Mekedatu ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧ: ಕೇಂದ್ರ ಸಚಿವ ಶೆಖಾವತ್‌

Kannadaprabha News   | Asianet News
Published : Mar 06, 2022, 04:35 AM IST
Mekedatu ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧ: ಕೇಂದ್ರ ಸಚಿವ ಶೆಖಾವತ್‌

ಸಾರಾಂಶ

*  ಕುಡಿವ ನೀರು, ಶೌಚಾಲಯ ರಾಜ್ಯಗಳ ಕರ್ತವ್ಯ *  ಜನರಿಗೆ ಆದ್ಯತೆ ಮೇರೆಗೆ ಸೌಲಭ್ಯಗಳನ್ನು ಕಲ್ಪಿಸಿ *  ಬಡವ- ಶ್ರೀಮಂತ ಬೇಲಿ ಕಿತ್ತೊಗೆಯಿರಿ  

ಬೆಂಗಳೂರು(ಮಾ.06): ಮೇಕೆದಾಟು ವಿವಾದ ಬಗೆಹರಿಸುವ ಸಂಬಂಧ ನ್ಯಾಯಾಲಯದ ಹೊರಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸೌಹಾರ್ದಯುತ ಮಾತುಕತೆಗೆ ಇಚ್ಛಿಸಿದರೆ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌(Gajendra Singh Shekhawat)  ತಿಳಿಸಿದ್ದಾರೆ. ‘ಜಲಜೀವನ್‌ ಮಿಷನ್‌’(Jal Jeevan Mission)ಅಡಿ ಜನರಿಗೆ ಆದ್ಯತೆಯ ಮೇರೆಗೆ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಭಾರತ್‌(Swachh Bharat Mission) ಯೋಜನೆಯಡಿ ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಕೇಂದ್ರ ಜಲಜೀವನ್‌ ಮಿಷನ್‌ ಮತ್ತು ಸ್ವಚ್ಛ ಭಾರತ್‌ ಯೋಜನೆ ಸಂಬಂಧ ಆರು ರಾಜ್ಯಗಳಾದ ಕರ್ನಾಟಕ(Karnataka), ಆಂಧ್ರಪ್ರದೇಶ(Andhra Pradesh) ತೆಲಂಗಾಣ(Telangana), ಕೇರಳ(Kerala), ತಮಿಳುನಾಡು, ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪ ಜತೆ ಪ್ರಾದೇಶಿಕ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಆರು ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಜಲಜೀವನ ಮಿಷನ್‌ ಅಡಿ 20,487.58 ಕೋಟಿ ರು. ಮತ್ತು ಸ್ವಚ್ಛ ಭಾರತ್‌ ಮಿಷನ್‌ ಆಡಿ 1,355.13 ಕೋಟಿ ರು. ಅನುದಾನವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ(Central Government) ಹಂಚಿಕೆ ಮಾಡಿದೆ. ಅಲ್ಲದೇ, ಆರು ರಾಜ್ಯಗಳಿಗೆ 7,798 ಕೋಟಿ ರು. ನಿರ್ಬಂಧಿತ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಲವಿವಾದಗಳಿಗೆ ಕಾಯ್ದೆ ತಿದ್ದುಪಡಿ ಪರಿಹಾರ ಎಂದ ಸಿಎಂ ಬಸವರಾಜ ಬೊಮ್ಮಾಯಿ

2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಏಳು ಸಾವಿರ ಕೋಟಿ ರು.ಗಳನ್ನು ಕುಡಿಯುವ ನೀರಿನ ಯೋಜನೆಗಳಿಗೆ ನೀಡಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕ. ಬಡವ, ಶ್ರೀಮಂತ ನಡುವಿನ ಬೇಲಿಯನ್ನು ತೆಗೆದು ರಾಜ್ಯಗಳು ಪ್ರತಿ ಮನೆಗೂ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಒದಗಿಸಿದರೆ ಇಡೀ ದೇಶವೇ ಪ್ರಶಂಸೆಗೊಳಗಾಗುತ್ತದೆ. ಜಲಜೀವನ್‌ ಮಿಷನ್‌ ಅಡಿ ಈವರೆಗೆ ಶೇ.47ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದರು.

ನೀರು ನಿರ್ವಹಣೆಗೆ ಸಮುದಾಯ ಭಾಗವಹಿಸುವಿಕೆ ಮುಖ್ಯ. ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶದಲ್ಲಿ ಫ್ಲೋರೈಡ್‌ ನೀರಿನ ಸಮಸ್ಯೆ ಇದ್ದು, ಅದನ್ನು ಪರಿಹರಿಸಬೇಕು. ಅಲ್ಲದೇ, ಕರ್ನಾಟಕದಲ್ಲಿಯೂ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು. ಕೇಂದ್ರ ಇದಕ್ಕೆ ಎಲ್ಲಾ ರೀತಿಯ ಅನುದಾನ ಒದಗಿಸಲಿದೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಭಾರತ 2014ರಲ್ಲಿ ಶೇ.39ರಷ್ಟುಸಾಧನೆ ಮಾಡಿದ್ದು, 2019ರಲ್ಲಿ ಶೇ.100ರಷ್ಟುಸಾಧನೆ ಮಾಡಲಾಗಿದೆ. ಈ ಯೋಜನೆಯಡಿ ದೇಶದಲ್ಲಿ 10.28 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ರಾಜ್ಯಗಳು ಬಯಲು ಶೌಚಾಲಯ ಮುಕ್ತವೆಂದು ಘೋಷಿಸಿವೆ. ಇದರ ಎರಡನೇ ಹಂತದಲ್ಲಿ ಗ್ರಾಮ ಪಂಚಾಯಿತಿಗಳ ಎಲ್ಲಾ ರೀತಿಯ ತ್ಯಾಜ್ಯಗಳ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

Mekedatu Padayatra: ಜೀವಂತ ಇದ್ದೇವೆಂದು ತೋರಿಸಲು ಕಾಂಗ್ರೆಸ್‌ ಪಾದಯಾತ್ರೆ: ಸವದಿ ಕಿಡಿ

ಕರ್ನಾಟಕದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಶೇ.47 ರಷ್ಟು ಪೂರ್ಣಗೊಂಡಿದ್ದು, ಮುಂದಿನ ದಿನದಲ್ಲಿ ಶೇ.100ರಷ್ಟು ಗುರಿ ಸಾಧಿಸಲು ಪ್ರಯತ್ನಿಸಬೇಕು. ತೆಲಂಗಾಣ ಮತ್ತು ಪುದುಚೇರಿ ರಾಜ್ಯಗಳು ಇದರಲ್ಲಿ ಶೇ.100ರಷ್ಟು ಸಾಧನೆ ಮಾಡಿವೆ. ಎಲ್ಲಾ ರಾಜ್ಯಗಳಲ್ಲಿಯೂ ಕುಡಿಯುವ ನೀರು ಪರೀಕ್ಷಾ ಘಟಕ ತೆರೆಯಲು ಪ್ರೋತ್ಸಾಹಿಸಲಾಗುವುದು. ಈವರೆಗೆ ಇಂತಹ 588 ಘಟಕಗಳಿದ್ದು, ಅವುಗಳಲ್ಲಿ 136 ಘಟಕಗಳು ಮಾನ್ಯತೆ ಹೊಂದಿವೆ. ಈ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 2.40 ಲಕ್ಷ ಮಹಿಳೆಯರಿಗೆ ಕಿಟ್‌ ಮೂಲಕ ಕುಡಿಯುವ ನೀರಿನ ಪರೀಕ್ಷೆಯನ್ನು ಮಾಡಲು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ ಮಿಷನ್‌ ಯೋಜನೆ ಎರಡನೇ ಹಂತದಲ್ಲಿ ದೇಶದಲ್ಲಿ 66 ಲಕ್ಷ ಮನೆಗಳಿಗೆ ಶೌಚಾಲಯ ಮತ್ತು 1.2 ಲಕ್ಷ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ ವಿಶ್ವದ ಅತಿದೊಡ್ಡ ಶೌಚಾಲಯ ಅಭಿಯಾನವಾಗಿದ್ದು, ಇದರಲ್ಲಿ 6 ಲಕ್ಷ ಗ್ರಾಮಗಳು ಬಯಲು ಮುಕ್ತ ಶೌಚಾಲಯ ಘೋಷಿಸಿವೆ. ದೇಶದಲ್ಲಿ ಅಂಗನವಾಡಿ, ಶಾಲೆ ಇತರೆ ಕಡೆಯಲ್ಲಿಯೂ ಶೌಚಾಲಯಗಳಿಗೆ ಆದ್ಯತೆ ನೀಡಲಾಗುವುದು ಎಂದು ನುಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್