ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು, ತಾಯಿ ಕಳಸೇಶ್ವರೀ ಆಶೀರ್ವದಿಸು!

By Sathish Kumar KH  |  First Published Aug 5, 2023, 11:10 AM IST

ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರಿ ದೇವಿಗೆ ತಾನು ಪ್ರಪಂಚದಲ್ಲಿಯೇ ಸರ್ವಾಂಗ ಸುಂದರನಾಗಬೇಕು, ನಾನು ಖ್ಯಾನ ನಟ ಹಾಗೂ ಮಾಡೆಲ್‌ ಆಗಬೇಕು ಆಶೀರ್ವದಿಸು ತಾಯಿ...


ಚಿಕ್ಕಮಗಳೂರು (ಆ.05): ಇತ್ತೀಚಿನ ದಿನಗಳಲ್ಲಿ ದೇವರಲ್ಲಿ ವಿಚಿತ್ರವಾಗಿ ಮೊರೆಯಿಡುವ ಪತ್ರಗಳು ವೈರಲ್‌ ಆಗುತ್ತಿವೆ. ಅದರಲ್ಲಿ, ನಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗಬೇಕು ಎಂದು, ದ್ವೇಷಿಗಳಿಗೆ ಶಿಕ್ಷೆ ಕೊಡು ಎಂದು ಬೇಡಿಕೊಂಡಿದ್ದೂ ಇದೆ. ಆದರೆ, ಇಲ್ಲೊಬ್ಬ ಯುವಕ ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರಿ ದೇವಿಗೆ ತಾನು ಪ್ರಪಂಚದಲ್ಲಿಯೇ ಸರ್ವಾಂಗ ಸುಂದರನಾಗಬೇಕು, ನನ್ನ ಸೌಂದರ್ಯದ ಹೊಣೆ ನಿನ್ನ ಜವಾಬ್ದಾರಿ ಆಗಿದೆ. ನಾನು ಖ್ಯಾನ ನಟ ಹಾಗೂ ಮಾಡೆಲ್‌ ಆಗಬೇಕು ಎಂದು ಪತ್ರವನ್ನು ಬರೆದು ಹುಂಡಿಗೆ ಹಾಕಿದ್ದಾನೆ. ದೇವಾಲಯ ಹುಂಡಿ ಎಣಿಕೆ ವೇಳೆ ಪತ್ರ ಲಭ್ಯವಾಗಿದ್ದು, ಈಗ ವೈರಲ್‌ ಆಗಿದೆ.

ಚಿಕ್ಕಮಗಳೂರು ತಾಲೂಕಿನ ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಸಿಕ್ಕ ಪತ್ರದ ಮಾಹಿತಿ ಇಲ್ಲಿದೆ ನೋಡಿ. "ತಾಯಿ... ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿಯಾಗಿದೆ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ರಕ್ಷಿತ್‌ ಎಂಬ ಯುವಕ ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ. ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ" ಎಂದು ಪತ್ರವನ್ನು ಬರೆದಿದ್ದಾನೆ..

Tap to resize

Latest Videos

undefined

Chikkamagaluru: ದೇವರಿಗೆ 2000 ಸಾವಿರ ರೂ. ಜೆರಾಕ್ಸ್ ನೋಟ್ ಹಾಕಿ ಹರಕೆ ತೀರಿಸಿದ ಭಕ್ತ!

ಯುವಕನ ಪತ್ರ ನೋಡಿ ಮಾದ್ಯಮಕ್ಕೆ ಮಾಹಿತಿ ನೀಡಿದ ದೇವಸ್ಥಾನ ದಿಬ್ಬಂದಿ: ಇನ್ನು ದೇವರ ಹುಂಡಿಯನ್ನು ತೆರೆದು ಹಣ ಎಣಿಕೆ ಮಾಡುವಾಗ ಈಗ ಪತ್ರವು ಲಭ್ಯವಾಗಿದೆ. ಈ ಪತ್ರವನ್ನು ಓದಿದ ದೇವಾಲಯ ಆಡಳಿತ ಸಿಬ್ಬಂದಿ ವಿಚಿತ್ರ ಪತ್ರವನ್ನು ನೋಡಿ ಮುಸಿ, ಮುಸಿ ನಕ್ಕು ಸುಮ್ಮನಾಗಿದ್ದಾರೆ. ನಂತರ, ಯುವಕನ ಬೇಡಿಕೆಯ ಪತ್ರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಏನೇ ಇರಲಿ ಯುವಕ ದೇವರಲ್ಲಿ ಮೊರೆಯಿಟ್ಟು ಒಂದು ದೊಡ್ಡ ಗುರಿಯನ್ನು ಹೊಂದಿರುವುದಂತೂ ನಿಜ. ನಾವು ನೀವೆಲ್ಲರೂ ದೊಡ್ಡ ಗುರಿ ಹೊಂದಿದ ಯುವಕನ ಪತ್ರ ನೋಡಿ ನಕ್ಕು ಸುಮ್ಮನಾಗದೇ, ಯುವಕನ ಗುರಿಗೆ ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ..

2023ರ ವಿಶ್ವದ ಹ್ಯಾಂಡ್‌ಸಮ್‌ ಪುರುಷ ಇಲ್ಲಿದ್ದಾರೆ ನೋಡಿ..
ದಕ್ಷಿಣ ಕೊರಿಯಾದ ಪ್ರಸಿದ್ಧ ಗಾಯಕ, ಸಂಯೋಜಕ ಮತ್ತು ನಟ ಕಿಮ್ ಟೇಹ್ಯುಂಗ್ "ವಿಶ್ವದ ಅತ್ಯಂತ ಸುಂದರ ವ್ಯಕ್ತಿ" ಎಂದು ಖ್ಯಾತವಾಗಿದ್ದಾರೆ. ಇವರನ್ನು ಕಳೆದ ವರ್ಷ ಎರಡು ನಿಯತಕಾಲಿಕೆಗಳು "ವಿಶ್ವದ ಅತ್ಯಂತ ಸುಂದರ ವ್ಯಕ್ತಿ" ಎಂದು ಕೊಂಡಾಡಿವೆ. ಜನಪ್ರಿಯ ಬ್ರಿಟಿಷ್ ನಿಯತಕಾಲಿಕೆ ನುಬಿಯಾದಲ್ಲಿ ಕಾಣಿಸಿಕೊಂಡ ಸಮೀಕ್ಷೆಯ ಪ್ರಕಾರ, 26 ವರ್ಷ ವಯಸ್ಸಿನ ಸಂಗೀತಗಾರ ಕಿಮ್ ಟೇಹ್ಯುಂಗ್ ವಿಶ್ವದ ಅತ್ಯಂತ ಸುಂದರ ವ್ಯಕ್ತಿ ಎಂಬ ಶೀರ್ಷಿಕೆಯನ್ನು ಗೆದ್ದಿದ್ದಾರೆ. ಇನ್ನು ಈ ವೇಳೆ ಟಾಪ್‌ಟೆನ್‌ ವಿಶ್ವದ ಸುಂದರ ವ್ಯಕ್ತಿಗಳ ಪೈಕಿ ಭಾರತದ ಹೃತಿಕ್‌ ರೋಷನ್‌ 3ನೇ ಸ್ಥಾನವನ್ನು ಪಡೆದಿದ್ದಾರೆ. 

ದೇವರಿಗೆ 2000 ಸಾವಿರ ರೂ. ಜೆರಾಕ್ಸ್ ನೋಟ್ ಹಾಕಿದ ಭಕ್ತ: ಇನ್ನು ಕಳಸೇಶ್ವರ ದೇವಾಲಯದಲ್ಲಿ ಭಕ್ತನೋರ್ವ ದೇವರಿಗೆ 2 ಸಾವಿರ ರೂಪಾಯಿ ನೋಟನ್ನ ಕಲರ್ ಜೆರಾಕ್ಸ್ ಮಾಡಿಸಿ ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆನಡೆದಿತ್ತು. ಹರಕೆ ಕಟ್ಟಿಕೊಂಡಿದ್ದಾನೆಯೋ ಅಥಔಆ ಕಟ್ಟಿದ ಹರಕೆ ತೀರಿಸಿದ್ದಾನೋ ಗೊತ್ತಿಲ್ಲ. ಆದ್ರೆ, ಹುಂಡಿ ಹಣ ಎಣಿಕೆ ಕಾರ್ಯದ ವೇಳೆ 2000 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ. ಆದರೆ, ಇದನ್ನ ಮಕ್ಕಳು ಆಟವಾಡಲು ಬಳಸುವ ನಕಲಿ ನೋಟುಗಳನ್ನು ಹಾಕಿದ್ದಾನೆ.

ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..

ಮಕ್ಕಳಾಟವೋ, ದೊಡ್ಡವರ ಕೃತ್ಯವೋ ಗೊತ್ತಿಲ್ಲ: ಇದನ್ನ ದೊಡ್ಡವರೇ ಹಾಕಿದ್ದಾರೋ ಅಥವ ಮಕ್ಕಳು ಹಾಕಿದ್ದಾರೋ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಹುಂಡಿಯಲ್ಲಿ ಸಿಕ್ಕಿರುವ ಹಣವನ್ನ ನೋಡಿದ ಎಣಿಕಾ ಸಿಬ್ಬಂದಿಗಳು ಆ ನೋಟನ್ನ ಹರಿದು ಹಾಕಿದ್ದಾರೆ. ಈ ಹಿಂದೆ ಇದೇ ದೇವಾಲಯದಲ್ಲಿ ಹುಂಡಿ ಎಣಿಕ ಕಾರ್ಯದ ವೇಳೆ ಭಕ್ತನೋರ್ವ ಇಡೀ ವಂಶವೃಕ್ಷ ಬರೆದು ಎಲ್ಲರಿಗೂ ಒಳ್ಳೆಯದು ಮಾಡು, ಮದುವೆಗೆ ಹೆಣ್ಣು ಸಿಗುವಂತೆ ಮಾಡು. ಪಿಯುಸಿ ಪಾಸ್ ಮಾಡು. ಮಾವನಿಗೆ ಒಳ್ಳೆ ಬುದ್ಧಿ ಕೊಡು ಎಂದು ಬರೆದು ಹಾಕಿದ್ದನು. 2000 ರೂಪಾಯಿಯ ನಕಲಿ ನೋಟು ನೋಡಿದ ಹುಂಡಿ ಎಣಿಕಾ ಸಿಬ್ಬಂದಿಗಳು ನಸುನಕ್ಕು ಆ ನೋಟನ್ನ ಹರಿದು ಹಾಕಿದ್ದಾರೆ.

click me!