ಬೆಂಗಳೂರು ಬಂದ್: ಸ್ವರೂಪ ನೋಡ್ಕೊಂಡು ಬಸ್ ಸಂಚಾರ ಬಗ್ಗೆ ಅಂತಿಮ ನಿರ್ಧಾರ- ರಾಮಲಿಂಗಾರೆಡ್ಡಿ

Published : Sep 24, 2023, 07:00 PM ISTUpdated : Sep 24, 2023, 07:04 PM IST
ಬೆಂಗಳೂರು ಬಂದ್: ಸ್ವರೂಪ ನೋಡ್ಕೊಂಡು ಬಸ್ ಸಂಚಾರ ಬಗ್ಗೆ ಅಂತಿಮ ನಿರ್ಧಾರ- ರಾಮಲಿಂಗಾರೆಡ್ಡಿ

ಸಾರಾಂಶ

ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿರುವ ಬೆಂಗಳೂರು ಬಂದ್ ಸ್ವರೂಪ ನೋಡಿಕೊಂಡು ಸರ್ಕಾರಿ ಬಸ್ ಗಳ ಸಂಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಸೆ.24):- ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿರುವ ಬೆಂಗಳೂರು ಬಂದ್ ಸ್ವರೂಪ ನೋಡಿಕೊಂಡು ಸರ್ಕಾರಿ ಬಸ್ ಗಳ ಸಂಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಗಳೂರು ಬಂದ್(Cauvery dispute bengaluru bandh) ದಿನದ ಬಸ್ ಸಂಚಾರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಬಂದ್ ಕರೆಯ ಸ್ವರೂಪ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಹಿಂದೆಯೂ ಸಹ ರಾಜ್ಯದ ನೀರು, ಭಾಷೆಯ ಬಗ್ಗೆ ಸಮಸ್ಯೆಯ ಕುರಿತು ಬಂದ್ ಕರೆ ಕೊಟ್ಟಾಗ ಬಹುತೇಕರೆಲ್ಲಾ ಟ್ರಾನ್ಸಪೋರ್ಟ್ ಗಳು ಭಾಗವಹಿಸಿದ್ದವು ಆದರೆ ಈ ಸಾರಿ ಏನು ಮಾಡುತ್ತಾರೋ ನೋಡೋಣ ಎಂದರು.

ಸಿಎಂ ಹುಕುಂ.. ಡಿಸಿಎಂ ಡಿಶುಂ ಡಿಶುಂ.. ಕಾಂಗ್ರೆಸ್‌ನಲ್ಲಿ ಏನಾಗ್ತಿದೆ..?

ಬೆಂಗಳೂರು ಬಂದ್ ನಡುವೆ ಬಸ್ ಓಡಿಸೋ ಬಗ್ಗೆ ಈಗಲೇ ಏನು ಗೊತ್ತಾಗಲ್ಲ. ಬಂದ್ ಕುರಿತು ಅವರು ಯಾವ ಮಟ್ಟದಲ್ಲಿ ಮಾಡ್ತಾರೋ ನೋಡಬೇಕು, ಪ್ರತಿಭಟನೆ ಮಾಡ್ತಾರಾ, ಸಾಂಕೇತಿಕವಾಗಿ ಮಾಡ್ತಾರಾ ಅಥವಾ ಪೂರ್ತಿ ಬಸ್ ನಿಲ್ಲಸ್ತಾರಾ ಈ ಬಗ್ಗೆ ಯುನಿಯನ್ಸ್ ಇದ್ದಾರಲ್ಲ, ಅವರು ತೀರ್ಮಾನ ಮಾಡ್ತಾರೆ. ಜನರಲ್ ಆಗಿ ನಮ್ಮ ರಾಜ್ಯಕ್ಕೆ ಅನ್ಯಾಯ ಆದಂತಹ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಸಹ ಭಾಗವಹಿಸ್ತಾರೆ. ನಾನು ನಮ್ಮ ರೋಡ್ ಟ್ರಾನ್ಸಪೋರ್ಟ್ ಕಾರ್ಪೋರೇಷನಗಳ ಮಾಹಿತಿ ಪಡೆದಿಲ್ಲ, ನಾನು ತಿಳಿದುಕೊಂಡು ಹೇಳುತ್ತೇನೆ ಎಂದರಲ್ಲದೆ, ನೆಲ, ಜಲದ ಬಗ್ಗೆ ಅನ್ಯಾಯ ಆದಾಗ ಹಿಂದೆಯೂ ಎಲ್ಲರೂ ಪ್ರತಿಭಟನೆ ಮಾಡಿದ್ದಾರೆ, ನಮ್ಮ ಅಸೋಸಿಯೇಷನ್ ನವರೆಲ್ಲಾ ಮಾಡಿದ್ದಾರೆ. ಈ ಸಾರಿ ಏನು ಮಾಡ್ತಾರೋ ನೋಡೋಣ ಎಂದರು. 

ಬಿಜೆಪಿ ನಾಯಕರೆಲ್ಲಾ ಎಡಬಿಡಂಗಿ ನಾಯಕರು, ಪ್ರಧಾನಿ ಮುಂದೆ ಮಾತನಾಡುವ ತಾಕತ್ ಇಲ್ಲದವರು.

ಇನ್ನು ಕಾವೇರಿ ನೀರು ವಿತರಣೆ ಮಾಡುತ್ತಿರೋ ಕಾಂಗ್ರೆಸ್ ವಿರುದ್ದ ಬಿಜೆಪಿ ಮುಖಂಡರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅಯ್ಯೋ ಬಿಜೆಪಿಯವರ ಮಾತೆಲ್ಲ ಯಾಕೆ ಕೇಳೋಕೆ ಹೋಗ್ತಿರಿ, ಅವರೆಲ್ಲ ಎಡಬಿಡಂಗಿ ನಾಯಕರು ಅವರು, ಹೋಗಿ ಪ್ರಧಾನಮಂತ್ರಿ ಮುಂದೆ ಮಾತಾಡುವ ತಾಕತ್ ಇವರಿಗೆ ಯಾರಿಗೂ ಇಲ್ಲ. ಯಾರಾದರೂ ನೆಲ ಜಲದ ಬಗ್ಗೆ ಪಾರ್ಲಿಮೆಂಟಲ್ಲಿ ಬಿಜೆಪಿಯವರು ಮಾತಾಡ್ತಾರಾ ಇಲ್ಲ,
ಯಾರು ಮಾತಾಡೋದಿಲ್ಲ. ಸುಮ್ನೆ ಇಲ್ಲಿ ಮಾದ್ಯಮದವರ ಮುಂದೆ ಮಾತಾಡ್ತಾರೆ ಅಷ್ಟೆ, ಅದು ನೀವು ತೋರಿಸೋದರಿಂದ ಮಾತಾಡ್ತಾರೆ. ನೀವು ತೋರಿಸದೆ ಇದ್ರೆ ಮಾತಾಡೋದೆ ಇಲ್ಲ ಅವರು ಎಂದರು.

ಇನ್ನು ಕಾವೇರಿ ನೀರು ಬಗ್ಗೆ ರಾಜ್ಯ ಸರಕಾರದ ವಿರುದ್ದ ಯಾರೂ ಹೋರಾಟ ಮಾಡುತ್ತಿಲ್ಲ, ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡ್ತಿರೋದು. ರಾಜ್ಯ ಸರಕಾರದ ವಿರುದ್ದ ಯಾಕೆ ಮಾಡ್ತಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಡಿಸಿಎಂ ಸ್ಥಾನದ ಬಗ್ಗೆ ಮಾತನಾಡುವುದು ಅನವಶ್ಯಕ, ನಾನು ಡಿಸಿಎಂ ಸ್ಥಾನಕ್ಕೆ ಕಾರ್ಡ್ ಅಪ್ಲೈ ಮಾಡಲ್ಲ.

ಇನ್ನು ಮೂರು ಡಿಸಿಎಂ ಸ್ಥಾನ ನೀಡಬೇಕು ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ನಡೆಕೊಂಡು ಹೋಗ್ತಿದೆ, ನಡೆಕೊಂಡು ಹೋಗ್ಲಿ, ಈಗ ಇದೆಲ್ಲ ಮಾತಾಡೋದು ಅನವಶ್ಯಕ. ಸಾಮಾಜಿಕ ನ್ಯಾಯದ ಅಡಿ ಮೂರು ಡಿಸಿಎಂ ಆದ್ರೆ ಸರಿ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದೆಲ್ಲ ಹೈಕಮಾಂಡ್ ಗೆ ಬಿಟ್ಟಿದ್ದು, ನಾನು ಅದ್ರ ಬಗ್ಗೆ ಮಾತಾಡೋಕೆ ಹೋಗಲ್ಲ. ಆದರೆ ಡಿಸಿಎಂ ಸ್ಥಾನಕ್ಕೆ ನಾನು ಕಾರ್ಡ್ ಅಪ್ಲೈ ಮಾಡಲ್ಲ. ಮಂತ್ರಿ ಮಾಡಿ ಅಂತಾನೂ ಯಾರನ್ನೂ ಕೇಳಿಲ್ಲ ಎಂದ ರಾಮಲಿಂಗಾರೆಡ್ಡಿ.

ಮೂರು ತಿಂಗಳಲ್ಲೇ ಸರ್ಕಾರ ಕುಂಟುತ್ತಾ ಸಾಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಸರ್ಕಾರ ಕುಂಟುತ್ತಿಲ್ಲ, ಓಡ್ತಿದೆ. ಶಕ್ತಿ ಕಾರ್ಯಕ್ರಮ ದಿಂದ 65 ಕೋಟಿ ಜನ ಓಡಾಡಿದ್ದಾರೆ. ಮೊನ್ನೆ ನೂರು ದಿನಕ್ಕೆ 65 ಕೋಟಿ ಆಗಿತ್ತು, ಗೃಹಲಕ್ಷಿ 1 ಕೋಟಿ 40 ಲಕ್ಷ ಜನ‌ ರೆಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ.

ಕುರುಬೂರು ಶಾಂತಕುಮಾರ್ V/s ಕನ್ನಡ ಸಂಘಟನೆಗಳು! ಪ್ರತಿಷ್ಟೆಯ ಕದನಕ್ಕೆ ಡಬಲ್ ಬಂದ್!

ಗೃಹಜ್ಯೋತಿ 1 ಕೋಟಿ ಚಿಲ್ಲರೆ ಜನ ಮಾಡ್ಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಇರುವವರಿಗೆಲ್ಲ ಅಕ್ಕಿ ಬದಲು ಹಣ ಹೋಗ್ತಿದೆ. ನರೇಂದ್ರ ಮೋದಿಯವ್ರು 9 ವರ್ಷದ ಮುಂಚೆ ಏನೇನು ಆಶ್ವಾಸನೆ‌ ಕೊಟ್ರು. ಈ ವಿದೇಶದಲ್ಲಿರುವ ಕಪ್ಪು ಹಣ ತಂದುಬಿಡ್ತೀವಿ. ಎಲ್ಲರ ಅಕೌಂಟ್ ಗೆ 15 ಲಕ್ಷ ಹಾಕ್ತೀವಿ ಅಂದ್ರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂದ್ರು. ಕೊಟ್ರಾ? ಕೊಡಲಿಲ್ಲ. ಪೆಟ್ರೋಲ್ 40 ರೂಗೆ ಕೊಡ್ತೀವಿ ಅಂದ್ರು, ಡಿಸೇಲ್ 30ರೂಗೆ ಕೊಡ್ತೀವಿ, ಬೆಲೆಗಳನ್ನೆಲ್ಲ ಇಳಿಸ್ತೀವಿ ಅಂದ್ರು. ಇದನ್ನ ಇಳಿಸಿದ್ರಾ ಮೋದಿಯವ್ರು? ಯಾವುದನ್ನು ಇಳಿಸಿಲ್ಲ. ನಾವು ನುಡಿದಂತೆ ನಡೆದಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ