ಕಾವೇರಿ ಸಮಸ್ಯೆಗೆ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣವೇ ಪರಿಹಾರ ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು
ತುಮಕೂರು (ಸೆ.23) : ಕಾವೇರಿ ಸಮಸ್ಯೆಗೆ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣವೇ ಪರಿಹಾರ ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 145 ವರ್ಷದ ಹಿಂದೆ ಈ ರೀತಿಯ ಸಮಸ್ಯೆ ತಲೆದೋರಿತ್ತಂತೆ, ಇದೀಗ ಮತ್ತೆ ಅದು ಪುನಾರ್ವತನೆಯಾಗಿದೆ. ರಾಜ್ಯದಲ್ಲಿ 75 ಪರ್ಸೆಂಟ್ ಬರವಿದೆ, ಯಾವ ಡ್ಯಾಂನಲ್ಲೂ ನೀರಿಲ್ಲ, ಹೀಗಾಗಿ ಮೇಕೆದಾಟು(Mekedatu project) ಬಳಿ ಸ್ಟೋರೆಂಜ್ ಡ್ಯಾಂ ಕಟ್ಟಿ, ಇಂತಹ ಸಂದರ್ಭದಲ್ಲಿ ಆ ನೀರನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.
ಮೇಕೆದಾಟುವಿನಲ್ಲಿ ಡ್ಯಾಂಕಟ್ಟಿ 42 ಟಿಎಂಸಿ ನೀರು ಸಂಗ್ರಹಿಸಬಹುದು, ಅಲ್ಲಿ ಡ್ಯಾಂ ಕಟ್ಟಿದ್ರೆ, ನಾವೂ 5 ಟಿಎಂಸಿ ನೀರು ಬಳಸಿಕೊಳ್ಳಬಹುದು., ಉಳಿದ ನೀರು ತಮಿಳುನಾಡಿಗೆ ಉಪಯೋಗ ಆಗುತ್ತೆ, ಡ್ಯಾಂ ಕಟ್ಟುವ ವಿಚಾರದಲ್ಲಿ ರಾಜ್ಯದಲ್ಲಿ ತ್ವರಿತವಾಗಿ ಈ ಯೋಜನೆಗೆ ಚಾಲನೆ ನೀಡಲಿಲ್ಲ, ತಮಿಳುನಾಡಿನವರಿಗೆ ನೀರು ಉಪಯೋಗಿಸಿಕೊಳ್ಳುವುದಕ್ಕಿಂತ ರಾಜಕೀಯವೇ ಹೆಚ್ಚು, ತಮಿಳುನಾಡಿನ 8 ರಿಂದ 12 ಜಿಲ್ಲೆಗಳು ಕಾವೇರ ನೀರಿ(Cauvery water)ನ ವ್ಯಾಪ್ತಿಗೆ ಬರುತ್ತವೆ. ಆ ಜಿಲ್ಲೆಗಳ ಜನರಿಗೆ ಕಾವೇರಿ ನೀರಿನ ಸಂಟಿಮೆಂಟ್ ಇದೆ. ಆ ವ್ಯಾಪ್ತಿಯಲ್ಲಿ 13 ಪಾರ್ಲಿಮೆಂಟರಿ ಸೀಟ್ ಗಳಿವೆ, ಇಂತಹ ಸಂದರ್ಭ ಬಂದಾಗ ಪಾರ್ಲಿಮೆಟ್ ನಲ್ಲಿ ಅವರೆಲ್ಲಾರು ಒಟ್ಟಾಗಿ ಹೋರಾಟ ಮಾಡ್ತಿದ್ದಾರೆ, ವಿರೋಧ ಮಾಡ್ತಾರೆ.
ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ
ಬ್ರಿಟಿಷರ ಕಾಲದಿಂದಲ್ಲೂ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮೋಸ ಆಗಿದೆ. ಮೇಕೆದಾಟುವಿನಲ್ಲಿ ನಾವು ಕೃಷಿ ಮಾಡಲು ಆಗಲ್ಲ, ಅಲ್ಲಿ ಕಾಡಿದೆ. ಅಲ್ಲಿ ಡ್ಯಾಂ ಕಟ್ಟಿ ನೀರು ಕೊಡ್ತಿವಿ ಅಂದ್ರೆ ಬೇಡ ಅಂತಾರೆ. ನಮ್ಮ ಕಣ್ಣು ಹೋದ್ರು ಚಿಂತೆಯಿಲ್ಲ, ನಿಮ್ಮ ಕಣ್ಣು ಇರಬಾರ್ದು ಅನ್ನೋ ಮನಸ್ಥಿತಿ ತಮಿಳುನಾಡಿನವರದ್ದು, ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಎಸ್ಟೀಮೆಟ್ ಡಿಪಿಆರ್ ಆಗಿ ಎಲ್ಲಾವೂ ಆಗಿದೆ. ಆದರೆ ಡ್ಯಾಂ ಮಾಡಲಾಗುತ್ತಿಲ್ಲ, ಹಿಂದೆ ಡ್ಯಾಂ ಕಟ್ಟಲು ಕೇಂದ್ರ ನೀರಾವರಿ ಸಚಿವರು ಪರ್ಮಿಷನ್ ಕೊಟ್ಟರು, ಆಗ ಪಾರ್ಲಿಮೆಂಟ್ ನಲ್ಲಿ ತಮಿಳುನಾಡು ಸಂಸದರು ಗಲಾಟೆ ಎಬ್ಬಿಸಿದ್ರು. 40 ವರ್ಷದಿಂದಲ್ಲೂ ಮೇಕೆದಾಟು ಕಟ್ಟಬಾರದು ಅಂತ ಮೊಂಡು ಮಾಡ್ತಾರೆ, ನೀರು ಸಮುದ್ರಕ್ಕೆ ಹೋದ್ರು ಪರವಾಗಿಲ್ಲ, ನಮಗೆ ಬರುವ ನೀರು ನಮಗೆ ಬರ್ಬೇಕು ಅಂತಾರೆ.
ಫೆಡರಲ್ ವ್ಯವಸ್ಥೆಯಲ್ಲಿದ್ರೂ ತಮಿಳುನಾಡಿನದ್ದು ಜಗಳ ಗಂಟಿತನ,ನಮ್ಮಲ್ಲಿ ಕಾನೂನು ತಂಡವನ್ನು ವ್ಯವಸ್ಥಿತವಾಗಿ ಬೆಳೆಸಿಕೊಂಡು ಬಂದಿಲ್ಲ., ದೆಹಲಿಯವರಿಗೊ, ತಮಿಳುನಾಡಿನ ವಕೀಲರಿಗೊ ಕೇಸ್ ಕೊಡ್ತಾರೆ. ಹಿಂದೆ ರಾಮಸ್ವಾಮಿ ಅನ್ನೊ ತಮಿಳುನಾಡು ವಕೀಲರನ್ನು ನೇಮಿಸಿದ್ರು ಅಂತಹ ಪ್ರಸಂಗ ಕೂಡ ನಮ್ಮಲ್ಲಿದೆ. ಕಾನೂನು ಹೋರಾಟದಲ್ಲಿ ನಾವು ವೀಕ್ ಆಗಿದ್ದೇವೆ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತ ಕರ್ನಾಟಕ! ವಕೀಲರ ವಾದ ಇಲ್ಲಿದೆ ನೋಡಿ...
ಕಾನೂನು ಹೋರಾಟದ ಜೊತೆಹೆ ಪೊಲಿಟಿಕಲ್ ಇಂಪ್ಲೂಯನ್ಸ್ ಬೇಕಿದೆ. ಮೇಕೆದಾಟು ಬಳಿ ಡ್ಯಾಂ ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ, ಸಿದ್ದರಾಮಯ್ಯ(CM Siddarmaaiah) ಒಬ್ಬರೇ ಅಲ್ಲ, ಹಿಂದಿನಿಂದ ಇದ್ದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್ ಎಲ್ಲಾರು ತಪ್ಪು ಮಾಡಿದ್ದಾರೆ. ಈಗಾಗಿ ನಾವು ಸೊರುಗುವಂತಾಗಿದೆ. ಸುಪ್ರೀಂ ಕೋರ್ಟ್(Cauvery water dispute supreme court) ಗೆ ಇವರೇ ಅರ್ಜಿ ಹಾಕಿದ್ರು, ಅದನ್ನು ಸರಿಯಾಗಿ ವಾದ ಮಾಡಲಿಲ್ಲ. ಆನ್ ಲೈನ್ ಲ್ಲೇ ಅಧಿಕಾರಿಗಳು ಮಿಟಿಂಗ್ ಮಾಡಿದ್ರು, ಆನ್ ಲೈನ್ ನಲ್ಲಿ ಕುಳಿತು ಏನು ಮಾಡಲು ಸಾಧ್ಯವಿಲ್ಲ, ಅದಕ್ಕೆ ನಾವು ಫೇಲೂರು ಆಗಿದ್ದೇವೆ. ಸರ್ಕಾರದ ಅಧಿಕಾರಿಗಳು ಮಾಡಿರುವ ತಪ್ಪೇ ಇಂದಿನ ಪರಿಸ್ಥಿತಿ ಕಾರಣ ಎಂದರು