೃತ ದೇಹಗಳು ಮಹಾ ಗಡಿಗೆ ಅಂಟಿಕೊಂಡಿರುವ ಊರುಗಳಿಂದ ಆಗಮಿಸುತ್ತಿದ್ದು, ಇದರಿಂದ ರುದ್ರಭೂಮಿ ಇರುವ ಪ್ರದೇಶದಲ್ಲಿ ಆತಂಕ ಮೂಡಿದೆ.

ಈ ಸಂಬಂಧ ತಕ್ಷಣ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಭೇಟಿ ನೀಡಿ ಚಿತಾಗಾರದಲ್ಲಿನ ಬೆಳವಣಿಗೆ ಗಮನಿಸಿ ಸದರಿ ಸಮಸ್ಯೆ ಬೆಳೆಯದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

click me!