7ನೇ ತರಗತಿ ಪರೀಕ್ಷೆಗೆ 6.4 ಕೋಟಿ ರು. ವೆಚ್ಚ

Kannadaprabha News   | Asianet News
Published : Feb 08, 2020, 08:39 AM IST
7ನೇ ತರಗತಿ ಪರೀಕ್ಷೆಗೆ 6.4 ಕೋಟಿ ರು. ವೆಚ್ಚ

ಸಾರಾಂಶ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ  ಅಧಿಕೃತ ಆದೇಶ ಹೊರಡಿಸಲಾಗಿದೆ.ಮೌಲ್ಯಾಂಕನ ಪರೀಕ್ಷೆಗೆ ತಗಲುವ ಅಂದಾಜು 6.40 ಕೋಟಿ ರು.ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಪಡೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಬೆಂಗಳೂರು [ಫೆ.08]:  ಪ್ರಸಕ್ತ ಸಾಲಿನ 7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಗೆ ತಗಲುವ ಅಂದಾಜು 6.40 ಕೋಟಿ ರು.ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಪಡೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ  ಅಧಿಕೃತ ಆದೇಶ ಹೊರಡಿಸಲಾಗಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟಸುಧಾರಿಸುವ ಮತ್ತು ಶಿಕ್ಷಕರ ಬೋಧನಾ ಮಟ್ಟಅರಿಯಲು ನಡೆಸುವ ಈ ಪರೀಕ್ಷೆಗೆ ತಗಲುವ ವೆಚ್ಚವನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದಲೇ (ಸಿಎಸಿ) ಕರ್ನಾಟಕ ಶಾಲಾ ಗುಣಮಟ್ಟಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು(ಕೆಎಸ್‌ಕ್ಯೂಎಎಸಿ) ಪಡೆಯುವಂತೆ ಅಥವಾ ಪ್ರಸಕ್ತ ಸಾಲಿಗೆ ಮಾತ್ರ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಪಡೆಯುವಂತೆ ಆದೇಶದಲ್ಲಿ ತಿಳಿಸಿದೆ.

ಹಿರಿಯೂರು ತರಕಾರಿ ವ್ಯಾಪಾರಿ ಮಗಳಿಗೆ ಚಿನ್ನದ ಪದಕ, ಸಾಧನೆಗೆ ಸಲಾಂ!

ಷರತ್ತುಗಳು:  7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಡೆಸಬೇಕು. ಸಂಕಲನಾತ್ಮಕ ಮೌಲ್ಯಮಾಪನ-2ರಲ್ಲಿರುವ ಪಠ್ಯಗಳನ್ನು ಆಧರಿಸಿ 40 ಅಂಕಗಳಿಗೆ ಪರೀಕ್ಷೆ ನಡೆಸುವುದು. ಮೌಲ್ಯಮಾಪನವನ್ನು ಕೂಡ ಶಾಲಾ ಹಂತದಲ್ಲಿ ನಡೆಸುವುದು. ಸಂಬಂಧಪಟ್ಟಶಾಲಾ ಪರಿವೀಕ್ಷಣೆಯಲ್ಲಿಯೇ ಶಿಕ್ಷಕರೇ ನಿರ್ವಹಿಸಬೇಕು ಎಂದು ತಿಳಿಸಿದೆ.

ಮಾಚ್‌ರ್‍ 2ನೇ ವಾರದಲ್ಲಿ ನಡೆಯಲಿರುವ 7ನೇ ತರಗತಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆಗೆ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌)ಯಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಫೆ.10ರವರೆಗೂ ಕಾಲಾವಕಾಶ ನೀಡಲಾಗಿದೆ.

ಸಚಿವರ ಹೇಳಿಕೆಗೂ ಆದೇಶಕ್ಕೂ ವ್ಯತ್ಯಾಸ

ಸಚಿವರು ಪರೀಕ್ಷೆ ಘೋಷಿಸಿದ್ದ ವೇಳೆ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ನಡೆಸಿ ಅಂಕಪಟ್ಟಿವಿತರಿಸಲಾಗುವುದು ಎಂದು ಹೇಳಿದ್ದರು. ಇದೀಗ ಶಾಲಾ ಹಂತದಲ್ಲಿಯೇ ಮೌಲ್ಯಮಾಪನ ನಡೆಸುವಂತೆ ನಿರ್ದೇಶನ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜೈಲಿನಿಂದ ಹೊರಬಂದ ಶಾಸಕ ಪಪ್ಪಿ: ನಟ ದರ್ಶನ್‌ ಭೇಟಿ, ಡಿಕೆ ಶಿವಕುಮಾರ್ ಬಗ್ಗೆ ಹೇಳಿದ್ದೇನು?
Kogilu Layout: ಶೆಡ್‌ ಧ್ವಂಸ ಕುರಿತು ಪಾಕ್‌ಗೆ ಉಗ್ರರಿಂದ ಮಾಹಿತಿ, ಇದು ಸ್ಲೀಪರ್‌ಸೆಲ್‌ಗಳ ಕೆಲಸ: ಆರ್ ಅಶೋಕ್