
ಬೆಂಗಳೂರು (ಆ.5) ವಿಶೇಷ ಘಟಕಗಳಿಗೆ ಎರವಲು ಸೇವೆ ಮೇಲೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಯ ಸೇವಾ ಅವಧಿಯನ್ನು ಮಾರ್ಗಸೂಚಿ ಪ್ರಕಾರ ಮೂರು ವರ್ಷಕ್ಕೆ ಸೀಮಿತಗೊಳಿಸುವಂತೆ ರಾಜ್ಯ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕರು (ಆಡಳಿತ) ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಗುಪ್ತವಾರ್ತೆ, ಲೋಕಾಯುಕ್ತ, ಕೆಪಿಟಿಸಿಎಲ್, ಬಿಡಿಎ, ಬಿಎಂಟಿಎಫ್, ಸಿಐಡಿ, ಅರಣ್ಯ ಘಟಕ, ಹೈಕೋರ್ಟ್, ಕೆಎಟಿ ಸೇರಿದಂತೆ ವಿಶೇಷ ಘಟಕಗಳಿಗೆ ಪಿಎಸ್‌ಐ ಹಾಗೂ ಕೆಳ ದರ್ಜೆಯ ಸಿಬ್ಬಂದಿಗಳನ್ನು ಎರವಲು ಸೇವೆಗೆ ನಿಯೋಜಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.
ಪ್ರತಿ ಠಾಣೆಯಲ್ಲೂ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿನೆಗೆ ಡಿಜಿಪಿ ಸುತ್ತೋಲೆ
ಇದರ ಪ್ರಕಾರ ಸರ್ಕಾರಿ ನೌಕರರ ಎರವಲು ಸೇವೆ ಪ್ರಾರಂಭದ ಮೂರು ವರ್ಷ ಸಾಮಾನ್ಯ ಅವಧಿ ಮತ್ತು ಗರಿಷ್ಠ ಐದು ವರ್ಷಗಳಿಗೆ ಸೀಮಿತವಾಗಿರಬೇಕು ಎಂದು ಸರ್ಕಾರ ಸೂಚಿಸಿದೆ. ವಿಶೇಷ ಆದೇಶ ಹೊರತುಪಡಿಸಿ ಗರಿಷ್ಠ ಐದು ವರ್ಷಗಳಿಗೆ ಎರವಲು ಸೇವೆ ವಿಸ್ತರಿಸಲು ಅವಕಾಶವಿಲ್ಲ. ಆದರೂ ಕೆಲ ಘಟಕಗಳಲ್ಲಿ ಐದು ವರ್ಷಗಳವರೆಗೆ ಮುಂದುವರೆಸಿರುವುದು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತವಲ್ಲ. ಹೀಗಾಗಿ ಎರವಲು ಸೇವೆ ಮೂರು ವರ್ಷಕ್ಕೆ ಸೀಮಿತಗೊಳಿಸಬೇಕು.
ಮೂರು ವರ್ಷ ಮುಗಿದ ಬಳಿಕ ಪೊಲೀಸ್ ಪ್ರಧಾನ ಕಚೇರಿ ವಿಶೇಷ ಆದೇಶದ ಮೇರೆಗೆ ಮಾತ್ರ ಎರವಲು ಸೇವೆ ವಿಸ್ತರಿಸಬೇಕು. ಎರವಲು ಸೇವೆ ಗರಿಷ್ಠ ಐದು ವರ್ಷ ಮುಗಿದ ಬಳಿಕ ಮಾತೃ ಘಟಕಗಳಲ್ಲಿ ಕನಿಷ್ಠ ಎರಡು ವರ್ಷ ಕರ್ತವ್ಯ ನಿರ್ವಹಿಸಬೇಕು. ಈ ಎರಡು ವರ್ಷ ಪೂರೈಸದವರನ್ನು ಮತ್ತೆ ಎರವಲು ಸೇವೆಗೆ ನೀಯೋಜಿಸದಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಬರ್ತ್‌ಡೇ ಆಚರಿಸಿಕೊಳ್ಳಬೇಕಿದ್ದ ಡಿಜಿಪಿ ಮೊಮ್ಮಗಳನ್ನು ನಡುರಸ್ತೆಯಲ್ಲಿಯೇ ಶೂಟ್ ಮಾಡಿ ಕೊಂದರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ