'ಆಟವಾಡೋ ಮಕ್ಕಳೆಲ್ಲ ಕುಡಿದು ಸಾಯ್ತಿದ್ದಾರೆ ಸಾರ್, ಬಾರ್ ಕ್ಲೋಸ್ ಮಾಡ್ಸಿ' ಸಚಿವರ ಮುಂದೆ ಕೈಮುಗಿದು ಬೇಡಿಕೊಂಡ ಮಹಿಳೆ!

By Ravi Janekal  |  First Published Jul 6, 2024, 5:35 PM IST

'ಸಾರ್ ಆಟವಾಡೋ ಮಕ್ಕಳೆಲ್ಲ ಬಾರ್‌ಗೆ ಹೋಗ್ತಾರೆ ಸರ್, ನಮ್ಮೂರಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ ಮಾಡ್ತಿದ್ದಾರೆ, ಆಡೋ ವಯಸ್ನಲ್ಲಿ ಕುಡಿದು ಸಾಯ್ತಿ್ದಾರೆ ಸರ್' ಎಂದು ಗ್ರಾಮದಲ್ಲಿ ಬಾರ್‌ನಿಂದಾಗುತ್ತಿರುವ ಅನಾಹುತವನ್ನ ಸಚಿವ ಶರಣ್ ಪ್ರಕಾಶ್ ಪಾಟೀಲ್‌ರ ಮುಂದೆ ಬಿಚ್ಚಿಟ್ಟ ಮಹಿಳೆ. 

woman requested Minister Sharan Prakash Patil to close the wine shop in marle village chikkamagaluru rav

ಚಿಕ್ಕಮಗಳೂರು (ಜು.6): 'ಸಾರ್ ಆಟವಾಡೋ ಮಕ್ಕಳೆಲ್ಲ ಬಾರ್‌ಗೆ ಹೋಗ್ತಾರೆ ಸರ್, ನಮ್ಮೂರಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ ಮಾಡ್ತಿದ್ದಾರೆ, ಆಡೋ ವಯಸ್ನಲ್ಲಿ ಕುಡಿದು ಸಾಯ್ತಿ್ದಾರೆ ಸರ್' ಎಂದು ಗ್ರಾಮದಲ್ಲಿ ಬಾರ್‌ನಿಂದಾಗುತ್ತಿರುವ ಅನಾಹುತವನ್ನ ಸಚಿವ ಶರಣ್ ಪ್ರಕಾಶ್ ಪಾಟೀಲ್‌ರ ಮುಂದೆ ಬಿಚ್ಚಿಟ್ಟ ಮಹಿಳೆ. 

ವೈದ್ಯಕೀಯ ಸಚಿವ ಶರಣ್ ಪ್ರಕಾಶ್ ಪಾಟೀಲ್ ಚಿಕ್ಕಮಗಳೂರಿನ ಮರ್ಲೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಚಿವರ ಕಾರಿನ ಮುಂದೆ ನಿಂತು ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಕೈಮುಗಿದು ಬೇಡಿಕೊಂಡ ಮಹಿಳೆ, ಮರ್ಲೆ ಗ್ರಾಮದಲ್ಲಿ ವೈನ್‌ ಶಾಪ್‌ನಿಂದಾಗಿ ಗ್ರಾಮದ ಅಪ್ರಾಪ್ತ ಯುವಕರು ಸಹ ಕುಡಿಯಲು ಆರಂಭಿಸಿದ್ದು ಆಡುವ ಮಕ್ಕಳು ಬಾರ್‌ಗೆ ಹೋಗುತ್ತಿದ್ದಾರೆ. ಮಕ್ಕಳು ಕುಡಿತದ ವ್ಯಸನಕ್ಕೆ ಬಲಿಯಾಗಿರುವುದರಿಂದ ಚಿಕ್ಕವಯಸ್ಸಿನ ಸಾಯುತ್ತಿದ್ದಾರೆ. ಇದರಿಂದ ಕುಟುಂಬಗಳು ಕಣ್ಣೀರಿಡುತ್ತಿದ್ದಾರೆ. ದಯವಿಟ್ಟು ವೈನ್ ಶಾಪ್ ಬಂದ್ ಮಾಡ್ಸಿ ಸರ್ ಎಂದು ಸಚಿವರ ಮುಂದೆ ಕೈಮುಗಿದು ಮಹಿಳೆ ಮನವಿ ಮಾಡಿದ್ದಾರೆ.

Tap to resize

Latest Videos

ವಾಲ್ಮೀಕಿ ನಿಗಮ ಹಗರಣಕ್ಕೂ ನನಗೂ ಸಂಬಂಧವಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

ಈ ಹಿಂದೆ ಚಿಕ್ಕಮಗೂರು ಶಾಸಕ ಎಚ್‌ಡಿ ತಮ್ಮಯ್ಯ ಎದುರು ಅಳಲು ತೋಡಿಕೊಂಡಿದ್ದ ಮಹಿಳೆ. ಡಿಸಿ ಕಚೇರಿ ಮುಂದೆಯೂ ವೈನ್ ಶಾಪ್ ಕ್ಲೋಸ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಪಟ್ಟು ಬಿಡದ ಮಹಿಳೆ ಇದೀಗ ಸಚಿವ ಶರಣ್ ಪ್ರಕಾಶ್ ಪಾಟೀಲ್ ಬಳಿಯೂ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರ ಸಮಸ್ಯೆ, ಚಿಕ್ಕಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವ ಬಾರ್ ವೈನ್ ಶಾಪ್ ಬಂದ್ ಮಾಡಿಸಿ ಮಹಿಳೆಯ ಮನವಿಗೆ ಸ್ಪಂದಿಸುತ್ತಾರಾ? ಅಥವಾ ಯಾರೇ ಸತ್ತರೂ ಮದ್ಯ ಮಾರಾಟ ಮುಂದುವರಿಯುತ್ತದ? ಕಾದು ನೋಡಬೇಕು.

vuukle one pixel image
click me!
vuukle one pixel image vuukle one pixel image