ಹಳೆ ವಾಹನಕ್ಕೂ ಹೊಸ ನಂಬರ್‌ ಪ್ಲೇಟ್‌ ಕಡ್ಡಾಯ: ತಪ್ಪಿದ್ರೆ ದಂಡ ಫಿಕ್ಸ್‌..!

By Kannadaprabha News  |  First Published Sep 16, 2023, 10:44 AM IST

ಎಚ್‌ಎಸ್‌ಆರ್‌ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್ಸ್‌) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. 


ಬೆಂಗಳೂರು(ಸೆ.16):  ಅಪರಾಧ ಕೃತ್ಯಗಳಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದ ಎಲ್ಲ ಹಳೆಯ ವಾಹನಗಳ ನಂಬರ್‌ಪ್ಲೇಟ್‌ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ(ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸದಸ್ಯ ಡಾ. ಕಮಲಜಿತ್‌ ಸೋಯಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಸ್‌ಆರ್‌ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್ಸ್‌) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್‌ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.

Tap to resize

Latest Videos

ಹಳೆ ವಾಹನಗಳಿದ್ರೆ ಈಗಲೇ ಹೊಸ ನಂಬರ್ ಪ್ಲೇಟ್ ಅಳವಡಿಸಿ; ಅಲಕ್ಷ್ಯ ಮಾಡಿದ್ರೆ ಬೀಳುತ್ತೆ ದಂಡ!

ಈಗಾಗಲೇ ದೇಶದ ದೆಹಲಿ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಸಿಕ್ಕಿಂ ಸೇರಿದಂತೆ 18 ರಾಜ್ಯಗಳು ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆಯೇ ಇದು ಕಡ್ಡಾಯವಾಗಿತ್ತು. ಆದರೆ, ಕರ್ನಾಟಕದ ಸಾರಿಗೆ ಇಲಾಖೆ 2023 ಆಗಸ್ಟ್‌ 18ರಂದು ಆದೇಶ ಹೊರಡಿಸಿದೆ. ಹೊಸ ನಂಬರ್‌ ಪ್ಲೇಟ್‌ ಅಳವಡಿಕೆಗೆ ನ.17ರವರೆಗೆ ಕಾಲಾವಕಾಶ ನೀಡಿದೆ. ತಪ್ಪಿದರೆ 500ರಿಂದ 1 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದರು.

ವಾಹನಗಳ ಮಾಲೀಕರು ಶೋ ರೂಂ ಅಥವಾ ಡೀಲರ್‌ಗಳಲ್ಲಿ ನಂಬರ್‌ ಪ್ಲೇಟ್‌ ಬದಲಾವಣೆಗೆ ಕೋರಿಕೆ ಸಲ್ಲಿಸಬಹುದು. ನಾಲ್ಕುಚಕ್ರದ ವಾಹನಗಳಿಗೆ 400ರಿಂದ 500 ರು.ಗಳವರೆಗೆ ಶುಲ್ಕ ಇರುತ್ತದೆ. ಒರಿಜಿನಲ್‌ ಇಕ್ಯುಪ್‌ಮೆಂಟ್‌ ಮ್ಯಾನುಫ್ಯಾಕ್ಚರರ್‌ರಿಂದ(ಒಇಎಂ) ಅಧಿಕೃತ ಫೋರ್ಟಲ್‌ನಲ್ಲಿ ನಮೂದಿಸಿದ ಮೇಲೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತದೆ. ರಾಜ್ಯಾದ್ಯಂತ ಸುಮಾರು ನಾಲ್ಕು ಸಾವಿರ ಡೀಲರ್‌ ಪಾಯಿಂಟ್‌ಗಳಲ್ಲಿ ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲಾಗುತ್ತದೆ. ಏಕೀಕೃತ ಪೋರ್ಟಲ್‌ ಡಿಡಿಡಿ.sಜಿaಞ.ಜ್ಞಿ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಆರ್ಡರ್‌ ಮಾಡಲು, ಡೀಲರ್‌ ತಾಣಗಳನ್ನು ಕಂಡುಕೊಳ್ಳಲು ಮತ್ತು ನಂಬರ್‌ ಪ್ಲೇಟ್‌ ಅಳವಡಿಕೆ ದಿನಾಂಕ, ಸಮಯ ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ ಇತ್ಯಾದಿ ಸಾಧ್ಯವಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಮಾಡಿಕೊಂಡ ಮಾಹಿತಿಯನ್ನು ವಾಹನ್‌ ತಂತ್ರಾಂಶದಲ್ಲಿ ಮಾಲೀಕರ ಮಾಹಿತಿ ಲಭ್ಯವಾಗುತ್ತದೆ. ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ ಎಂದು ಅವರು ಹೇಳಿದರು.

click me!