ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಇಮಿಗ್ರೇಷನ್ ಅಧಿಕಾರಿಗಳು ನಾಲ್ಕು ವರ್ಷಗಳ ಹಿಂದೆ ಚೆನ್ನೈನಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ
ಬೆಂಗಳೂರು (ಜು.6): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಇಮಿಗ್ರೇಷನ್ ಅಧಿಕಾರಿಗಳು ನಾಲ್ಕು ವರ್ಷಗಳ ಹಿಂದೆ ಚೆನ್ನೈನಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಥಾಯ್ಲೆಂಡ್‌ಗೆ ವಿಮಾನ ಹತ್ತುತ್ತಿದ್ದ ವೇಳೆ ಅಧಿಕಾರಿಗಳು ಅವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಬಂದಿತ ವ್ಯಕ್ತಿ, ಪೆರಂಬೂರ್ ಮೂಲದ ಮೊಹಮ್ಮದ್ ವಾಜಿದ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಭಮಿತಾ ಅವರು ಮಾರ್ಚ್ 23, 2020 ರಂದು ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಯಲ್ಲಿ ವಾಜಿದ್ ವಿರುದ್ಧ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ವಾಜಿದ್ ಅವರು 2020 ರಲ್ಲಿ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದಾಗಿನಿಂದ ನಾಪತ್ತೆಯಾಗಿದ್ದು, ಯಾರಿಗೂ ತಿಳಿಸದೆ ಮನೆಯಿಂದ ನಾಪತ್ತೆಯಾಗಿದ್ದರು.
undefined
ರಾಜ್ಯದಲ್ಲಿನ ಈಗಿನ ಬೆಳವಣಿಗೆ ನೋಡಿದ್ರೆ, ಬಬಲಾದಿ ಮುತ್ಯಾನ ಕಾಲಜ್ಞಾನದ ಭವಿಷ್ಯ ನಿಜವಾಯ್ತಾ?
ಬೆಂಗಳೂರು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿ, ಕಳೆದ ಕೆಲವು ವರ್ಷಗಳಿಂದ ತಮಿಳುನಾಡು ಪೊಲೀಸರು ವಾಜಿದ್‌ನ ಮೇಲೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಥೈಲ್ಯಾಂಡ್‌ಗೆ ಇಂಡಿಗೋ ವಿಮಾನ ಹತ್ತುವಾಗ ವಲಸೆ ಅಧಿಕಾರಿಗಳು ಅವನನ್ನು ಪತ್ತೆ ಮಾಡಿದ್ದಾರೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ, ಲುಕ್ ಔಟ್ ನೋಟಿಸ್ ಇತ್ತು. ವಿಚಾರಣೆ ಬಳಿಕ ತಡವಾಗಿ ಅವರನ್ನು ಬಂಧಿಸಲಾಯಿತು ಎಂದಿದ್ದಾರೆ.
ಬಿಬಿಎಂಪಿ ಮಹಾ ಅಕ್ರಮ, ಅಸ್ತಿತ್ವದಲ್ಲೇ ಇಲ್ಲದ 27 ಸಹಕಾರಿ ಸಂಘಗಳಿಗೆ ₹18 ಕೋಟಿ ಹಣ ವರ್ಗಾವಣೆ!
ವಾಜಿದ್ ಬಂಧನದ ಬಳಿಕ ಅಧಿಕಾರಿಗಳು ಚೆನ್ನೈ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆತನನ್ನು ಚೆನ್ನೈಗೆ ಸ್ಥಳಾಂತರಿಸಲಾಯಿತು. ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದು ವಾಜಿದ್ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ವಾಜಿದ್ ತನ್ನ ಬಹುಪಾಲು ಸಾಲವನ್ನು ತೀರಿಸಿದ್ದಾನೆ. ಹೀಗಾಗಿ ತನ್ನ ಊರಿಗೆ ಹಿಂತಿರುಗಲು ಯಾವುದೇ ಸಮಸ್ಯೆ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.