ನಾನು ಯುವನಿಧಿ ಕಾರ್ಯಕ್ರಮ ಪ್ರಣಾಳಿಕೆ ಉಪಾಧ್ಯಕ್ಷ ಆಗಿದ್ದೆ. ಶಿವಮೊಗ್ಗದಲ್ಲಿ ಕಾರ್ಯಕ್ರಮ ಮಾಡಬೇಕು ಅಂತಾ ಮನವಿ ಮಾಡಿದ್ದೆ.ಹೀಗಾಗಿ ಶಿವಮೊಗ್ಗದಲ್ಲಿ ಮಾಡಬೇಕು ಅಂದೆ ಸಿಎಂ ಒಪ್ಪಿಕೊಂಡರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ (ಜ.03): ನಾನು ಯುವನಿಧಿ ಕಾರ್ಯಕ್ರಮ ಪ್ರಣಾಳಿಕೆ ಉಪಾಧ್ಯಕ್ಷ ಆಗಿದ್ದೆ. ಶಿವಮೊಗ್ಗದಲ್ಲಿ ಕಾರ್ಯಕ್ರಮ ಮಾಡಬೇಕು ಅಂತಾ ಮನವಿ ಮಾಡಿದ್ದೆ.ಹೀಗಾಗಿ ಶಿವಮೊಗ್ಗದಲ್ಲಿ ಮಾಡಬೇಕು ಅಂದೆ ಸಿಎಂ ಒಪ್ಪಿಕೊಂಡರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಿದ್ದರಾಮಯ್ಯ ಸರಕಾರ ಯುವಕರಿಗೆ ಹಣ ಕೊಡ್ತಿದೆ. ಯುವಕರು ಧೈರ್ಯವಾಗಿರಿ ನಿಮ್ಮ ಪರ ನಾವಿದ್ದೇವೆ. 25 ಸಾವಿರ ಯುವಕರು ನೋಂದಣಿ ಮಾಡಿಸಿದ್ದಾರೆ. ಇನ್ನೂ ಹೆಚ್ಚಿನ ಯುವಕರು ನೋಂದಣಿ ಮಾಡಿಸಿ ಎಂದರು.
ಬೆಳಗಾವಿಯ ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಮಕ್ಕಳಿಗೆ ತಾರತಮ್ಯ ವಿಚಾರವಾಗಿ ಮಾಧ್ಯಮದ ಮೂಲಕ ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಸಚಿವ ಸತೀಶ್ ಜಾರಕಿಹೊಳಿ ಹಾಗು ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ವಿಷಯ ಇದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ವಹಿಸುತ್ತೇವೆ. 2024 ಡಿಸೆಂಬರ್ 31 ರೊಳಗೆ ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ ಡೆಸ್ಕ್ ಜಾರಿ ಮಾಡ್ತೇವೆ ಯಾರು ಕೂಡಾ ನೆಲದ ಮೇಲೆ ಕುಳಿತುಕೊಳ್ಳಬಾರದು ಎಂದು ಹೇಳಿದರು. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಅವರಿಗೆ ಕೆಲಸ ಇಲ್ಲ ಪ್ರತಿಭಟನೆ ಮಾಡ್ತಿದ್ದಾರೆ. ಅದು ದುರುದ್ದೇಶದಿಂದ ಮಾಡ್ತಿದ್ದಾರೆಈಗ ಬಿಜೆಪಿಯವರು 67 ಸೀಟ್ ಇದ್ದಾರೆ. ಹೀಗೆ ಆದರೆ 27 ಕ್ಕೆ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.
undefined
ಶಾಲಾ ಸ್ವಚ್ಛತೆ ಬಗ್ಗೆ ಶೀಘ್ರದಲ್ಲೇ ಗೈಡ್‌ಲೈನ್ಸ್: ಭದ್ರಾವತಿಯಲ್ಲೂ ಮಕ್ಕಳ ಕೈಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಸ್ವಚ್ಛತೆ ಜವಾಬ್ದಾರಿ ಕೇವಲ ಶಿಕ್ಷರದ್ದು ಮಾತ್ರವಲ್ಲ, ಶಾಲಾ ಆಡಳಿತ ಮಂಡಳಿ(ಎಸ್‌ಡಿಎಂಸಿ) ಕೂಡ ಇದರ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಶೀಘ್ರದಲ್ಲೇ ಗೈಡ್‌ಲೈನ್ಸ್ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಕೋಲಾರದ ಮಾಲೂರು ಹಾಗೂ ಬೆಂಗಳೂರಿನ ಶಾಲೆ ಬಳಿಕ ಇದೀಗ ಭದ್ರಾವತಿಯಲ್ಲೂ ವಿದ್ಯಾರ್ಥಿಗಳ ಕೈಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಕುಪ್ಪಳಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.
ಬಿಜೆಪಿಯವರು ಮಾತ್ರ ರಾಮ ಭಕ್ತರಾ? ನಾವು ರಾಮ ಭಕ್ತರು: ಶಾಸಕ ಪ್ರಸಾದ್ ಅಬ್ಬಯ್ಯ
ಶಾಲೆಯಲ್ಲಿ ಸ್ವಚ್ಛತೆಯ ಸಮಸ್ಯೆ ಎದುರಾಗುವುದು ನಿಜ. ಆದರೆ ಸ್ವಚ್ಛತೆ ಕೇವಲ ಶಿಕ್ಷಕರ ಹೊಣೆಗಾರಿಕೆಯಾಗಬಾರದು. ಎಸ್‌ಡಿಎಂಸಿ ಕೂಡ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸುವಂಥ ಕೆಲಸ ಮಾಡಿಸಬಾರದು. ಮಕ್ಕಳು ಕೇವಲ ವ್ಯಾಸಂಗದ ಕಡೆಗಷ್ಟೇ ಗಮನಹರಿಸಬೇಕು. ಈ ರೀತಿಯ ಘಟನೆಗಳು ಇಲಾಖೆಗೆ, ರಾಜ್ಯ ಸರ್ಕಾರಕ್ಕೆ ಕೆಟ್ಟಹೆಸರು ತರುತ್ತವೆ. ಹೀಗಾಗಿ ಇಂಥ ಘಟನೆಗಳು ಪುನರಾವರ್ತನೆಯಾದರೆ ಇಲಾಖೆಯಿಂದ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಸಿದರು.