ಚೈತ್ರಾ ಕುಂದಾಪುರ ಹೈಡ್ರಾಮಾ: ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲ ಅಂತಾಳೆ

By Sathish Kumar KH  |  First Published Sep 16, 2023, 11:02 AM IST

ಬಿಜೆಪಿ ಟಿಕೆಟ್‌ ವಂಚನೆ ಆರೋಪಿ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದ್ದು, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲವೆಂದು ಹೈಡ್ರಾಮಾ ಶುರುಮಾಡಿದ್ದಾಳೆ.


ಬೆಂಗಳೂರು (ಸೆ.16): ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿದ ಎ1 ಆರೋಪಿ ಚೈತ್ರಾ ಕುಂದಾಪುರ ಅವರನ್ನು ಪೊಲೀಸ್‌ ವಿಚಾರಣೆಗೆ ಒಪ್ಪಿಸಲಾಗಿದೆ. ಆದರೆ ಆಕೆ ತಲೆಸುತ್ತು ಬಂದಿದೆ, ಪಿಡ್ಸ್‌ ಇದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ವೈದ್ಯರು ತಪಾಸಣೆ ಮಾಡಿದಾಗ ಆರೋಗ್ಯ ಸ್ಥಿರವಾಗಿದ್ದು, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌ ಬಂದಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವಂತೆ ವೈದ್ಯರು ಹೇಳಿದರೂ ಇದಕ್ಕೊಪ್ಪದೇ ಆಸ್ಪತ್ರೆಯಿಂದ ಹೋಗದೇ ಡ್ರಾಮಾ ಮಾಡುತ್ತಿದ್ದಾಳೆ.

ಅನಾರೋಗ್ಯವೆಂದು ನಿನ್ನೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ ಹೈಡ್ರಾಮಾ ಆಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸಿಸಿಬಿ ತನಿಖೆಯಿಂದ ತಪ್ಪಿಸಿಕೊಳ್ಳಲು ಚೈತ್ರಾ ಹೈಡ್ರಾಮ ಮಾಡಿದ್ರಾ ಎಂಬಂತೆ ಕಂಡುಬರುತ್ತಿದೆ. ಈ ಬಗ್ಗೆ ವೈದ್ಯರೇ ಖುದ್ದು ಚೈತ್ರಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಆಕೆಯ ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಇದೆ. ಎಲ್ಲ ಸ್ಥಿರವಾಗಿದ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಿಲ್ಲ ಎಂದು ಚೈತ್ರಾ ಹಠವಿಡಿದಿದ್ದಾರೆ. ಡಿಸ್ಚಾರ್ಜ್‌ ಆಗುವಂತೆ ವೈದ್ಯರು ಹೇಳುವ ಮಾತಿಗೂ ಚೈತ್ರಾ ಕುಂದಾಪುರ ಯಾವದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

Latest Videos

undefined

ಚೈತ್ರಾ ಕುಂದಾಪುರ ಗ್ಯಾಂಗ್‌ ವಂಚನೆಗೆ ವಿಡಿಯೋ ಸಾಕ್ಷ್ಯ: ಮೂರ್ಛೆ ಬಂದಂತೆ ಹೈಡ್ರಾಮಾ!

ಸಿಸಿಬಿ ಕಸ್ಟಡಿ ಮುಗಿಯೋವರೆಗೂ ಟೈಮ್‌ಪಾಸ್‌ ಆಲೋಚನೆ: ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಎಂದು ವೈದ್ಯರು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೀವು ಅವರನ್ನು ಮಾತನಾಡಿಸಬಹುದು ಎಂದು ಹೇಳಿದ್ದಾರೆ. ಇನ್ನು ಚೈತ್ರಾಳಿಗೆ ಅಟೆಂಡರ್ಸ್ ಇಲ್ಲದ ಕಾರಣ, ವೈದ್ಯರು ಐಸಿಯುನಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಚೈತ್ರಾ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಯಾರ ಬಳಿಯೂ ಮಾತನಾಡ್ತಿಲ್ಲವಂತೆ. ಸಿಸಿಬಿ ಕಸ್ಟಡಿ ಅಂತ್ಯವಾಗೋವರೆಗೂ ಇದೇ ರೀತಿ ಟೈಮ್ ಪಾಸ್ ಮಾಡೋ ಫ್ಲಾನ್ ನಲ್ಲಿದ್ದರಾ ಎಂಬ ಅನುಮಾನ ಕೂಡ ಕಂಡುಬಂದಿದೆ.

ಚೈತ್ರಾಳ ಹೈಡ್ರಾಮಾ ಪೊಲೀಸರಿಗೆ ತಲೆನೋವು: ಈಗಾಗಲೇ ನಿನ್ನೆ ದಿನಪೂರ್ತಿ ಆಸ್ಪತ್ರೆಯಲ್ಲೇ ಇದ್ದ ಚೈತ್ರ, ಇಂದು ಮತ್ತೆ ತನಗೆ ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸುವಂತೆ ಹಠವಿಡಿದ್ದಾರೆ. ಇದೇ ರೀತಿ ಆದ್ರೆ ಸಿಸಿಬಿ ತನಿಖೆಗೆ ಅಡ್ಡಿಯಾಗೋ ಸಾಧ್ಯತೆಯಿದೆ. ಈಗಾಗಲೇ ಚೈತ್ರಾ ಬಳಿ ಹಲವು ಮಾಹಿತಿ ಪಡೆಯಬೇಕಾಗಿದ್ದರೂ, ಆರೋಗ್ಯ ವಿಚಾರದಲ್ಲಿ ಮಾಡುತ್ತಿರುವ ಹೈಡ್ರಾಮಾದಿಂದಾಗಿ ಪೊಲೀಸರಿಗೆ ತಲೆನೋವು ಶುರುವಾಗಿದೆ. ಇನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದ ಚೈತ್ರಾಳ ಆರೋಗ್ಯದ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ನಿರಂತರವಾಗಿ ಅಪ್ಡೇಟ್‌ ಮಾಹಿತಿ ನೀಡುತ್ತಿದ್ದಾರೆ. 

ಚೈತ್ರಾ ಕುಂದಾಪುರ ಗ್ಯಾಂಗ್‌ ವಂಚನೆಗೆ ವಿಡಿಯೋ ಸಾಕ್ಷ್ಯ: ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಗ್ಯಾಂಗ್‌ ಎಸಗಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಡಿಯೋ ಸಾಕ್ಷ್ಯ ಬಹಿರಂಗಗೊಂಡಿದೆ. ಕಳೆದ ಏ.24ರಂದು ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್‌ ಕಡೂರ್‌, ಪ್ರಸಾದ್‌ ಬೈಂದೂರು ಹಾಗೂ ಶ್ರೀಕಾಂತ್‌ ಬಂಡೆಪಾಳ್ಯದ ಉದ್ಯಮಿ ಗೋವಿಂದಬಾಬು ಪೂಜಾರಿಯ ಕಚೇರಿಗೆ ಬಂದಿದ್ದಾರೆ. 

ಜಾತಿ ನಿಂದನೆ, ಹಲ್ಲೆ ಆರೋಪ: ಸಚಿವ ಸುಧಾಕರ್‌ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ

ಈ ವೇಳೆ ಮಾತುಕತೆ ನಡೆಯುವಾಗ ಚಿಕ್ಕಮಗಳೂರು ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್‌ ಕಡೂರು ಬ್ಯಾಗ್‌ನಿಂದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದ್ದಾನೆ. ಈ ವೇಳೆ ಇತರೆ ಆರೋಪಿಗಳು ವಿಷದ ಬಾಟಲಿ ಕೆಳಕ್ಕೆ ಬೀಳಿಸಿ ಗಗನ್‌ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದಂತೆ ಸಿನಿಮೀಯ ಶೈಲಿಯಲ್ಲಿ ಡ್ರಾಮಾ ಮಾಡಿದ್ದಾರೆ. ನೆಲಕ್ಕೆ ಬಿದ್ದು ಒದ್ದಾಡುವ ಗಗನ್‌ನನ್ನು ಚೈತ್ರಾ ಕುಂದಾಪುರ, ಶ್ರೀಕಾಂತ್‌, ಪ್ರಸಾದ್‌ ಬೈಂದೂರು ಹಾಗೂ ಗೋವಿಂದ ಬಾಬು ಪೂಜಾರಿ ಅವರ ಸಿಬ್ಬಂದಿ ಎತ್ತಿಕೊಂಡು ಹೊರಗೆ ಕರೆದುಕೊಂಡು ಹೋಗುತ್ತಾರೆ.

click me!