ಕಾವೇರಿ ಜಲವಿವಾದ: ಪಾಲಿಸಲು ಆಗದ ತೀರ್ಪನ್ನು ಪಾಲಿಸದಿದ್ರೆ ನ್ಯಾಯಾಂಗ ನಿಂದನೆ ಆಗಲ್ಲ -ಎಚ್ಡಿಕೆ

ಪಾಲಿಸಲು ಅಸಾಧ್ಯವಾದ ತೀರ್ಪನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲ್ಲ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.


ಮಂಡ್ಯ (ಸೆ.23): ಪಾಲಿಸಲು ಅಸಾಧ್ಯವಾದ ತೀರ್ಪನ್ನು ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲ್ಲ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ನಿಲುವು ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,

Latest Videos

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು, ಇಲ್ಲದಿದ್ರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ. ಆದರೆ ಪಾಲಿಸಲು ಆಗದ ತೀರ್ಪುನ್ನು ಪಾಲಿಸದಿದ್ದರೆ ಹೇಗೆ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಪ್ರಶ್ನಿಸಿದ ಅವರು, ತಮಿಳನಾಡಿಗೆ ನೀರು ಬಿಡಲು ಆಗಲ್ಲ, ನಮ್ಮ ಜನರಿಗೆ ಕುಡಿಯಲು ನೀರಿಲ್ಲ, ಅವರಿಗೆ ಎಲ್ಲಿಂದ ಬಿಡುವುದು ಎಂದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವಂತೆ 2016 ತೀರ್ಪು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಡಿಕೆಶಿ ಅವರನ್ನ 'ಬಂಡೆ' ಅಂತಾರೆ ಸಾ.. ಎಂದ ಮಹಿಳೆ; ಬಂಡೆ ತಗೊಂಡು ಹೋಗಿ ಕೆಆರ್‌ಎಸ್ ಗೇಟ್ಗೆ ಇಟ್ಟುಬಿಡು ಎಂದ ಹೆಚ್‌ಡಿಕೆ

30 ಸಾವಿರ ಕೋಟಿ ಬೆಳೆ ನಷ್ಟ:

ರೈತರು ಸುಖಾಸುಮ್ಮನೆ ಬೀದಿಗೆ ಬರುವವರಲ್ಲ. ಈ ವರ್ಷ ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿ ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ತಮಿಳನಾಡಿಗೆ ನೀರು ಹರಿಸುತ್ತಿದೆ. ಹೀಗಾಗಿ ರೈತರ ಸಹನೆ ಕಟ್ಟೆ ಹೊಡೆದು ಧ್ವನಿ ಎತ್ತಿದ್ದಾರೆ. ಸುಮಾರು ಮೂವತ್ತು ಸಾವಿರಕೋಟಿಯಷ್ಟು ಬೆಳೆ ನಷ್ಟವಾಗಿದೆ. ಕಬ್ಬು, ಬತ್ತ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ವಾಸ್ತವ ಸ್ಥಿತಿ ತಿಳಿಸುವಲ್ಲಿ ನಮ್ಮ ಅಧಿಕಾರಿಗಳು ಲಘುವಾಗಿ ನಡೆದುಕೊಂಡಿದ್ದಾರೆ ಹಾಗಾಗಿ ನಮಗೆ ಹಿನ್ನೆಡೆಯಾಗಿದೆ. ಆದರೆ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ಜಯ ಸಿಗುವವರೆಗೂ ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಘೋಷಿಸಿದರು.

ಇದೇ ವೇಳೆ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದ ಜನರ ಉಳಿಸಲು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ನಾನು ಆ ಬಗ್ಗೆ ಸಾರ್ವಜನಿಕರ ಮುಂದೆ ಜಾಗಟೆ ಹೊಡೆಯಲ್ಲ ಎಂದರು.

ಮಂಗಳೂರು: ಎತ್ತಿನಹೊಳೆ ಬಗ್ಗೆ ಪ್ರಶ್ನಿಸಬೇಡಿ: ಉತ್ತರಿಸಲಾಗದೇ ವೀರಪ್ಪ ಮೊಯಿಲಿ ಸಿಡಿಮಿಡಿ!

click me!