RSS ಅಂಗ ಸಂಸ್ಥೆ ಮೂಲಕ ಬದುಕಿನ ಎರಡನೇ ಪರ್ವ ಆರಂಭಿಸ್ತಾರಾ ಅಣ್ಣಾಮಲೈ?

By Web DeskFirst Published Oct 17, 2019, 2:54 PM IST
Highlights

5 ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ| ಸಂಘ ಪರಿವಾರದ ಅಂಗ ಸಂಸ್ಥೆ ಸೇರಿಕೊಳ್ಳುವ ಸಾಧ್ಯತೆ| ತಮಿಳುನಾಡಲ್ಲಿ ಕಾರ‍್ಯನಿರ್ವಹಿಸುತ್ತಾರಾ ಅಣ್ಣಾಮಲೈ?

ಬೆಂಗಳೂರು[ಅ.17]: ಐಪಿಎಸ್‌ ಹುದ್ದೆ ತೊರೆದ ಐದು ತಿಂಗಳ ಬಳಿಕ ಅಣ್ಣಾಮಲೈ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬುಧವಾರ ಅಂಗೀಕರಿಸಿದೆ. ಮುಂದಿನ ದಿನಗಳಲ್ಲಿ ಅವರು ಸಂಘ ಪರಿವಾರದ ಯಾವುದಾದರೊಂದು ಅಂಗ ಸಂಸ್ಥೆಯ ಮೂಲಕ ಬದುಕಿನ ಎರಡನೇ ಪರ್ವ ಆರಂಭಿಸುವ ಸಾಧ್ಯತೆಯಿದೆ.

ಅಣ್ಣಾಮಲೈ ಯಾವುದೇ ಪಕ್ಷ ಸೇರಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ, ರಾಜೀನಾಮೆಗೆ ಅಸಲಿ ಕಾರಣವೇನು..?

ಸರ್ಕಾರಿ ಹುದ್ದೆ ತ್ಯಜಿಸಿದ ದಿನದಿಂದ ಮುಂದಿನ ಹಾದಿ ಬಗ್ಗೆ ಗುಟ್ಟು ಬಿಟ್ಟು ಕೊಡದೆ ಗೌಪ್ಯವಾಗಿರಿಸಿಕೊಂಡಿರುವ ಅಣ್ಣಾಮಲೈ ಅವರು, ಸಂಘ ಪರಿವಾರದ ಸಂಘಟನೆಯಲ್ಲಿ ತಮ್ಮ ತವರು ರಾಜ್ಯ ತಮಿಳುನಾಡಿನಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಸಹ ನಡೆದಿದೆ.

Exclusive| 2019ರ ನವಭಾರತದಲ್ಲಿ ಸೇರುವ ಸುಳಿವು ಕೊಟ್ಟ ಅಣ್ಣಾಮಲೈ

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಕಳೆದ ಮೇ 28ರಂದು ತಮ್ಮ ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಈ ರಾಜೀನಾಮೆ ಪತ್ರವನ್ನು ಕೆಲ ದಿನಗಳ ಕಾಲ ತಡೆ ಹಿಡಿದಿದ್ದ ರಾಜ್ಯ ಸರ್ಕಾರವು, ಸೆ.20ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿತ್ತು. ಈ ರಾಜೀನಾಮೆ ಅಂಗೀಕಾರ ಕುರಿತು ಇದೀಗ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಅಮಿತ್ ಶಾ ಸಚಿವಾಲಯ

ಮತ್ತೊಂದು ಮಾಹಿತಿ ಅನ್ವಯ ಅಣ್ಣಾಮಲೈ ಪುಸ್ತಕವೊಂದನ್ನು ಬರೆಯುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.

2011ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಚಿಕ್ಕಮಗಂಗಳೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು.

ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ಹೇಳಿದಿಷ್ಟು..

ಕಳೆದ ವರ್ಷ ನಾನು ಮಾನಸ ಸರೋವರದ ಕೈಲಾಸ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನು ತೀವ್ರವಾಗಿ ಭಾದಿಸಿತು.

 ಅಲ್ಲದೇ ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನ ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು.  ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. 9 ವರ್ಷಗಳ ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!