
ಬೆಂಗಳೂರು(ಫೆ.08): ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ವು ಕೆಪಿಎಲ್‌ನ ಇಬ್ಬರು ಮಾಲೀಕರು, ಆಟಗಾರರು ಸೇರಿ 16 ಮಂದಿ ವಿರುದ್ಧ ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ.
ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರಾ, ಬಳ್ಳಾರಿ ಟಸ್ಕರ್ಸ್ ಮಾಲೀಕ ಅರವಿಂದ ವೆಂಕಟೇಶ ರೆಡ್ಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ವಹಣಾ ಸಮಿತಿಯ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ, ನಿಶಾಂತ್ ಸಿಂಗ್ ಶೇಖಾವತ್, ಬೆಂಗಳೂರು ಬ್ಲಾಸ್ಟರ್ ಬೌಲಿಂಗ್ ಕೋಚ್ ವಿನೂ ಪ್ರಸಾದ್, ಬ್ಯಾಟ್ಸ್‌ಮನ್ ಎಂ.ವಿಶ್ವನಾಥನ್, ಬುಕ್ಕಿಗಳಾದ ಮಾವಿ ಹಾಗೂ ಡ್ರಮರ್ ಭವೇಶ್ ಭಫ್ನಾ, ಬುಕ್ಕಿಗಳಾದ ಸಯ್ಯಮ್, ಜಟಿನ್, ಹರೀಶ್, ಮೊಂಟಿ, ವೆಂಕಿ, ಕಿರಣ್ ಅವರ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ.
ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!
ಆರೋಪಿಗಳ ವಿರುದ್ಧ ಕಬ್ಬನ್‌ಪಾರ್ಕ್, ಭಾರತೀನಗರ ಮತ್ತು ಜೆ.ಪಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ನಡೆದ ಕೆಪಿಎಲ್ ಪಂದ್ಯಾವಳಿಯೊಂದರಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಿರುವ ಮಾಹಿತಿ ಹೊರ ಬಂದಿತ್ತು. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಡ್ರಮ್ಮರ್ ಆಗಿರುವ ಭವೇಶ್ ಬಫ್ನಾ ಆಟಗಾರರ ಜತೆ ಸ್ಪಾಟ್ ಫಿಕ್ಸಿಂಗ್ ಮಾತುಕತೆ ನಡೆಸುತ್ತಿದ್ದ.
ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್ ವಿರುದ್ಧ ಹೊಡೆದಿದ್ದು ಸೆಂಚುರಿ..!
ಇದಕ್ಕೆ ತಂಡದ ಮಾಲೀಕರು ಮತ್ತು ತರಬೇತುದಾರರನ್ನು ಮೊದಲು ಸಂಪರ್ಕಕ್ಕೆ ತೆಗೆದುಕೊಳ್ಳುತ್ತಿದ್ದ. ಹೋಟೆಲ್‌ಗೆ ಬೌಲಿಂಗ್ ತರಬೇತುದಾರರನ್ನು ಕರೆದುಕೊಂಡು ಹೋಗಿ ಆಟಗಾರರಿಂದ ಸ್ಪಾಟ್ ಫಿಕ್ಸಿಂಗ್‌ಗೆ ಒಪ್ಪಿಸುತ್ತಿದ್ದ. ಈ ಕೆಲಸಕ್ಕೆ ವಿನೂ ಪ್ರಸಾದ್ ನೆರವಾಗುತ್ತಿದ್ದ. ಹೀಗೆ ಆರೋಪಿಗಳು ಬೌಲರ್‌ಗಳನ್ನು ಸಂಪರ್ಕ ಮಾಡಿ ಓವರ್‌ಗೆ 10 ರನ್‌ಗಳಿಗೂ ಹೆಚ್ಚು ರನ್ ನೀಡಿದರೆ ಒಂದು ಓವರ್‌ಗೆ ಎರಡು ಲಕ್ಷ ರು. ನೀಡಲಾಗುವುದು ಎಂದು ಆಮಿಷವೊಡ್ಡುತ್ತಿದ್ದರು. ಹಣದ ಆಮಿಷಕ್ಕೆ ಒಳಗಾಗಿ ಕೆಲವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಕರ್ನಾಟಕದ ಖ್ಯಾತ ರಣಜಿ ಆಟಗಾರರಾದ ಸಿಎಂ ಗೌತಮ್, ಅಬ್ರಾರ್ ಖಾಜಿ ಕೂಡ ಪಾಲ್ಗೊಂಡಿದ್ದಾರೆ.
ಹನಿಟ್ರ್ಯಾಪ್ ಮೂಲಕ ಬಲೆಗೆ:
ಸುಲಭವಾಗಿ ಆಟಗಾರರನ್ನು ಸ್ಪಾಟ್ ಫಿಕ್ಸಿಂಗ್‌ಗೆ ಬಳಸಿಕೊಳ್ಳಲು ಹನಿಟ್ರ್ಯಾಪ್ ಕೂಡ ನಡೆಸಲಾಗಿತ್ತು. ಆಟಗಾರರನ್ನು ಬಲವಂತವಾಗಿ ದಂಧೆಗೆ ದೂಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿತ್ತು. ಪ್ರಕರಣ ಸಂಬಂಧ ಇದುವರೆಗೂ 60ಕ್ಕೂ ಹೆಚ್ಚು ಆಟಗಾರರು ಹಾಗೂ ಕೆಲ ತಂಡಗಳ ಮಾಲೀಕರುಗಳು ಮತ್ತು ಮಾಡೆಲ್‌ಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಇದೇ ವೇಳೆ 2018ರ ಆವೃತ್ತಿಯಲ್ಲಿ ಸ್ಪಾಟ್‌ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ಆಗಿದ್ದ ವಿನುಪ್ರಸಾದ್ ಹಾಗೂ ಆರಂಭಿಕ ಆಟಗಾರ ಎಂ.ವಿಶ್ವನಾಥನ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಭಾಗಿಯಾಗಿದ್ದಾರೆ ಎಂದು ಚಾಜ್‌ರ್‍ಶೀಟ್‌ನಲ್ಲಿ ಹೇಳಲಾಗಿದೆ.
ಮಿನಿ ಒಲಿಂಪಿಕ್ಸ್: ಬೆಳಗಾವಿ ಖೋ-ಖೋ ತಂಡಕ್ಕೆ ಚಿನ್ನ
ಇನ್ನು ಐಪಿಎಲ್ ತಂಡಗಳಲ್ಲಿಯೂ ಗೌತಮ್, ಖಾಜಿ, ನಿಶಾಂತ್ ಆಟವಾಡಿದ್ದಾರೆ. ನಿಶಾಂತ್ ಸಿಂಗ್ ಶೇಖಾವತ್ ಈತ, ಬುಕ್ಕಿಗಳನ್ನು ನೇರವಾಗಿ ಆಟಗಾರರ ಬಳಿ ಕರೆದೊಯ್ದು ದಂಧೆ ನಡೆಸುತ್ತಿದ್ದ. ಡ್ರಮರ್ ಭವೇಶ್ ಭಫ್ನಾ ಮುಂಬೈನಲ್ಲಿದ್ದುಕೊಂಡೇ ಕೆಪಿಎಲ್ ತಂಡ ಮಾಲೀಕರಾದ ಅಶ್ಪಾಕ್ ಅಲಿ ಮತ್ತು ವೆಂಕಟೇಶ್ ರೆಡ್ಡಿಯನ್ನು ಸಂಪರ್ಕಿಸಿ ಫಿಕ್ಸಿಂಗ್ ಮಾಡಿಸುತ್ತಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವಾಗ ನಿಧಾನವಾಗಿ ಆಡಲು ಸೂಚಿಸುತ್ತಿದ್ದ. ಬೌಲಿಂಗ್ ಕೋಚ್ ವಿಶ್ವನಾಥ್ ತರಬೇತಿ ಸಂದರ್ಭದಲ್ಲಿ ಆಯ್ದ ಆಟಗಾರರಿಗೆ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಸೂಚಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ